ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚು ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಅಪ್ಪು ಅಭಿಮಾನಿಗಳನ್ನು ಮತ್ತೊಮ್ಮೆ ಕೋರಿದ ಶಿವಣ್ಣ | Shiva Rajkumar again appeals Appu’s fans refrain from foolish act of committing suicide


ಪುನೀತ್ ರಾಜುಕುಮಾರ್ ಅವರ ಅಗಲಿಕೆಯ ನೋವನ್ನು ಭರಿಸಲಾಗದೆ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮುಂದುವರಿದಿದೆ. ಗುರಾವಾರದಂದು ಚನ್ನಪಟ್ಟಣದಲ್ಲಿ 25 ವರ್ಷ ವಯಸ್ಸಿನ ವೆಂಕಟೇಶ್ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವು ಯಾರದ್ದೇ ಅಗಿರಲಿ, ಅದು ಉಳಿದವರಿಗೆ ಬದುಕಿನಿಡೀ ಕೊರಗುವಂತೆ ಮಾಡುವ ನೋವು. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶಿವರಾಜಕುಮಾರ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ಬಹಳ ಬೇಸರವನ್ನುಂಟು ಮಾಡುತ್ತಿದೆ. ತಮ್ಮ ಬೇಸರವನ್ನು ಮಾಧ್ಯಮದ ಮುಂದೆ ತೋಡಿಕೊಂಡ ಶಿವಣ್ಣ ಅವರು ಅಭಿಮಾನಿಗಳಿಗೆ ಪುನೀತ್ ಮೇಲೆ ಅಪಾರ ಪ್ರೀತಿ; ಆದರೆ ಆ ಪ್ರೀತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರದರ್ಶಿಸುವ ಆಗತ್ಯ ಯಾರಿಗೂ ಇಲ್ಲ, ಇಂಥದ್ದೆಲ್ಲ ಅಪ್ಪುಗೂ ಇಷ್ಟವಾಗುವುದಿಲ್ಲ ಎಂದು ಹೇಳಿದರು.

ಚನ್ನಪಟ್ಟಣದ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾದ ಮೇಲೆ ಗುರುವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದ ಶಿವರಾಜಕುಮಾರ, ತಮ್ಮ ಕುಟುಂಬ ಈಗಾಗಲೇ ಸಾಕಷ್ಟು ನೋವಿನಲ್ಲಿದೆ, ಅಭಿಮಾನಿಗಳು ಪ್ರಾಣತ್ಯಾಗ ಮಾಡುತ್ತಿರುವ ವಿಷಯ ನೋವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಎಲ್ಲರ ಮೇಲೂ ಅವರವರ ಕುಟುಂಬದ ಜವಾಬ್ದಾರಿಯಿರುತ್ತದೆ. ಅವರು ಹೀಗೆ ಪ್ರಾಣ ಕಳೆದುಕೊಂಡರೆ ಕುಟುಂಬದ ಗತಿಯೇನು? ಸಾವು ಯಾವುದಕ್ಕೂ ಪರಿಹಾರವಲ್ಲ ಎಂದು ಹೇಳಿದರು.

ನೋವು ಎಲ್ಲರಿಗೂ ಇರುತ್ತದೆ. ಅದನ್ನು ನುಂಗಿಕೊಂಡು ಬದುಕಿನಲ್ಲಿ ಮುಂದೆ ಸಾಗಬೇಕು. ಅಪ್ಪು ನೆನಪಲ್ಲಿ ಅಭಿಮಾನಿಗಳು ಸತ್ತರೆ ಅದು ತಮ್ಮ ಕುಟುಂಬಕ್ಕೆ ಮತ್ತಷ್ಟು ಹೊರೆಯೆನಿಸುತ್ತದೆ ಎಂದು ಶಿವಣ್ಣ ಹೇಳಿದರು.

ಆತ್ಮಹತ್ಯೆಯಂಥ ಹುಚ್ಚು ಸಾಹಸಕ್ಕೆ ಯಾರೂ ಮುಂದಾಗಬಾರದೆಂದು ತಮ್ಮ ಕುಟುಂಬದ ಪರವಾಗಿ ವಿನಂತಿಸಿಕೊಳ್ಳುತ್ತಿರುವೆನೆಂದ ಶಿವಣ್ಣ ಅವರು ಅವರ ಕುಟುಂದ ಸದಸ್ಯರೆಲ್ಲ ಆತಂಕಗಳಿಲ್ಲದೆ ಬದುಕಬೇಕಾದರೆ, ಅಭಿಮಾನಿಗಳ ಬೆಂಬಲ ಬೇಕು. ತಮ್ಮ ಕುಟುಂಬಕ್ಕೆ ನೈತಿಕ ಸ್ಥೈರ್ಯ ಮತ್ತು ನೈತಿಕ ಬೆಂಬಲದ ಅಗತ್ಯವಿದೆ ಎಂದು ಶಿವಣ್ಣ ಹೇಳಿದರು.

ಇದನ್ನೂ ಓದಿ:    ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

TV9 Kannada


Leave a Reply

Your email address will not be published. Required fields are marked *