ಬೆಂಗಳೂರು: ಕೊರೊನಾ ಟೈಂನಲ್ಲಿ ಜನ ಮನೆಯೊಳಗಿದ್ರೆ ಸಾಕಪ್ಪ ಅನ್ನೋ ಯೋಚ್ನೆಯಲ್ಲಿರ್ತಾರೆ. ಏನೇ ಮಾಡಿದ್ರೂ, ಎಲ್ಲಾ ಮನೆಯೊಳಗೆ ಮಾಡೋಣ, ಸುಮ್ನೆ ಮನೆ ಹೊರಗೆ ಯಾಕ್​ ಹೋಗೋದು.. ರಿಸ್ಕ್​ ಅಂತ ಅದೆಷ್ಟೋ ಜನ ವರ್ಕ್​ ಫ್ರಂ ಹೋಂ ಇರೋ ಕೆಲಸವನ್ನ ಈ ಟೈಮ್​ನಲ್ಲಿ ಹುಡುಕ್ತಾಯಿರ್ತಾರೆ. ಹೀಗೆ ಕೆಲಸ ಹುಡುಕೋವಾಗ ಹುಷಾರ್.. ಯಾಕಂದ್ರೆ, ಇದೇ ಟೈಮ್​ನ್ನ ಎನ್ಕ್ಯಾಶ್​ ಮಾಡಿಕೊಳ್ಳೋ ಸೈಬರ್​ ಖದೀಮರು ಲಾಕ್​ಡೌನ್​ ಟೈಂನಲ್ಲಿ ಮಕ್ಮಲ್​ ಟೋಪಿ ಹಾಕೋದಕ್ಕೆ ರೆಡಿಯಾಗಿರ್ತಾರೆ.

ಕೊರೊನಾ ಟೈಂನಲ್ಲಿ, ಆನ್ ಲೈನ್ ಜಾಬ್ ಸಿಕ್ರೆ ಸಾಕು ಅನ್ನೋರೇ ಇದೀಗ ಸೈಬರ್​ ಹ್ಯಾಕರ್ಸ್​ಗಳ ಟಾರ್ಗೆಟ್​. ಯಾಕಂದ್ರೆ, ಇಂಥ ಟೈಮ್​ನಲ್ಲಿ ಮನೆಯಲ್ಲೇ ಕೂತು ಕೆಲಸ ಮಾಡೋರಿಗೆ ಡಿಮ್ಯಾಂಡ್.​ ಹೀಗಾಗಿ ಅಂಥವರಿಗೆ ಪರ್​ ಡೇ ಇಂತಿಷ್ಟು ಹಣ ಕೊಡ್ತೀವಿ.. ಹಾಗಾಗಿ, ನಾವು ಕೊಡುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ನೋ ಮೆಸೇಜ್​ನ್ನ ಕಳುಹಿಸ್ತಾರೆ.​ ‘‘ New COVID-19 money making project, earn 200-10000rs per day, Reply me ‘1’ click the link to add my wha-tsapp: wa.me/918867724782’’ ಈ ರೀತಿ ಮೆಸೇಜ್ ಕಳುಹಿಸ್ತಾರೆ. ಅಪ್ಪಿ ತಪ್ಪಿ ನೀವೇನಾದ್ರೂ ಕ್ಲಿಕ್ ಮಾಡಿ ರಿಪ್ಲೈ ಕೊಟ್ರೋ, ನಿಮ್ಮ ಅಕೌಂಟ್​ನಲ್ಲಿರೋದೆಲ್ಲಾ ಗುಳುಂ ಸ್ವಾಹ ಆಗೋಗುತ್ತೆ ಹುಷಾರ್​.

ಈ ರೀತಿಯ ಒಂದು ಮೆಸೇಜ್​ ಸುಹಾಸ್​(ಹೆಸರು ಬದಲಾಯಿಸಲಾಗಿದೆ) ಎಂಬ ವ್ಯಕ್ತಿಗೆ ಇತ್ತೀಚೆಗೆ​ ಬಂದಿದೆ. ನಂತರ ಸುಹಾಸ್​ ಲಿಂಕ್ ಕ್ಲಿಕ್ ಮಾಡಿ ರಿಪ್ಲೈ ಮಾಡಿದ್ದಾರೆ. ಈ ವೇಳೆ ಸುಹಾಸ್​ಗೆ ಲಿಂಕ್ ಕೆಲವು ಮಾಹಿತಿ ಫಿಲ್ ಮಾಡಿ ಅಂತ ಮತ್ತೊಂದು ಮೆಸೇಜ್​ ಬಂದಿದೆ. ಲಿಂಕ್ ತೆರೆದು ನೋಡಿದಾಗ ಬ್ಲ್ಯಾಂಕ್ ಆಗಿದೆ. ಇತ್ತ ಸ್ವಲ್ಪ ಸಮಯದ ನಂತರ ಸುಹಾಸ್ ಮೊಬೈಲ್ ನಿಂದ 12 ಸಾವಿರ ಹಣ ಇದ್ದಕ್ಕಿದ್ದಂತೆ ಮಾಯವಾಗಿದೆ. ಹಾಗಾಗಿ, ನಿಮಗೂ ಈ ರೀತಿ ಮೆಸೇಜ್ ಬಂದ್ರೆ ಸ್ವಲ್ಪ ಎಚ್ಚರದಿಂದಿರಿ. ಕೆಲಸ ಸಿಗಬುಹುದೇನೋ ಅನ್ನೋ ನಂಬಿಕೆಯಲ್ಲಿ ಇರುವ ಹಣವನ್ನೂ ಕಳೆದುಕೊಳ್ಳಬೇಡಿ.

The post ಆನ್​ಲೈನ್​ನಲ್ಲಿ ಕೆಲಸ ಹುಡುಕ್ತಿದ್ದೀರಾ..? ಅಕೌಂಟ್​​ನಲ್ಲಿರೋ ಕಾಸನ್ನೂ ಕಳೆದುಕೊಳ್ತೀರಾ ಹುಷಾರ್.. appeared first on News First Kannada.

Source: newsfirstlive.com

Source link