2021ರ ಐಪಿಎಲ್​ ಟೂರ್ನಿಯಲ್ಲಿ ಸತತ ಸೋಲುಗಳನ್ನು ಎದುರಿಸಿರುವ ಸನ್​​ರೈಸರ್ಸ್​​ ಹೈದರಾಬಾದ್​ ತಂಡಕ್ಕೆ ಹೊಸ ನಾಯಕರಾಗಿ ಕೇನ್ ವಿಲಿಯಮ್ಸನ್ ನೇಮಕವಾಗಿದ್ದು, ಡೇವಿಡ್​ ವಾರ್ನರ್​ ನಾಯಕತ್ವ ಪಟ್ಟದಿಂದ ಕೆಳಗಿಳಿದಿದ್ದಾರೆ.

ಎಸ್​ಆರ್​ಎಚ್​ ತಂಡ ನಾಯಕತ್ವ ಬದಲಾವಣೆಯ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿದೆ. 2021ರ ಟೂರ್ನಿಯ ಉಳಿದ ಪಂದ್ಯಗಳಲ್ಲಿ ತಂಡವನ್ನು ಕೇನ್ ವಿಲಿಯಮ್ಸನ್​ ಮುನ್ನಡೆಸಲಿದ್ದಾರೆ. ಅಲ್ಲದೇ ನಾಳಿನ ರಾಜಸ್ಥಾನ ರಾಯಲ್ಸ್​ ತಂಡ ವಿರುದ್ಧ ಕಣಕ್ಕಿಳಿಯಲಿರುವ ತಂಡದಲ್ಲೂ ಬದಲಾವಣೆಯಾಗಲಿದೆ. ಡೇವಿಡ್​ ವಾರ್ನರ್​​ ಹಲವು ವರ್ಷಗಳಿಂದ ತಂಡಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುತ್ತದೆ. ಟೂರ್ನಿಯಲ್ಲಿ ಮುಂದಿನ ಹಂತದಲ್ಲಿ ತಂಡ ಯಶಸ್ಸಿಗೆ ಮೈದಾನದ ಹೊರಗೆ ಹಾಗೂ ಒಳಗೆ ಡೇವಿಡ್​ ವಾರ್ನರ್ ಶ್ರಮಿಸುತ್ತಾರೆ ಎಂದು ಸನ್​​​ರೈಸರ್ಸ್​ ಹೇಳಿದೆ.

ಸದ್ಯ ಸನ್​​ರೈಸರ್ಸ್​ ತಂಡ ಆಡುವ 11 ಬಳಗದಲ್ಲೂ ಬದಲಾವಣೆ ಮಾಡುವುದಾಗಿ ತಿಳಿಸಿರುವುದರಿಂದ ವಾರ್ನರ್​ ಮುಂದಿನ ಪಂದ್ಯದಲ್ಲಿ ಆಡುವುದಿಲ್ಲವೇ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ. ಟೂರ್ನಿಯಲ್ಲಿ ಇರುವರೆಗೂ 6 ಪಂದ್ಯಗಳನ್ನು ಆಡಿರುವ ವಾರ್ನರ್​, 193 ರನ್​​ಗಳಷ್ಟೇ ಸಿಡಿಸಿದ್ದಾರೆ. ಚೆನ್ನೈ ವಿರುದ್ಧ ಅರ್ಧ ಶತಕ ಗಳಿಸಿದ್ದರೂ 55 ಎಸೆತಗಳಲ್ಲಿ 57 ರನ್​​ಗಳಿಸಲಷ್ಟೇ ಸ್ಕೋರ್ ಮಾಡಿದ್ದರು. ಇನ್ನು 2018 ವಾರ್ನರ್​ ನಿಷೇಧಕ್ಕೆ ಒಳಗಾಗಿದ್ದ ಸಮಯದಲ್ಲಿ ಕೇನ್ ವಿಲಿಯಮ್ಸನ್ ಹೈದರಾಬಾದ್​ ತಂಡವನ್ನು ಮುನ್ನಡೆಸಿದ್ದರು.

The post ಆಡಿರೋ 6 ಪಂದ್ಯಗಳಲ್ಲಿ ಸನ್​​ರೈಸರ್ಸ್​​ ಹೈದರಾಬಾದ್​ಗೆ 5ರಲ್ಲಿ ಸೋಲು- ಡೇವಿಡ್​ ವಾರ್ನರ್​ಗೆ ಬಿಗ್​ ಶಾಕ್​​ appeared first on News First Kannada.

Source: newsfirstlive.com

Source link