ಬೆಂಗಳೂರು: ಆಡಿಯೋ ರಿಲೀಸ್ ಆಗಿರುವ ಬಗ್ಗೆ ಸಂದೇಶ್ ಹೋಟೆಲ್ ಮಾಲೀಕ ನನ್ನ ಸಂಪರ್ಕ ಮಾಡಿಲ್ಲ. ಒ‌ಂದು ವೇಳೆ ಸಂದೇಶ್ ನನ್ನ ಸಂಪರ್ಕ ಮಾಡಿದ್ದರೂ ಯಾವುದೇ ಕಾರಣಕ್ಕೂ ನಾನು ಕಾಂಪ್ರೂ ಆಗಲ್ಲ ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

ಆಡಿಯೋ ರಿಲೀಸ್ ಆಗಿದೆ, ಇಷ್ಟಾದರೂ ಮೈಸೂರಿನಲ್ಲಿ ಇನ್ನೂ ಎಫ್ಐಆರ್ ಆಗಿಲ್ಲ. ಇದರಿಂದಲೇ ತಿಳಿಯುತ್ತೆ ಮೈಸೂರು ಪೊಲೀಸರ ವೈಫಲ್ಯ. ಈ ಪ್ರಕರಣದಲ್ಲಿ ಬಡವರಿಗೆ ನ್ಯಾಯ ಸಿಗುವವರೆಗೂ ನಾನು ಹೋರಾಟ ಮಾಡ್ತೀನಿ. ಇವತ್ತು ನಾನು ಯಾವುದೇ ಸುದ್ದಿಗೋಷ್ಠಿ ನಡೆಸಲ್ಲ ಎಂದರು.

ನಮ್ಮ ವಕೀಲರ ಸಲಹೆಯಂತೆ ಏನ್ ಮಾಡಬೇಕು ಅದನ್ನ ಮಾಡ್ತೇನೆ. ತನಿಖೆಗಾಗಿ ಪೊಲೀಸರು ನನ್ನ ಸಂಪರ್ಕ ಮಾಡಿದ್ದರೆ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡ್ತೀನಿ. ನನ್ನ ಬಳಿಯಿರುವ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡ್ತೀನಿ ಎಂದು ನ್ಯೂಸ್ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

The post ‘ಆಡಿಯೋ ರಿಲೀಸ್ ಆಗಿದೆ.. ಇನ್ನೂ FIR ಆಗಿಲ್ಲ, ನಾನಂತೂ ಕಾಂಪ್ರೂ ಆಗಲ್ಲ’ ಎಂದ ಇಂದ್ರಜಿತ್ appeared first on News First Kannada.

Source: newsfirstlive.com

Source link