ಆಟೋದಲ್ಲಿ ಗೋಮಾಂಸ ಸಾಗಾಟ – ಇಬ್ಬರ ಬಂಧನ

ಚಿಕ್ಕಮಗಳೂರು: ಹಸುವನ್ನ ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆಟೋ ಸಮೇತ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಬಾಳೆಹೊನ್ನೂರು ಸಮೀಪದ ದೇವದಾನ ಗ್ರಾಮದಿಂದ ವಿಜಯಗಿರಿ ಎಸ್ಟೇಟ್ ಹೋಗುವ ಮಾರ್ಗ ಮಧ್ಯೆ ಹಸುವನ್ನ ಕೊಂದು ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದರು. ದೇವದಾನ ಸಮೀಪದ ಕಡ್ಲೆಮಕ್ಕಿ ಗ್ರಾಮದ ಇಬ್ರಾಹಿಂ ಹಾಗೂ ಷರೀಫ್ ಎಂಬುವರು ಅಕ್ರಮವಾಗಿ ಹಸುವನ್ನ ಕೊಂಡು ಕಾಡಿನಲ್ಲಿ ಮಾಂಸ ಮಾಡಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಮಾಂಸವನ್ನ ಲಗೇಜ್ ಆಟೋದಲ್ಲಿ ತಂದು ಮಾರ್ಗ ಮಧ್ಯೆ ಸಿಗುವ ಹಳ್ಳಿಗಳಲ್ಲಿ ಮಾರಾಟಕ್ಕೆ ಮುಂದಾಗಿದ್ದರ. ವಿಷಯ ತಿಳಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಆಟೋ ಹಾಗೂ ಗೋಮಾಂಸವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಗೋಕಳ್ಳತನ ಯಥೇಚ್ಛವಾಗಿದ್ದು, ಮೇಯಲು ಹೋದ ರಾಸುಗಳು ಮನೆಗೆ ಬಂದಾಗಲೇ ಬಂದವು ಎಂದು ಗ್ಯಾರಂಟಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಗೋಕಳ್ಳತನ ಕೂಡ ಹೆಚ್ಚಾಗಿದ್ದು ರೈತರು ರಾಸುಗಳನ್ನ ಸಾಕುವುದಕ್ಕಿಂತ ಅವುಗಳನ್ನ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಬಂಧಿತರಿಬ್ಬರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಆಟೋದಲ್ಲಿ ಗೋಮಾಂಸ ಸಾಗಾಟ – ಇಬ್ಬರ ಬಂಧನ appeared first on Public TV.

Source: publictv.in

Source link