ಆನೆಗೂ ಜೆಸಿಬಿ ವಾಹನಕ್ಕೂ ಫೈಟ್ ಗೆದ್ದೋರ್ಯಾರು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ (viral video) | Do you know who won the fight for the JCB vehicle? Here’s the viral video


ಆನೆಗೂ ಜೆಸಿಬಿ ವಾಹನಕ್ಕೂ ಫೈಟ್ ಗೆದ್ದೋರ್ಯಾರು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ (viral video)

ಜೆಸಿಬಿಯೊಂದಿಗೆ ಕಾದಾಡುತ್ತಿರುವ ಆನೆ

(viral video) ಆನೆಗಳು ನೋಡೋಕೆ ತುಂಬಾ ಮುದ್ದಾಗಿ ಕಾಣುತ್ತವೆ. ಪ್ರೀತಿ ಮತ್ತು ನಿಷ್ಠಾವಂತ ಪ್ರಾಣಿಗಳಲ್ಲಿ ಇದು ಒಂದು. ದೈತ್ಯವಾಗಿ ಕಂಡರು ಮೃದು ಮನಸ್ಸಿನ ಪ್ರಾಣಿ. ಕೆಲವೊಮ್ಮೆ ಅವು ಕ್ರೂರವಾಗಿ ಕೂಡ ವರ್ತಿಸುತ್ತವೆ. ಅಂತಹದೆ ಒಂದು ವಿಡಿಯೋ ಈಗ ವೈರಲ್ ಆಗಿದೆ. ಕಾಡಾನೆಯೊಂದು ಜೆಸಿಬಿ ವಾಹನದೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ತೆರೆದ ಮೈದಾನದಲ್ಲಿ ಭಾರೀ ಪ್ರಮಾಣದ ಜೆಸಿಬಿ (JCB vehicle) ವಾಹನ ಮತ್ತು ಕಾಡು ಆನೆಯನ್ನು ಕಾಣಬಹುವುದಾಗಿದೆ. ಸ್ಕೂಪರ್‌ನಲ್ಲಿ ಚೂಪಾದ ಹಲ್ಲುಗಳನ್ನು ಹೊಂದಿರುವ ಜೆಸಿಬಿ ಯಂತ್ರವು ಆನೆಯನ್ನು ಪುನಹ ತನ್ನ ವಾಸಸ್ಥಾನಕ್ಕೆ ಹೋಗುವಂತೆ ತಳ್ಳುವುದನ್ನು ನೋಡಬಹುದು.

ಆನೆ ಕೂಡ ತನ್ನೆಲ್ಲ ಶಕ್ತಿಯಿಂದ ಸ್ಕೂಪರ್‌ಗೆ ಮುಖ ಹಾಕಿ ಯಂತ್ರವನ್ನು ತಳ್ಳಿತು. ಇದರಿಂದ ಜೆಸಿಬಿ ಸ್ವಲ್ಪ ಹಿಂದೆ ಹೋಗಿದೆ. ಜೆಸಿಬಿ ವಾಹನದಿಂದ ತಳ್ಳುವುದರಿಂದ ಆನೆಗೆ ಅಪಾಯಕಾರಿಯಾಗುವುದು ಎಂದು ತಿಳಿದ ಜೆಸಿಬಿ ಚಾಲಕ ಸುಮ್ಮನಾಗುತ್ತಾನೆ. ಆದರೆ ಆನೆ ಮಾತ್ರ ಗಂಭೀರವಾಗಿ ಗಾಯಗೊಂಡರೂ ಸಹ ಕಾದಾಡುವುದರಿಂದ ಹಿಂದೆ ಸರಿಯಲಿಲ್ಲ. ಈ ಜೆಸಿಬಿ ಮತ್ತು ಆನೆಯ ಕಾದಾಟದ ಹಿಂದಿರುವ ಕಾರಣ ಅಸ್ಪಷ್ಟವಾಗಿದ್ದರೂ, ತಮ್ಮ ತಮ್ಮ ರಕ್ಷಣೆಗಾಗಿ ಕಾದಾಡುತ್ತಿರುವುದು ತಿಳಿದು ಬರುತ್ತದೆ.

ಇನ್ನೂ ಈ ವಿಡಿಯೋವನ್ನು ವೈಲ್ಡ್ ಅನಿಮಲ್ ಕ್ರೀಯೆಶನ್ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ನಿನ್ನೆ ಅಪ್‌ಲೋಡ್ ಮಾಡಲಾದ ಈ ವಿಡಿಯೋ ಇದುವರೆಗೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ.  ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಆನೆಯನ್ನು ನಾವು ದೂಷಿಸುವುದಿಲ್ಲ, ಆದರೆ ಜೆಸಿಬಿ ಚಾಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.

TV9 Kannada


Leave a Reply

Your email address will not be published.