ಆನೆ ಹಾವಳಿ ಬಗ್ಗೆ ಅರಿವಿದೆ, ಆನೆ ಹೋದಮೇಲೆ ನಮ್ಮ ಬೀಗರೂ ಫೋನ್ ಮಾಡಿ ಅದರ ಹಾವಳಿ ಬಗ್ಗೆ ಹೇಳ್ತಾರೆ: ಸಿಎಂ ಬೊಮ್ಮಾಯಿ | I am aware of elephant menace, there is elephant menace in our relatives constituency too: CM Bommai


ಆನೆ ಹಾವಳಿ ತಡೆಯಲು ನೂರು ಕೋಟಿ ಖರ್ಚು ಮಾಡಲು ನಿರ್ಧರಿಸಿದ್ದೇವೆ. ಆನೆಗಳಿಂದ ಬೆಳೆ ನಷ್ಟ ಪರಿಹಾರ ಮೊತ್ತ ದುಪ್ಪಟ್ಟು ಕೊಡಲು ನಿರ್ಧರಿಸ್ತೇವೆ.

ಆನೆ ಹಾವಳಿ ಬಗ್ಗೆ ಅರಿವಿದೆ, ಆನೆ ಹೋದಮೇಲೆ ನಮ್ಮ ಬೀಗರೂ ಫೋನ್ ಮಾಡಿ ಅದರ ಹಾವಳಿ ಬಗ್ಗೆ ಹೇಳ್ತಾರೆ: ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

ಬೆಂಗಳೂರು: ಮಾನವ ಮತ್ತು ಪ್ರಾಣಿ ಸಂಘರ್ಷ ಹಳೆಯದು. ಆನೆ ಹಾವಳಿ ಬಗ್ಗೆ ನನಗೆ ಅರಿವಿದೆ. ನಮ್ಮ ಬೀಗರ ಕ್ಷೇತ್ರದಲ್ಲಿಯೂ ಆನೆ ಹಾವಳಿ ಇದೆ. ಆನೆ ದಾಟಿದ ಕೂಡಲೇ ಅವರು ನನಗೆ ಫೋನ್ ಮಾಡುತ್ತಾರೆ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಆನೆ ಹಾವಳಿ ತಡೆಯಲು ನೂರು ಕೋಟಿ ಖರ್ಚು ಮಾಡಲು ನಿರ್ಧರಿಸಿದ್ದೇವೆ. ಆನೆಗಳಿಂದ ಬೆಳೆ ನಷ್ಟ ಪರಿಹಾರ ಮೊತ್ತ ದುಪ್ಪಟ್ಟು ಕೊಡಲು ನಿರ್ಧರಿಸ್ತೇವೆ. ಆನೆಗಳ ನೈಸರ್ಗಿಕ ಆವಾಸ ಸ್ಥಾನದ ವ್ಯಾಪ್ತಿ ಕಡಿಮೆಯಾಗ್ತಿದೆ. ಇದರಿಂದ ಆನೆಗಳು ನಾಡಿಗೆ ಬರುತ್ತಿವೆ. ಮೊದಲೆಲ್ಲಾ ಬಂದು ಬೆಳೆ ತಿಂದು ಹೋಗ್ತಿದ್ದವು. ಹೊಲ, ತೋಟಗಳಲ್ಲೇ ಆನೆಗಳು ಈಗ ಉಳಿದುಕೊಳ್ಳುತ್ತವೆ. ಈಗ ಹೊಸ ಮಾದರಿಯ ಫೆನ್ಸಿಂಗ್ ಬಂದಿದೆ. ಬಂಡೀಪುರದಲ್ಲಿ ಇದರ ಪ್ರಯೋಗ ನಡೆಯುತ್ತಿದೆ. ಅಧಿಕಾರಿಗಳಿಗೆ ಪ್ರಗತಿ ತೋರಿಸಿದರೆ, ಹೆಚ್ಚುವರಿ ಹಣ ಕೊಡೋದಾಗಿ ಹೇಳಿದ್ದೇವೆ.

ಹಾಸನ ಜಿಲ್ಲೆಯಲ್ಲಿ 74 ಕಿ.ಮೀ ಫೆನ್ಸಿಂಗ್ ಹಾಕಲು ನಿರ್ಧಾರ ಮಾಡಲಾಗಿದೆ. ಮನುಷ್ಯರ ಪ್ರಾಣ ಹೋದರೆ ಅದಕ್ಕೂ ಹೆಚ್ಚಿಗೆ ಪರಿಹಾರ ಕೊಡಲು ಕ್ರಮ. ಈಗ ಆನೆಯಿಂದ ಸತ್ತರೆ 7.5 ಲಕ್ಷ ರೂ ಪರಿಹಾರ ಇದೆ. ಇದನ್ನು ಇನ್ನೂ ಹೆಚ್ಚಿಸ್ತೇವೆ, ದುಪ್ಪಟ್ಟು ಮಾಡ್ತೇವೆ ಎಂದು ಹೇಳಿದರು. ಹೆಚ್ಚು ಕಾಟ‌ ಕೊಡುವ ಆನೆಗಳನ್ನು ಕಾಡಿಗೆ ಕಳಿಸಲು ನಿರ್ಧಾರ ಮಾಡಲಾಗಿದೆ. ನಾಲ್ಕು ಆನೆಗಳು ಹೆಚ್ಚು ಕಾಟ ಕೊಡ್ತಿವೆ. ಇವುಗಳನ್ನು ಮತ್ತೆ ಕಾಡಿಗೆ ಬಿಡಲು‌ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವು ಕಡೆ ಸೋಲಾರ್ ಫೆನ್ಸಿಂಗ್ ಹಾಕಲಾಗಿದೆ. ಇದಕ್ಕೆ ವನ್ಯಜೀವಿ ತಜ್ಞರು, ಪರಿಸರವಾದಿಗಳ ವಿರೋಧವೂ ಇದೆ. ಒಟ್ಟಾರೆ ಸ್ಥಳೀಕರು, ಸರ್ಕಾರ, ಅರಣ್ಯ ಇಲಾಖೆ ಸೇರಿ ನಿರ್ಧಾರ ಮಾಡ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕಾಡಾನೆ ಹಾವಳಿಯಿಂದ ಬೆಳೆ ಹಾನಿ‌, ಪ್ರಾಣ ಹಾನಿ ಬಗ್ಗೆ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ಮಾಡಿದ್ದು, ಹಾಸನ ಜಿಲ್ಲೆಯ ಬೇಲೂರು, ಆಲೂರು ತಾಲೂಕು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಕಾಡಾನೆ ಹಾವಳಿ ಬಗ್ಗೆ ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್ ಚರ್ಚೆ ಆರಂಭಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.