ಆಟೋ ಚಾಲಕ-ಬೈಕ್ ಟ್ಯಾಕ್ಸಿ ಪ್ರಯಾಣಿಕನ ಮಧ್ಯೆ ಜಟಾಪಟಿ; ಇಬ್ಬರನ್ನೂ ಕಬ್ಬನ್ ಪಾರ್ಕ್ ಟ್ರಾಫಿಕ್ ಠಾಣೆಗೆ ಕರೆದೊಯ್ದ ಪೊಲೀಸರು
ಬೆಂಗಳೂರು: ಆಟೋ ಚಾಲಕ ಹಾಗೂ ಬೈಕ್ ಟ್ಯಾಕ್ಸಿ ಸವಾರನ ನಡುವೆ ಭಾರಿ ಜಟಾಪಟಿ ನಡೆಯುತ್ತಿದೆ. ಆಟೋ ಚಾಲಕರು ರ್ಯಾಪಿಡೋ ಬೈಕ್ ಬುಕ್ ಮಾಡಿ ಚಾಲಕರ ಜೊತೆ ಗಲಾಟೆಗೆ ಇಳಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಸದ್ಯ ಇಂದು ಇದೇ ರೀತಿಯ ಘಟನೆ ಮರು ಕಳಿಸಿದ್ದು ಗುಂಪು ಸೇರಿದ್ದ ಕೆಲ ಆಟೋ ಚಾಲಕರು, ರ್ಯಾಪಿಡೋ ಬೈಕ್ ಸವಾರರನ್ನ ಕಬ್ಬನ್ ಪಾರ್ಕ್ ಟ್ರಾಫಿಕ್ ಠಾಣೆಗೆ ಪೊಲೀಸರು ಕರೆದೊಯ್ದು ಘಟನೆ ನಡೆದಿದೆ.
ಬೈಕ್ ಟ್ಯಾಕ್ಸಿಯಲ್ಲಿ ಕಡಿಮೆ ಬಾಡಿಗೆಗೆ ಸೇವೆ ನೀಡಲಾಗುತ್ತಿದೆ. ವೈಟ್ ಬೋರ್ಡ್ ನಲ್ಲಿ ಕಮರ್ಶಿಯಲ್ ಸೇವೆ ನೀಡುತಿದ್ದಾರೆ. ಆದ್ರೆ ಆಟೋಗೆ ಟ್ಯಾಕ್ಸ್ ಕಟ್ಟಿ ಎಲ್ಲೋ ಬೋರ್ಡ್ ಚಾಲನೆ ಮಡುತಿದ್ದೇವೆ. ರ್ಯಾಪಿಡೋ ಬೈಕ್ಸ್ ಕಾನೂನು ಬಾಹಿರ ಸೇವೆ ನೀಡುತಿದ್ದಾರೆ ಎಂದು ರ್ಯಾಪಿಡೋ ಬೈಕ್ ಸವಾರರ ಮೇಲೆ ಆಟೋ ಚಾಲಕರು ವ್ಯಕ್ತಪಡಿಸಿದ್ದಾರೆ.
ರ್ಯಾಪಿಡೋ ಬೈಕ್ ಆ್ಯಪ್ ನಲ್ಲಿ ನಮಗೆ ವೈಟ್ ಬೋರ್ಡ್ ಬೈಕ್ ಗೆ ಅವಕಾಶ ನೀಡಿದ್ದಾರೆ. ಆದ್ದರಿಂದ ನಾವು ಕೆಲಸ ಮಾಡುತಿದ್ದೇವೆ, ಅವರಿಗೆ ಸಮಸ್ಯೆ ಇದ್ದಲ್ಲಿ ರ್ಯಾಪಿಡೋ ಬೈಕ್ ವಿರುದ್ಧ ದೂರು ನೀಡಲಿ ಎಂದು ಬೈಕ್ ಚಾಲಕರು ತಿಳಿಸಿದ್ದಾರೆ. ಈ ವೇಳೆ ರ್ಯಾಪಿಡೋ ಬೈಕ್ ಗೆ ಅವಕಾಶ ನೀಡಲ್ಲ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು ಗುಂಪು ಸೇರಿದ್ದ ಕೆಲ ಆಟೋ ಚಾಲಕರು, ರ್ಯಾಪಿಡೋ ಬೈಕ್ ಸವಾರರನ್ನ ಕಬ್ಬನ್ ಪಾರ್ಕ್ ಟ್ರಾಫಿಕ್ ಠಾಣೆಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಕಳೆದ ವಾರ ಕೂಡ ಇದೇ ರೀತಿಯ ಘಟನೆ ಬೆಂಗಳೂರಿನ ಗಿರಿ ನಗರದಲ್ಲಿ ಸಂಭವಿಸಿತ್ತು. ಆಟೋ ಚಾಲಕರು ಱಪಿಟೋ ಬೈಕ್ ಟ್ಯಾಕ್ಸಿ ಸವಾರರನ್ನು ಕರೆಸಿ ಆಟೋ ಚಾಲಕರಿಗೆ ನಿಮ್ಮಂದ ನಷ್ಟವಾಗುತ್ತಿದೆ ಎಂದು ಗಲಾಟೆ ಮಾಡಿದ್ದರು. ಈಗ ಇದೇ ರೀತಿ ಮತ್ತೊಂದು ಘಟನೆ ನಡೆದಿದೆ. ಇತ್ತೀಚೆಗೆ ಅನೇಕ ಮಂದಿ ಱಪಿಟೋ ಬೈಕ್ ಟ್ಯಾಕ್ಸಿ ಮೊರೆ ಹೋಗಿದ್ದು ಆಟೋ ಬಳಸುವುದು ಕಡಿಮೆ ಆಗಿದೆ. ಇದರಿಂದ ಆಟೋ ಚಾಲಕರಿಗೆ ಭಾರಿ ಹೊಡೆತ ಬಿದ್ದಿದೆ.