ಆನೇಕಲ್​ನಲ್ಲಿ ಮನೆ ಮುಂದೆ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಆರೋಪ; ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು | A woman lodged a complaint with the Bangalore Police Commissioner about attack in anekal


ಆನೇಕಲ್​ನಲ್ಲಿ ಮನೆ ಮುಂದೆ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಆರೋಪ; ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು

ಹಲ್ಲೆಗೆ ಒಳಗಾದ ಮಹಿಳೆ ಮತ್ತು ಆಕೆಯ ಮಗ

ಆನೇಕಲ್: ಮನೆ ಮುಂದೆ ಮಹಿಳೆಯನ್ನು (Woman) ನಗ್ನಗೊಳಿಸಿ ಥಳಿಸಿದ ಆರೋಪ ಕೇಳಿಬಂದಿದ್ದು, ಬೆಂಗಳೂರು ಪೊಲೀಸ್ ಆಯುಕ್ತರಿಗೆ (Police Commissioner) ಮಹಿಳೆ ದೂರು ನೀಡಿದ್ದಾರೆ. ಬೆಳ್ಳಂದೂರು ನಿವಾಸಿ ನಾಗರತ್ನ(46) ಎಂಬುವವರು ದೂರು ನೀಡಿದ್ದಾರೆ. ರಾಮು, ಮುನಿವೆಂಕಟಪ್ಪ ಇತರ 10 ಜನರ ವಿರುದ್ಧ ದೂರು ದಾಖಲಾಗಿದೆ. ಬೆಳ್ಳಂದೂರು ಪೊಲೀಸರ ವಿರುದ್ಧವೂ ನಿಂದನೆ ಆರೋಪ ಕೇಳಿಬಂದಿದೆ. ತಾಯಿ ಮನೆ ಬಳಿ ಕಸ ಕ್ಲೀನ್ ಮಾಡುವ ವೇಳೆ ತಕರಾರು ನಡೆದಿದೆ. ಮಾತಿಗೆ ಮಾತು ಬೆಳೆದು ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ ಆರೋಪಿಸಿದ್ದಾರೆ.

ತಾಳಿ ಕಿತ್ತುಕೊಂಡು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮಗನಿಗೆ ಪೊಲೀಸರು ಥಳಿಸಿದ್ದಾರೆ ಅಂತ ಮಹಿಳೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಬೆಳ್ಳಂದೂರು ಪೊಲೀಸರು ದೂರು ಸ್ವಿಕರಿಸಲಿಲ್ಲ ಅಂತ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಸ್ಪಷ್ಟನೆ ಬೆಳ್ಳಂದೂರು ಠಾಣೆ ಪೊಲೀಸರು, ಮಹಿಳೆ ವರ್ತನೆ, ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಹೇಳಿದ್ದಾರೆ.


Leave a Reply

Your email address will not be published.