
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕಾರವಾರ ನೌಕಾನೆಲೆಯ ನೇವಲ್ ಬೇಸ್ಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ, ಯೋಜನೆ ಪರಿಶೀಲಿಸಿದರು.
ಕಾರವಾರ: ಭಾರತದಲ್ಲಿ ಯುದ್ಧ ನೌಕೆಗಳು ತಯಾರಾಗೋ ಮೂಲಕ ಪ್ರಧಾನಿಯವರ ಆತ್ಮನಿರ್ಭರ್ ಅಭಿಯಾನಕ್ಕೆ ಹೆಚ್ಚು ಬಲ ಬಂದಿದೆ. ವಿಕ್ರಾಂತ್ ಹಾಗೂ ವಿಕ್ರಮಾದಿತ್ಯ ಭಾರತದ ನೌಕಾಶಕ್ತಿಯನ್ನು ಹೆಚ್ಚು ಬಲಯುತಗೊಳಿಸಲಿದೆ ಎಂದು ಕಾರವಾದಲ್ಲಿ ಮಾಧ್ಯಮದವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ. ಪ್ರಪಂಚದಲ್ಲಿ ಪ್ರಮುಖ ನೇವಿಗಳ ಸಾಲಿನಲ್ಲಿ ಇಂಡಿಯನ್ ನೇವಿ ಗುರುತಿಸಲ್ಪಡುತ್ತಿದೆ. ಪ್ರಪಂಚದ ದೊಡ್ಡ ದೊಡ್ಡ ನೌಕಾಶಕ್ತಿಗಳು ಭಾರತದ ಜತೆ ಸಹಯೋಗ ಹೊಂದಲು ಇಚ್ಚುಕವಾಗಿದೆ. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕಾರವಾರ ನೌಕಾನೆಲೆಯ ನೇವಲ್ ಬೇಸ್ಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ, ಯೋಜನೆ ಪರಿಶೀಲಿಸಿದರು.
ಇಂದು ಬೆಳಗ್ಗೆ ಫೈಟರ್ ಜೆಟ್, ಹೆಲಿಕಾಪ್ಟರ್, ಸಬ್ ಮರೀನ್ಗಳಲ್ಲಿ ಪ್ರಯಾಣ ಮಾಡಿದ ರಾಜ್ನಾಥ್ ಸಿಂಗ್, ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಐಎನ್ಎಸ್ ಖಂಡೇರಿ ಸಬ್ ಮರೀನ್ನಲ್ಲಿ ಪ್ರಯಾಣ ಮಾಡಿ, ರಕ್ಷಣಾ ವ್ಯವಸ್ಥೆ ಪರಿಶೀಲಿಸಿದರು. ಕಾರವಾರದ ನೇವಲ್ ಬೇಸ್ಗೆ ನಿನ್ನೆ ಬಂದಿದ್ದೆ. ನೇವಿಯ ಶೂರ ಸೈನಿಕರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರ ಜತೆ ಮಾತುಕತೆಯಾಯ್ತು. ಸೀಬರ್ಡ್ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ್ದು, ಇದರ ಅಭಿವೃದ್ಧಿಯಂದ ನಾನು ಸಂತುಷ್ಠನಾಗಿದ್ದೇನೆ.