ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಬಾಗಿಲು ತೆರೆಯುವ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅದಲ್ದೇ, ನಾಳೆಯೇ ಎಸ್​ಎಸ್​ಎಲ್​​ಸಿ ಪರೀಕ್ಷೆ ವೇಳಾಪಟ್ಟಿ ತಯಾರಿ ಸಾಧ್ಯತೆಯೂ ಇದೆ. ಈ ಮಧ್ಯೆ ವ್ಯಾಕ್ಸಿನ್ ಆದ್ಮೇಲೆ ಕಾಲೇಜುಗಳನ್ನ ಪುನರಾರಂಭ ಮಾಡ್ತೀವಿ. ಅಲ್ಲಿವರೆಗೆ ತರಗತಿಗಳ ಬಾಗಿಲು ತೆರೆಯೋದಿಲ್ಲ ಅಂತ ಉನ್ನತ ಶಿಕ್ಷಣ ಸಚಿವರು ಹೇಳಿದ್ರು. ಆದ್ರೀಗ ಉಲ್ಟಾ ಹೊಡೆದ ಕೆಲ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಶಾಕ್ ನೀಡಿವೆ.

ಆದೇಶಕ್ಕೂ ಮುನ್ನವೇ ಪರೀಕ್ಷೆ ನಡೆಸಲು ಮುಂದಾದ ವಿವಿಗಳು..!
ಪದವಿ & ಸ್ನಾತಕೋತ್ತರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ 4 ವಿವಿಗಳು

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಡಾ. ದೇವಿ ಪ್ರಸಾದ್ ಶೆಟ್ಟಿ ವರದಿ ನೀಡಿದ ಬಳಿಕ, ರಾಜ್ಯದಲ್ಲಿ ಶಾಲೆ ಆರಂಭ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ನಾಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಸಭೆಯನ್ನ ಹಮ್ಮಿಕೊಂಡಿದ್ದಾರೆ. ತಜ್ಞರು ಸಹ ಮೊದಲು ಕಾಲೇಜುಗಳನ್ನ ಆರಂಭ ಮಾಡ್ಬೋದು ಅಂತ ಹಸಿರು ನಿಶಾನೆ ನೀಡಿದ್ದಾರೆ. ಆದ್ರೆ, ಈ ಬೆನ್ನಲ್ಲೇ ರಾಜ್ಯದ 10ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸೋಕೆ ನಿರ್ಧರಿಸಿವೆ.

ಪರೀಕ್ಷೆ ನಡೆಸೋಕೆ ಮುಂದಾದ ವಿವಿಗಳು

  1. ಗುಲ್ಬರ್ಗಾ ವಿಶ್ವವಿದ್ಯಾಲಯ- ಜುಲೈ 15 ರಿಂದ ಪರೀಕ್ಷೆ ಆರಂಭ
  2. ಶ್ರೀ ಕೃಷ್ಣದೇವರಾಯ ವಿವಿ- ಜುಲೈ 19 ರಿಂದ ಪರೀಕ್ಷೆ ಆರಂಭ
  3. ಅಕ್ಕಮಹಾದೇವಿ ಮಹಿಳಾ ವಿವಿ- ಜುಲೈ 20 ರಿಂದ ಪರೀಕ್ಷೆ ಆರಂಭ
  4. ಕರ್ನಾಟಕ ವಿಶ್ವವಿದ್ಯಾಲಯ- ಆಗಸ್ಟ್ 2ರಿಂದ ಪರೀಕ್ಷೆ ಆರಂಭ

ಇನ್ನು ವಿವಿಗಳ ಈ ನಿರ್ಧಾರದಿಂದ ವಿದ್ಯಾರ್ಥಿಗಳು ಗೊಂದಲದಲ್ಲಿದ್ದು, ಆಕ್ರೋಶ ಹೊರಹಾಕಿದ್ದಾರೆ. ವ್ಯಾಕ್ಸಿನ್‌ ಕೊಡದೇ ಎಕ್ಸಾಂ ನಡೆಸಿದ್ರೆ ಹೇಗೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.

ಪದವಿ ಮತ್ತು ಸ್ನಾತಕೋತ್ತರ ಪರೀಕ್ಷಾ ವೇಳಾಪಟ್ಟಿಯನ್ನ 4 ವಿಶ್ವವಿದ್ಯಾಲಯಗಳು ಪ್ರಕಟಿಸಿವೆ. ಆದ್ರೆ, ಶಿಕ್ಷಣ ಇಲಾಖೆಯ ನಿರ್ದೇಶನಕ್ಕೂ ಮುನ್ನ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿರೋದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡದೆ ಕಾಲೇಜು ತೆರೆಯಲ್ಲ ಅಂತ ಸಿಎಂ ಯಡಿಯೂರಪ್ಪನವೇ ಹೇಳಿದ್ದರು. ಇದೀಗ, ವಿಶ್ವವಿದ್ಯಾಲಯಗಳ ನಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲಸಿಕೆ ನೀಡದೆಯೇ ವಿಶ್ವವಿದ್ಯಾಲಯಗಳು ಪರೀಕ್ಷೆಗೆ ಮುಂದಾಗಿವೆ. ಹೀಗಾಗಿ, ವ್ಯಾಕ್ಸಿನ್ ಪಡೆಯದೆ ಹೇಗೆ ಪರೀಕ್ಷೆ ಬರೆಯೋದು ಅಂತ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಆಫ್​​ಲೈನ್ ಮೂಲಕ ಪರೀಕ್ಷೆ ನಡೆಸಲು ಈ ವಿಶ್ವವಿದ್ಯಾಲಯಗಳು ಮುಂದಾಗಿವೆ. ಆದ್ರೆ, ಲಸಿಕೆ ನೀಡದೇ ಅದೇಗೆ ಪರೀಕ್ಷೆ ಮಾಡ್ತಾರೆ ಅಂತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ, ಇಷ್ಟೆಲ್ಲಾ ವಿರೋಧದ ನಡುವೆಯೂ ಯಾವ ಮಾದರಿಯಲ್ಲಿ ಆಫ್​​ಲೈನ್ ಪರೀಕ್ಷೆಗಳನ್ನ ನಡೆಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

The post ಆದೇಶಕ್ಕೂ ಮುನ್ನ ಪರೀಕ್ಷೆ ನಡೆಸಲು ಮುಂದಾದ ವಿವಿಗಳು: ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಯ್ತು ವೇಳಾಪಟ್ಟಿ appeared first on News First Kannada.

Source: newsfirstlive.com

Source link