ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ – Orders Jeans Received Onions online shopping platform cheated woman


Online Fraud : ಆನ್​ಲೈನ್ ಶಾಪಿಂಗ್​ನಿಂದ ಸಮಯ ಉಳಿಯಿತು, ಶ್ರಮ ಉಳಿಯಿತು ನಿಜ. ಆದರೆ ಜೊತೆಜೊತೆಗೆ ಆಗಾಗ ಇಂಥ ಯಡವಟ್ಟುಗಳೂ ಸಂಭವಿಸುತ್ತವಲ್ಲ. ಇದಕ್ಕೇನು ಹೇಳುತ್ತೀರಿ?

ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ

ಸಾಂದರ್ಭಿಕ ಚಿತ್ರ

Viral Video : ಡ್ರೋಣ್​ ಆರ್ಡರ್ ಮಾಡಿದವರಿಗೆ ಆಲೂಗಡ್ಡೆ ಸಿಕ್ಕಿದ್ದು, ಮೊಬೈಲ್ ಆರ್ಡರ್ ಮಾಡಿದವರಿಗೆ ಸೋಪ್​ ಸಿಕ್ಕಿದ್ದು ಹೀಗೆ ಅನೇಕ ವಿಡಿಯೋಗಳನ್ನು ನೋಡಿದ ನೆನಪು ನಿಮಗಿರಬಹುದು. ಇದೀಗ ಮಹಿಳೆಯೊಬ್ಬರು ಆನ್​​ಲೈನ್​ನಲ್ಲಿ ಜೀನ್ಸ್​ ಪ್ಯಾಂಟ್​ ಆರ್ಡರ್ ಮಾಡಿದ್ದಾರೆ. ಆದರೆ ಇವರಿಗೆ ಸಿಕ್ಕಿದ್ದು ಈರುಳ್ಳಿ! ನೆಟ್ಟಿಗರು ಆನ್​ಲೈನ್ ಶಾಪಿಂಗ್​ ಬಗ್ಗೆ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆನ್​ಲೈನ್​ನಲ್ಲಿ ಬ್ರಿಟಿಷ್​ ಸೆಕೆಂಡ್​ ಹ್ಯಾಂಡ್​ ಫ್ಯಾಷನ್​ ಸೈಟ್​ ಡೆಪಾಪ್​​ನಲ್ಲಿ ಜೀನ್ಸ್​ ಆರ್ಡರ್ ಮಾಡಿದ್ದಾಳೆ. ಜೀನ್ಸ್​ನ ಕನಸು ಕಾಣುತ್ತ ಕುಳಿತವಳಿಗೆ ಕೈಗೆ ಬಂದು ತಲುಪಿದ್ದು ಈರುಳ್ಳಿ. ಹೀಗಾದಾಗ ಆಕೆ ವಿಚಲಿತಗೊಂಡು ಕಸ್ಟಮರ್ ಕೇರ್​ಗೆ ಸಂಪರ್ಕಿಸಿದ್ದಾಳೆ. ಆದರೆ ಅತ್ತಕಡೆಯಿಂದ ವ್ಯಕ್ತಿ ಕೂಡ ಈಕೆಯಂತೆಯೇ ಗೊಂದಲವನ್ನು ಅನುಭವಿಸಿದ್ಧಾರೆ. ಇದು ಹೀಗಾಗಲು ಹೇಗೆ ಸಾಧ್ಯ ಎಂದು ಮಹಿಳೆ, ನನಗೂ ಅದೇ ಅರ್ಥವಾಗುತ್ತಿಲ್ಲ ಎಂದು ಕಸ್ಟಮರ್ ಕೇರ್​ ಎಕ್ಸಿಕ್ಯೂಟಿವ್ ತಿಳಿಸಿದ್ದಾರೆ. ಈ ಚಾಟ್​ ಸ್ಕ್ರೀನ್ ಶಾಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಈ ವೆಬ್​ಸೈಟ್​ ಮಹಿಳೆಗೆ ಕ್ಷಮೆ ಕೇಳಿದೆ.

ಸ್ತ್ರೀರೋಗ ತಜ್ಞೆಯ ಸೋಗಿನಲ್ಲಿ 38 ಮಹಿಳೆಯರನ್ನು ಫೇಸ್​ಬುಕ್​ ಮೂಲಕ ವಂಚಿಸಿದ ಪುರುಷಪುಂಗವ

ಈ ಪೋಸ್ಟ್​ 23,000 ಜನರನ್ನು ಸೆಳೆದಿದೆ. ಬಹಳ ಜನರು, ತಮಾಷೆಯಾಗಿದೆ ಇದೆಲ್ಲ. ಯಾಕೆ ಜನರು ಇಂಥದೆಲ್ಲದಕ್ಕೆ ಆಸೆ ಪಡುತ್ತಾರೋ ಎಂದಿದ್ದಾರೆ. ಈರುಳ್ಳಿ! ಬಹಳ ಸಮಯೋಚಿತವಾಗಿದೆ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಂದಿದ್ದಾರೆ ಹಲವರು.

ಆನ್​ಲೈನ್​ ಶಾಪಿಂಗ್​ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ ನಿಜ. ಆದರೆ ಎಲ್ಲ ಸಮಯದಲ್ಲಿಯೂ ಇದು ಗ್ರಾಹಕಸ್ನೇಹಿಯಾಗಿ ವರ್ತಿಸುತ್ತದೆ ಎಂದು ಹೇಳಲಾಗದು. ಆಗಾಗ ಇಂಥ ಘಟನೆಗಳೇ ಇದಕ್ಕೆ ಸಾಕ್ಷಿ. ಇದು ಒತ್ತಡವನ್ನುಂಟು ಮಾಡುವುದಲ್ಲದೆ ಮತ್ತೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಮಯವನ್ನೂ ಬೇಡುತ್ತದೆ.

ಏನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.