ಬೆಂಗಳೂರು: ಆಕೆ 17 ವರ್ಷದ ಅಪ್ರಾಪ್ತೆ. ಪಿಯುಸಿ ಮುಗಿಸಿ ಮನೆಯಲ್ಲಿದ್ದವಳು ಶಮನಿಸಂ ಬಗ್ಗೆ ಆಸಕ್ತಳಾದ್ಲು. ನಾನು ಆತ್ಮಗಳ ಜೊತೆ ಮಾತಾಡ್ತೀನಿ ಅಂತಿದ್ಲು. ಮಗಳ ಮಾತಿಗೆ ಗಾಬರಿಗೊಂಡ ಪೊಷಕರು ಬುದ್ದಿಮಾತನ್ನ ಹೇಳಿದ್ರು. ಕಡೆಗೆ ಆತ್ಮಗಳ ಜೊತೆಯಲ್ಲೆ ಮಾತಾಡ್ತೀನೆಂದು ಯುವತಿ ಮನೆಯನ್ನೆ ಬಿಟ್ಟೊಗಿದ್ಲು. ಬೆಂಗಳೂರಲ್ಲಿ ಮಿಸ್ಸಾಗಿದ್ದ ಯುವತಿ ಬರೊಬ್ಬರಿ 78 ದಿನಗಳ ಬಳಿಕ ಗುಜರಾತ್ ನಲ್ಲಿ ಪತ್ತೆಯಾಗಿದ್ದಾಳೆ.
ಆತ್ಮಗಳ ಜೊತೆ ಸಂವಹನ ನಡೆಸುವ ಶಮನಿಸಂಗೆ ಆಕರ್ಷಿತಳಾಗಿ, ಬೆಂಗಳೂರಿನ 17 ವರ್ಷದ ಯುವತಿ ನಾಪತ್ತೆಯಾಗಿದ್ಲು. ಕಳೆದ ಅಕ್ಟೋಬರ್ 31 ರಂದು ಸುಬ್ರಹ್ಮಣ್ಯ ನಗರ ಠಾಣೆ ವ್ಯಾಪ್ತಿಯ ತನ್ನ ನಿವಾಸದಿಂದ 2 ಜೊತೆ ಬಟ್ಟೆ, 2500 ರೂ ನಗದಿನ ಜೊತೆ ಮನೆಬಿಟ್ಟು ತೆರಳಿದ್ಲು. ಮನೆಯಿಂದ ತೆರಳೋ ವೇಳೆ ಮೊಬೈಲ್ ಪೊನ್ ಮನೆಯಲ್ಲೆ ಬಿಟ್ಟು ತೆರಳಿದ್ದಲ್ಲದೇ, ಮೊಬೈಲ್ ನಲ್ಲಿದ್ದ ಕಾಂಟಾಕ್ಟ್ಸ್ ನಂಬರ್ಸ್, ಪೊಟೋಸ್ ವಿಡಿಯೋಗಳನ್ನ ಡಿಲೀಟ್ ಮಾಡಿ ತೆರಳಿದ್ಲು.
ಯುವತಿ ಮೊಬೈಲ್ ಕೊಂಡೊಯ್ಯದ ಪರಿಣಾಮ ಎರಡು ತಿಂಗಳು ಕಳೆದ್ರು ಆಕೆಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಫೋಷಕರು ಕೊಟ್ಟ ಮಾಹಿತಿಯಂತೆ ಆಕೆಯ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗೂಗಲ್ ಸರ್ಚ್ ಎಂಜಿನ್ ಚೆಕ್ ಮಾಡಿದ ವೇಳೆ ಶಮನಿಸಂ ಬಗ್ಗೆ ಗೂಗಲ್ ಮಾಡಿರೋದು ಗೊತ್ತಾಗಿತ್ತು. ಯುವತಿ ಶಮನಿಸಂ ಮೆಡಿಟೇಷನ್ ಪ್ರೊಸೆಸ್ ಬಗ್ಗೆ ತಿಳಿದಿರೋರ ಬಳಿ ತೆರಳಿರಬಹುದೆಂಬ ಶಂಕೆಯನ್ನ ಪೊಲೀಸರು ಹೊಂದಿದ್ರು. ಅದರಂತೆ ಶಮನಿಸಂ ಮೆಡಿಟೇಷನ್ ಬಗ್ಗೆ ತಿಳಿದಿರೋ ಹೆಚ್.ಎಸ್.ಆರ್ ಲೇಔಟ್ ನಿವಾಸಿಯೊಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ರು. ಯುವತಿ ಇವರನ್ನು ಸಂಪರ್ಕ ಮಾಡದೇ ಇರೋದು ಈ ವೇಳೆ ಗೊತ್ತಾಗಿತ್ತು. ಅಪ್ರಾಪೆ ಮನೆಬಿಟ್ಟು ತೆರಳೋ ವೇಳೆಯಿಂದ ಹಿಡಿದು ಆಕೆಯ ಮೂಮೆಂಟ್ಸ್ ಬಗ್ಗೆ ಪೊಲೀಸರು ನಗರದ 500 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ್ರು. ಆದ್ರೆ ಯಾವುದೇ ಸುಳಿವು ಅಪ್ರಾಪ್ತೆ ಇರುವಿಕೆಯ ಮಾಹಿತಿ ಸಿಕ್ಕಿರಲಿಲ್ಲ.
ಬೆಂಗಳೂರಿನಿಂದ ಬಸ್ ಮಾರ್ಗವಾಗಿ ಯುವತಿ ಗುಜರಾತ್ ತಲುಪಿದ್ದಾಳೆ. ಮನೆಯಿಂದ ಕೊಂಡೊಯ್ದಿದ್ದ 2500 ಹಣ ಖರ್ಚಾಗುತ್ತಿದ್ದಂತೆ ಸೂರತ್ ನ ಅನಾಥಾಶ್ರಮಕ್ಕೆ ಸೇರಿದ್ದಾಳೆ. ಅನಾಥಾಶ್ರಮದ ಸಿಬ್ಬಂದಿ ಕರ್ನಾಟಕ ಮೂಲದ ಅಪ್ರಾಪ್ತ ಯುವತಿ ಆಶ್ರಮಕ್ಕೆ ಸೇರಿದ್ದಳೆ ಅನ್ನೊ ಮಾಹಿತಿ ಸೂರತ್ ಪೊಲೀಸರಿಗೆ ನೀಡಿದ್ದಾರೆ. ಸೂರತ್ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರನ್ನ ಸಂಪರ್ಕ ಮಾಡಿದ್ದಾರೆ. ಕಡೆಗೆ ಸುಬ್ರಹ್ಮಣ್ಯ ನಗರ ಪೊಲೀಸರು ಗುಜರಾತ್ನ ಸೂರತ್ನಿಂದ ಅಪ್ರಾಪ್ತ ಯುವತಿಯನ್ನ ಕರೆತಂದು ಪೊಷಕರಿಗೆ ಒಪ್ಪಿಸಿದ್ದಾರೆ. ಇಷ್ಟಕ್ಕೂ ಅಪ್ರಾಪ್ತೆ 78 ದಿನಗಳ ಕಾಲ ಎಲ್ಲೆಲ್ಲಿ ಟ್ರಾವೆಲ್ ಮಾಡಿದ್ಲು. ಆಕೆ ಅನಾಥಾಶ್ರಮಕ್ಕೆ ಸೇರಿದ್ದು ಯಾವಾಗ, ಅಸಲಿಗೆ ಆಕೆ ಮನೆಬಿಟ್ಟು ಹೋಗಲಿಕ್ಕೆ ಅಸಲಿ ಕಾರಣ ಶಮನಿಸಂ ಬಗೆಗಿನ ಒಲವೋ ಅಥವಾ ಬೇರೆನೋ ಅನ್ನೊದು ಪೊಲೀಸರ ಮುಂದಿನ ತನಿಖೆಯಿಂದ ಹೊರಬರಬೇಕಿದೆ.
ವಿಶೇಷ ಬರಹ: ಶಿವಕುಮಾರ್, ನ್ಯೂಸ್ಫಸ್ಟ್, ಬೆಂಗಳೂರು