ಆಡು ಮುಟ್ಟದ ಸೊಪ್ಪಿಲ್ಲ.. ಈ ಯುವಕ ತಿನ್ನದ ತಪ್ಪಲೂ ಇಲ್ಲ

ಆಡು ಮುಟ್ಟದ ಸೊಪ್ಪಿಲ್ಲ.. ಈ ಯುವಕ ತಿನ್ನದ ತಪ್ಪಲೂ ಇಲ್ಲ

ಬೆಳಗಾವಿ: ನಾವು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರೋದನ್ನ ನೋಡಿದ್ದೇವೆ ಫಾರ್​ ಎ ಚೇಂಜ್​ ಇಲ್ಲೊಬ್ಬ ಯುವಕ ಕಾಡಿಗೆ ಆಹಾರ ಅರಸಿ ಬಂದು ಹಸಿರು ತಪ್ಪಲುಗಳನ್ನೆ ತಿಂದು ಜೀವನ ಸಡೆಸ್ತಿದ್ದಾನಂತೆ. ಕಾಡಿನಲ್ಲಿನ ಸಿಕ್ಕ ಸಿಕ್ಕ ತಪ್ಪಲುಗಳನ್ನು ತಿಂದು ಹೊಟ್ಟೆತುಂಬಿಸಿಕೊಳ್ತಿರೊ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಯುವಕನ ಈ ವಿಚಿತ್ರ ಹವ್ಯಾಸದಿಂದ ಜನರು ಆಶ್ಚರ್ಯಚಕಿತರಾಗಿದ್ದಾರೆ.  ಹೌದು ಬುಡೇಸಾಬ ಹೊಸಮನಿ ಎಂಬ ಯುವಕ, ಹೆಸರೇ ಗೊತ್ತಿಲ್ಲದ 10ಕ್ಕೂ ಹೆಚ್ಚು ಗಿಡದ ತಪ್ಪಲನ್ನು ಊಟ ಉಪಹಾರವಾಗಿ ಸೇವಿಸುತ್ತಿದ್ದಾನಂತೆ.

ಕೊರೊನಾ ಕಾಲದಲ್ಲಿ ಸಮಯ ಕಳೆಯಲು ಗ್ರಾಮದಲ್ಲಿನ ಬೆಟ್ಟದ ತಪ್ಪಲು ಉಪಯುಕ್ತ ಎಂದು ಹಿರಿಯರೊಬ್ಬರು ಸಲಹೆ ಹಿನ್ನೆಲೆ ಒಂದು ವರ್ಷದಿಂದ ಬೆಟ್ಟಕ್ಕೆ ಹೋಗಿತ್ತಿದ್ದ ಯುವಕ ತಪ್ಪಲ ತಿನ್ನುವುದನ್ನೇ ರೂಢಿಸಿಕೊಂಡು ಬಿಟ್ಟಿದ್ದಾನಂತೆ.

ತಪ್ಪಲೇ ನನಗೆ ರುಚಿ ಎನಿಸುತ್ತದೆ, ಊಟ ಸೇರುವುದಿಲ್ಲ ಎನ್ನುತ್ತಿರುವ ಯುವಕ, ದಿನ ನಿತ್ಯ ಬೆಳಿಗ್ಗೆ ಬೆಟ್ಟಕ್ಕೆ ಹೋಗಿ ತಪ್ಪಲು ತಂದು ಮದ್ಯಾಹ್ನ, ಸಂಜೆ ಮತ್ತು ರಾತ್ರಿ ಅದನ್ನೆ ತಿಂದು ಹೊಟ್ಟೆ ತುಂಬಿ ಕೊಳ್ಳುತ್ತಿದ್ದಾನಂತೆ. ಇದೇ ಕಾರಣಕ್ಕೆ ಕೊರೊನಾ ಈತನ ಹತ್ತರ ಸುಳಿದಿಲ್ಲ ಎನ್ತಿದ್ದಾರೆ ಗ್ರಾಮಸ್ಥರು.

The post ಆಡು ಮುಟ್ಟದ ಸೊಪ್ಪಿಲ್ಲ.. ಈ ಯುವಕ ತಿನ್ನದ ತಪ್ಪಲೂ ಇಲ್ಲ appeared first on News First Kannada.

Source: newsfirstlive.com

Source link