ಆತಂಕ ಬೇಡ, ಒಮೈಕ್ರಾನ್ ರೂಪಾಂತರಿ ಭಾರತಕ್ಕೆ ಲಗ್ಗೆಯಿಟ್ಟರೆ ಆಕಾಶವೇನೂ ಕಳಚಿ ನಮ್ಮ ಮೇಲೆ ಬೀಳದು: ಡಾ ದೇವಿಪ್ರಸಾದ್​ ಶೆಟ್ಟಿ | The skies will not fall on us if Omicron variant enters our country says Dr Devi Shetty


ಕೋವಿಡ್-19 ಮೂರನೇ ಅಲೆ ಭಾರತದಲ್ಲಿ ಅತಂಕ ಸೃಷ್ಟಿಸಳಲಾರಂಭಿಸಿದೆ. ಲಾಕ್ಡೌನ್ ಮತ್ತೊಮ್ಮೆ ನಮ್ಮ ಬದುಕಿನ ಭಾಗವಾಗಬಹುದು. ಜನರಲ್ಲಿ ಭೀತಿ ಹುಟ್ಟಿದೆ. ವಯಸ್ಕರು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಏತನ್ಮಧ್ಯೆ, ಸರ್ಕಾರ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಖ್ಯಾತ ಹೃದ್ರೋಗ ತಜ್ಞ ಡಾ ದೇವಿಪ್ರಸಾದ್​​ ಶೆಟ್ಟಿ ಅವರು ರಾಜ್ಯ ಕೊವಿಡ್ ಟಾಸ್ಕ್ ಫೋರ್ಸ್ ನ ಚೇರ್ಮನ್ ಕೂಡ ಹೌದು. ಅವರಿಗೆ ಕೊವಿಡ್ ಪಿಡುಗಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯಿದೆ ಮತ್ತು ಮೂರನೇ ಅಲೆ ಸೃಷ್ಟಿಸಿರುವ ಆತಂಕ ಮತ್ತು ಒಮೈಕ್ರಾನ್ ಪ್ರಕರಣಗಳು ಭಾರತದಲ್ಲೂ ಪತ್ತೆಯಾದರೆ ಅದನ್ನು ಮಟ್ಟ ಹಾಕಲು ಕರ್ನಾಟಕ ಸಿದ್ಧವಿದೆಯಾ ಮೊದಲಾದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಲು ಡಾ ಶೆಟ್ಟಿ ಅವರಿಗಿಂತ ಹೆಚ್ಚು ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ. ಇದೇ ಹಿನ್ನೆಲೆಯಲ್ಲಿ ಟಿವಿ9 ವರದಿಗಾರ ಬುಧವಾರದಂದು ಅವರೊಂದಿಗೆ ಮಾತುಕತೆ ನಡೆಸಿದರು.

ಮೂರನೇ ಅಲೆ ಕರ್ನಾಟಕದಲ್ಲಿ ತಲೆದೋರಿದರೆ ಅದನ್ನು ಎದುರಿಸಲು ರಾಜ್ಯ ಹಿಂದೆಂದಿಗಿಂತಲೂ ಹೆಚ್ಚು ಸಮರ್ಥವಾಗಿ ಸನ್ನದ್ಧವಾಗಿದೆ. ಹಲವಾರು ವೈದ್ಯಕೀಯ ಕಾಲೇಜುಗಳು, ಅಪಾರ ಸಂಖ್ಯೆಯ ವೈದ್ಯರು ಮತ್ತು ನರ್ಸ್ಗಳು ನಮ್ಮಲ್ಲಿರೋದು ನಿಜಕ್ಕೂ ನಮ್ಮ ಸೌಭಾಗ್ಯ ಎಂದು ಡಾ ಶೆಟ್ಟಿ ಹೇಳುತ್ತಾರೆ. ಮೊದಲಿನ ಎರಡು ಅಲೆಗಳು ಲಗ್ಗೆಯಿಟ್ಟಾಗ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು ಹೆದರುತ್ತಿದ್ದರು ಮತ್ತು ಹಿಂಜರಿಯುತ್ತಿದ್ದರು, ಆದರೆ ಈಗ ಅ ಹೆದರಿಕೆ ಮಾಯವಾಗಿದೆ. ವೈದ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಮತ್ತು ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿರಲಿದೆ ಎಂದು ಡಾ ಶೆಟ್ಟಿ ಹೇಳಿದರು.

ಕೊರೊನಾ ವೈರಸ್ ಲೇಟೆಸ್ಟ್ ರೂಪಾಂತರಿ ಒಮೈಕ್ರಾನ್ ವೈರಣುವೇ ಭಾರತದಲ್ಲಿ ಮೂರನೇ ಅಲೆಗೆ ನಾಂದಿ ಹಾಡುವ ಸಾಧ್ಯತೆಯಿದೆ ಎಂದು ಡಾ ದೇವಿ ಶೆಟ್ಟಿ ಹೇಳುತ್ತಾರೆ. ಒಮೈಕ್ರಾನ್ ಸೋಂಕಿನ ಪ್ರಕರಣಗಳು 15-20 ದೇಶಗಳಲ್ಲಿ ಪತ್ತೆಯಾಗಿವೆ ಮತ್ತು ಭಾರತ ಆ ದೇಶಗಳಿಗಿಂತ ಭಿನ್ನವಾಗೇನೂ ಇಲ್ಲ. ಭಾರತಕ್ಕೂ ಅದು ಬರುತ್ತದೆ;

ಅದರೆ ಒಮೈಕ್ರಾನ್ ಸೋಂಕು ಮೊದಲಿನ ರೂಪಾಂತರಿಗಳಷ್ಟು ಅಪಾಯಕಾರಿ ಅಲ್ಲ. ಹಾಗಾಗಿ, ಒಮೈಕ್ರಾನ್ ಲಗ್ಗೆಯಿಟ್ಟರೆ ಆಕಾಶವೇನೂ ನಮ್ಮ ಮೇಲೆ ಕಳಚಿ ಬೀಳೋದಿಲ್ಲ, ಜನರು ಭಯಬೀಳುವ ಅಗತ್ಯವಿಲ್ಲ ಅಂತ ಡಾ ದೇವಿ ಶೆಟ್ಟಿ ಹೇಳುತ್ತಾರೆ.

ಇದನ್ನೂ ಓದಿ:    ವಿಡಿಯೋದಲ್ಲಿ ಇರುವ ಶೇ.80ರಷ್ಟು ಭಾಗ ಫೇಕ್: ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಗೋಪಾಲಕೃಷ್ಣ ಪ್ರತಿಕ್ರಿಯೆ

TV9 Kannada


Leave a Reply

Your email address will not be published. Required fields are marked *