ಆಡಿಯೋ ಲಾಂಚ್​ ವೇಳೆ ಅಪ್ಪು ಭಾವಚಿತ್ರದ ಮುಂದೆ ಶಾಂಪೇನ್​ ಓಪನ್; ಅಚಾತುರ್ಯಕ್ಕೆ ಕ್ಷಮೆ ಕೇಳಿದ ಪ್ರೇಮ್


ಬೆಂಗಳೂರು: ಜೋಗಿ ಪ್ರೇಮ್​ ನಿದೇರ್ಶನದ ‘ಏಕ್ ಲವ್ ಯಾ’ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅಚಾತುರ್ಯವೊಂದು ನಡೆದಿದ್ದು, ಅಪ್ಪು ಶ್ರದ್ದಾಂಜಲಿ ವಿಡಿಯೋ ಮುಂದೆ ಶಾಂಪೇನ್​ ಸಿಡಿಸಿದ ಗಂಭೀರ ಆರೋಪ ಕೇಳಿ ಬಂದಿತ್ತು.

ನಿನ್ನೆ ರಾತ್ರಿ ಖಾಸಗಿ ಹೋಟೆಲ್​ನಲ್ಲಿ ನಡೆದಿದ್ದ ಆಡಿಯೋ ರಿಲೀಸ್​ ಕಾರ್ಯಕ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್​ ನಿರೂಪಕ ಅಕುಲ್​ ಬಾಲಾಜಿ ವೇದಿಕೆಯ ಮೇಲಿದ್ದರು. ಈ ವೇಳೆ ಪರದೆಯ ಮೇಲೆ ಅಪ್ಪು ಭಾವಚಿತ್ರದ ವಿಡಿಯೋ ಮೂಡಿದಾಗ ಶಾಂಪೇನ್​ ಸಿಡಿಸಿ ಸಾಂಗ್​ ರಿಲೀಸ್​ ಮಾಡಿ ಸಂಭ್ರಮಿಸಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಆರೋಪಿಸಿದ್ದರು.

ಇನ್ನು ಘಟನೆ ಕುರಿತು ಸಾ.ರಾ.ಗೋವಿಂದು‌ ಖಂಡನೆ ವ್ಯಕ್ತಪಡಿಸಿದ್ದು, ಪುನೀತ್ ನಿಧನದಿಂದ ಎಲ್ಲರೂ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಭಾವಚಿತ್ರದ ಎದುರು ಚಿತ್ರರಂಗದ ಕೆಲವರ ಈ ರೀತಿಯ ವರ್ತನೆ ಖಂಡನೀಯವಾಗಿದೆ ಎಂದಿದ್ದಾರೆ. ನಮ್ಮ ಚಿತ್ರರಂಗದವರೇ ಈ ರೀತಿ ಮಾಡಿದ್ರೆ ಏನು ಹೇಳಬೇಕು? ಇಂತಹ ಘಟನೆಗಳು ಅಭಿಮಾನಿಗಳನ್ನು ಕೆರಳಿಸುವುದು ಸಹಜ. ಆದದ್ದರಿಂದ ತಕ್ಷಣವೇ ಚಿತ್ರತಂಡದವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದರು.

ಚಿತ್ರತಂಡ ಹೇಳಿದ್ದೇನು?
ಇವೆಂಟ್​ನಲ್ಲಿ ನಡೆದ ಪ್ರಮಾದದ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಇದು ತಾಂತ್ರಿಕ ಸಮಸ್ಯೆಯಿಂದಾಗಿದೆ ಎಂದಿದೆ. ಕಾರ್ಯಕ್ರಮದಲ್ಲಿ ಹಾಡೊಂದನ್ನು ಶಾಂಪೆನ್​ ಬಾಟಲ್​ ಓಪನ್​ ಮಾಡುವ ಮೂಲಕ ರಿಲೀಸ್​ ಮಾಡಲು ಪ್ಲಾನ್​ ರೂಪಿಸಲಾಗಿತ್ತು. ಶಾಂಪೆನ್​ ಓಪನ್​ ಆಗುತ್ತಿದ್ದಂತೆ ಹಿಂದೆ ದೊಡ್ಡ ಪರೆದೆಯ ಮೇಲೆ ಹಾಡು ಪ್ಲೇ ಆಗಬೇಕಿತ್ತು. ಆದರೆ ತಾಂತ್ರಿಕ ಅಡಚಣೆಯಿಂದ ಚಿತ್ರದ ಹಾಡಿನ ಬದಲು ಪುನೀತ್​ಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿ ಈ ಅಚಾತುರ್ಯ ಸಂಭವಿಸಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ಅಲ್ಲದೇ ನಿರ್ದೇಶಕ ಪ್ರೇಮ್, ನಟಿಯರಾದ ರಕ್ಷಿತಾ, ರಚಿತಾ ರಾಮ್ ಕ್ಷಮೆ ಕೇಳಿದ್ದಾರೆ.

News First Live Kannada


Leave a Reply

Your email address will not be published.