ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಆರೋಪ; ವೈದ್ಯನನ್ನು ಬಂಧಿಸಿದ ಪೊಲೀಸ್ | Auto driver allegates assault on him and Bengaluru police arrest doctor


ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಆರೋಪ; ವೈದ್ಯನನ್ನು ಬಂಧಿಸಿದ ಪೊಲೀಸ್

ಸಾಂದರ್ಭಿಕ ಚಿತ್ರ

ಬೆಂಗಳೂರು: ಆಟೋ ಚಾಲಕನ ಮೇಲೆ ವೈದ್ಯರ ತಂಡದಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಲಹಂಕ ನಿವಾಸಿ 26 ವರ್ಷದ ಮುರುಳಿ ಹಲ್ಲೆಗೊಳಗಾದ ಆಟೋ ಚಾಲಕ. ಸದ್ಯ ಚಾಲಕ ನೀಡಿದ‌ ದೂರಿನ ಮೇರೆಗೆ ಖಾಸಗಿ ಆಸ್ಪತ್ರೆಯೊಂದರ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ವೈದ್ಯರು ಪಾರ್ಟಿ ಮಾಡುತ್ತಿದ್ದರು. ಅದೇ ಹೋಟೆಲ್ಗೆ ಅಡುಗೆ ವಸ್ತುಗಳನ್ನು ಸಾಗಿಸಲು ಆಟೋ ಚಾಲಕ ಹೋಟೆಲ್ಗೆ ಹೋಗಿದ್ದ. ಈ ವೇಳೆ ಪಾರ್ಟಿ ಮಾಡುತ್ತಿದ್ದ ವೈದ್ಯರು ತಮ್ಮ ಮತ್ತೊಬ್ಬ ವೈದ್ಯ ಸ್ನೇಹಿತನನ್ನು ಆಟೋದಲ್ಲಿ ಕರೆದುಕೊಂಡು ಬರುವಂತೆ ಹೇಳಿದ್ರು. ಆದ್ರೆ ಆಟೋ ಚಾಲಕ ಇದಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರ ಸಂಬಂಧ ವೈದ್ಯರ ಗುಂಪು ಆಟೋ ಚಾಲಕನ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ ಎಂದು ಚಾಲಕ ಆರೋಪ ಮಾಡಿದ್ದಾನೆ.

ಪೂಜಾರಿ, ಪೂಜಾರಿಯ ಸೇವಕ ನಿಗೂಢವಾಗಿ ಸಾವು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿಯ ಕೊಳಾಲಮ್ಮ ದೇವಾಲಯದಲ್ಲಿ ಪೂಜಾರಿ ಮತ್ತು ಪೂಜಾರಿಯ ಸೇವಕನ ನಿಗೂಢ ಸಾವಾಗಿದೆ. ಶ್ರೀಧರ್(31), ಲಕ್ಷ್ಮೀಪತಿ(33) ಮೃತರು. ಸದ್ಯ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿನ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

ಹತ್ಯೆಗೈದು ಪತ್ನಿಯನ್ನು ಭದ್ರಾ ಕಾಲುವೆಗೆ ಹಾಕಿದ್ದ ಪತಿ ಸೆರೆ
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಸಗೋಡು ಗ್ರಾಮದ ನಿವಾಸಿ ಮಾರುತಿ ತನ್ನ ಪತ್ನಿಯನ್ನು ಕೊಲೆ ಮಾಡಿ ಭದ್ರಾ ಕಾಲುವೆಗೆ ಹಾಕಿ ತಲೆ ಮರೆಸಿಕೊಂಡಿದ್ದು ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಾರುತಿ(29) ಬಂಧಿತ ಆರೋಪಿ.

ಪತ್ನಿ ಶೀಲ ಶಂಕಿಸಿ ಅ.11ರಂದು ಚೌಡಮ್ಮ ಅಲಿಯಾಸ್ ಕವಿತಾ(25) ಹತ್ಯೆ ಮಾಡಿ ಭದ್ರಾ ಕಾಲುವೆಗೆ ಹಾಕಿದ್ದ. ಹರಿಹರ ತಾಲೂಕಿನ ಮಿಡ್ಲಕಟ್ಟೆ ಬಳಿ ಭದ್ರಾ ಚಾನಲ್ ನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿ ಶವ ಕವಿತಾಳದೆಂದು ಪತ್ತೆ ಮಾಡಿದ್ದರು. ವಿಚಾರಣೆ ಬಳಿಕ ಪತಿಯೇ ಕೊಲೆ ಮಾಡಿರುವ ಸತ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮತ್ತೊಂದೆಡೆ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಶಾಲೆಯಲ್ಲಿ 10 ವರ್ಷದ ಬಾಲಕಿಗೆ 30 ವರ್ಷದ ವ್ಯಕ್ತಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಶಾಲೆ ಬಿಟ್ಟ ಬಳಿಕ ಇಲ್ಲಿಯೇ ಹೋಂ ವರ್ಕ್ ಮಾಡುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದು ಹೊನ್ನಾಳಿ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿಕಲಚೇತನನ ಸೋಗಿನಲ್ಲಿ ಭಿಕ್ಷೆ ಬೇಡುತ್ತಿದ್ದವನಿಗೆ ಗೂಸಾ
ಹಾಸನ ನಗರದ ಕೆ.ಆರ್.ಪುರಂನಲ್ಲಿ ವಿಕಲಚೇತನನ ಸೋಗಿನಲ್ಲಿ ಭಿಕ್ಷೆ ಬೇಡುತ್ತಿದ್ದವನಿಗೆ ಸ್ಥಳೀಯರು ಥಳಿಸಿದ ಘಟನೆ ನಡೆದಿದೆ. ಒಂದು ಕೈ ಇಲ್ಲ ಎಂದು ಸುಳ್ಳು ಹೇಳಿಕೊಂಡು ಭಿಕ್ಷೆ ಬೇಡುತ್ತಿದ್ದವರಿನಿಗೆ ಸ್ಥಳೀಯರು ಹೊಡೆದು ಬುದ್ಧಿ ಹೇಳಿದ್ದಾರೆ. ಮತ್ತೊಮ್ಮೆ ಹೀಗೆ ಮಾಡಿದ್ರೆ ಪೊಲೀಸರಿಗೊಪ್ಪಿಸುವುದಾಗಿ ವಾರ್ನ್ ಮಾಡಿದ್ದಾರೆ.

ಇದನ್ನೂ ಓದಿ: Nusrat Jahan ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ; ಮದುವೆ ವಿವಾದದ ಬಗ್ಗೆ ಮೌನ ಮುರಿದ ನುಸ್ರತ್ ಜಹಾನ್

TV9 Kannada


Leave a Reply

Your email address will not be published. Required fields are marked *