ಆನ್​ಲೈನ್​ ಕ್ಲಾಸ್​ಗೆ ಮೊಬೈಲ್ ಕೊಡಿಸಿದ್ರೆ ಗೇಮ್ ಕ್ರೇಜ್​​.. ತಾಯಿ ಅಕೌಂಟ್​ನಿಂದ ₹3.2 ಲಕ್ಷ ಹಣ ಮಾಯ

ಆನ್​ಲೈನ್​ ಕ್ಲಾಸ್​ಗೆ ಮೊಬೈಲ್ ಕೊಡಿಸಿದ್ರೆ ಗೇಮ್ ಕ್ರೇಜ್​​.. ತಾಯಿ ಅಕೌಂಟ್​ನಿಂದ ₹3.2 ಲಕ್ಷ ಹಣ ಮಾಯ

ಅದೊಂದು ಸುಂದರ ಫ್ಯಾಮಿಲಿ. ಗಂಡ, ಹೆಂಡತಿ ಮತ್ತು ಒಬ್ಬ ಮಗ ಅವರ ಕುಟುಂಬದಲ್ಲಿದ್ದವರು. ತಾಯಿ ಶಿಕ್ಷಕಿ ಆಗಿರುವುದರಿಂದ ಆನ್ಲೈನ್ ಕ್ಲಾಸ್ ಅದು ಇದು ಅಂತ ಆಕೆಗೆ ಹತ್ತಾರು ಕೆಲಸ. ತಂದೆಗೂ ಕೂಡ ನೂರಾರು ಕೆಲಸ. ಒಬ್ಬನೇ ಮಗನಾಗಿರುವುದರಿಂದ ಮಗನ ಮೇಲೆ ಪ್ರೀತಿ ಸ್ವಲ್ಪ ಹೆಚ್ಚಾಗಿಯೇ ಇತ್ತು. ಮಗನ ಆನ್​ಲೈನ್ ಗೇಮ್ ಕ್ರೇಜ್​ನಿಂದ ಈಗ ಪೋಷಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಮಗ ಮೊಬೈಲ್ ಹಿಡಿದುಕೊಂಡಾಗ ಆರಂಭದಲ್ಲಿ ಬೆದರಿಸಿದ್ರು. ಅವರ ಬೆದರಿಕೆಗೆ ಆತ ಜಗ್ಗಲಿಲ್ಲ. ಆಮೇಲೆ ಕೊರೊನಾ​ ನಿಯಂತ್ರಣಕ್ಕೆ ಲಾಕ್​ಡೌನ್ ಘೋಷಣೆಯಾಗುತ್ತೆ. ಶಾಲಾ ಮಕ್ಕಳಿಗೆ ಆನ್​ಲೈನ್ ಕ್ಲಾಸ್​ ಆರಂಭವಾಗುತ್ತೆ. ಇದೇ ಸಂದರ್ಭದಲ್ಲಿ ಶಿಕ್ಷಕಿ ಮಗನಿಗೆ ಮೊಬೈಲ್​ ಕೊಡಿಸುತ್ತಾರೆ. ಆದ್ರೆ, ಆತ ಆನ್​​ಲೈನ್ ಕ್ಲಾಸ್​​ಗಿಂತ ಆನ್​ಲೈನ್ ಗೇಮ್ ಆಡುವುದರಲ್ಲಿಯೇ ಮಗ್ನನಾಗಿ ಬಿಡ್ತಾನೆ. ಗೇಮ್​ ಕ್ರೇಜ್​ಗೆ ಬಿದ್ದ ಮಗ ಬರೋಬ್ಬರಿ 3.2 ಲಕ್ಷ ರೂಪಾಯಿ ಮಂಗಮಾಯ ಮಾಡಿದ್ದಾನೆ.

ತಾಯಿ ಬೆದರಿಕೆಗೆ ಜಗ್ಗದ ಬಾಲಕ
ಆನ್​ಲೈನ್ ಕ್ಲಾಸ್ ಅಂತ ಗೇಮ್ ಆಡ್ತಾ ಇದ್ದ

ಮಗ ಆನ್​ಲೈನ್ ಗೇಮ್ ಆಡುವಾಗ ಪಾಲಕರು ಗಮನಿಸಿ ಸ್ವಲ್ಪ ಬೆದರಿಸಿದ್ದಾರೆ. ಆದರೆ, ಆತ ತಲೆ ಕೆಡಿಸಿಕೊಂಡಿಲ್ಲ. ತನ್ನದೇ ಹಠ ಹಿಡಿಯುತ್ತಾನೆ. ಆಮೇಲೆ ಹೋಗಲಿ ಬಿಡು ಅಂತ ಪಾಲಕರು ಸುಮ್ಮನಾಗಿಬಿಡ್ತಾರೆ. ಆದ್ರೆ, ಅದುವೇ ಬಾಲಕನಿಗೆ ವರವಾಗಿ ಬಿಡುತ್ತೆ. ವಿಪರೀತವಾಗಿ ಆನ್ಲೈನ್ ಗೇಮ್ ಗೀಳು ಅಂಟಿಸಿಕೊಂಡು ಬಿಡ್ತಾನೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಆತ ಆನ್ಲೈನ್ ಕ್ಲಾಸ್​ಗೂ ಹಾಜರಾಗಲು ಹೋಗುತ್ತಿರಲಿಲ್ಲ. ತಂದೆ, ತಾಯಿಗೆ ಆನ್ಲೈನ್ ಕ್ಲಾಸ್ ಇದೆ ಅಂತ ಹೇಳುವುದು ಇತ್ತ ಗೇಮ್ ಆಡುವುದು ಮಾಡುತ್ತಿದ್ದ.

ಬಾಲಕ ತಾನಾಯಿತು ಗೇಮ್ ಆಯಿತು ಅಂತ ಆಡ್ತಾ ಇದ್ರೆ ಏನೂ ತೊಂದರೆ ಇರಲಿಲ್ಲ. ಆದ್ರೆ, ಆತ ಆನ್ಲೈನ್ನಲ್ಲಿಯೇ ಸ್ನೇಹಿತರ ತಂಡ ರಚಿಸಿಕೊಳ್ಳುತ್ತಾನೆ. ಅವರ ಜೊತೆ ಗೇಮ್ ಆಡಲು ಆರಂಭಿಸುತ್ತಾನೆ. ಸ್ನೇಹಿತರ ನಡುವೆ ಭಾರೀ ಪೈಪೋಟಿ ಏರ್ಪಡುತ್ತೆ. ಹೀಗಾಗಿಯೇ ಕ್ರೇಜ್​​ಗಾಗಿ ಗೇಮ್​​ನಲ್ಲಿ ಹೊಸ ಹೊಸ ಶಸ್ತ್ರಾಸ್ತ್ರ ಖರೀದಿಸಲು ಆರಂಭಿಸುತ್ತಾನೆ. ಇದೇ ನೋಡಿ, ಶಿಕ್ಷಕಿಯ 3.2 ಲಕ್ಷ ರೂಪಾಯಿ ಮಂಗಮಾಯ ಮಾಡಿದ್ದು.

3.2 ಲಕ್ಷ ಮೌಲ್ಯದ ಗೇಮ್ ಶಸ್ತ್ರಾಸ್ತ್ರ ಖರೀದಿಸಿದ ಬಾಲಕ
ತಂದೆ, ತಾಯಿ ಬೆದರಿಕೆಗೆ ಕ್ಯಾರೆ ಅನ್ನದ ಬಾಲಕ

 

ದಿನಕಳೆದಂತೆ ಬಾಲಕ ಗೇಮ್ ಕ್ರೇಜ್ ವಿಪರೀತವಾಗಿ ಹಚ್ಚಿಕೊಂಡು ಬಿಟ್ಟಿದ್ದಾನೆ. ಯಾವಾಗ ನೋಡಿದ್ರೂ ಗೇಮ್ ಆಡುತ್ತಲೇ ಇರುತ್ತಿದ್ದ. ಆದ್ರೆ ಆತನಿಗೆ ಕಿಕ್ ಸಾಕಾಗಿಲ್ಲ. ಹೀಗಾಗಿ ಆತ ಕಂಡುಕೊಂಡ ಮಾರ್ಗ ಅಂದ್ರೆ ಗೇಮ್ನಲ್ಲಿರುವ ಶಸ್ತ್ರಾಸ್ತ್ರ ಖರೀದಿ. ಹೌದು, ಆಯಾ ವಿಡಿಯೋ ಗೇಮ್ನಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಅವಕಾಶ ಇರುತ್ತೆ. ಶಸ್ತ್ರಾಸ್ತ್ರ ಇಲ್ಲದೆಯೂ ಹಾಗೆಯೂ ಆಡಬಹುದು. ಶಸ್ತ್ರಾಸ್ತ್ರ ಖರೀದಿ ಮಾಡ್ಬೇಕು ಅಂದ್ರೆ ಹಣ ನೀಡಲೇಬೇಕು. ಬಾಲಕ ಬರೋಬ್ಬರಿ 3.2 ಲಕ್ಷ ಹಣ ಸಂದಾಯ ಮಾಡಿ ಶಸ್ತ್ರಾಸ್ತ್ರ ಖರೀದಿ ಮಾಡಿದ್ದಾನೆ.

ಗೇಮ್ನಲ್ಲಿ 278 ಬಾರಿ ಹಣ ಸಂದಾಯ
ಮಾ.10 ರಿಂದ ಜೂನ್ 8ರವರೆಗೆ ನಡೆದ ವ್ಯವಹಾರ

ಬಾಲಕ ಒಂದೇ ಬಾರಿಗೆ ಅಷ್ಟೊಂದು ದೊಡ್ಡ ಮೊತ್ತದ ಶಸ್ತ್ರಾಸ್ತ್ರ ಖರೀದಿಸಿಲ್ಲ. ಇದೆಲ್ಲವೂ ಆಗಿರುವುದು ಹಂತ ಹಂತವಾಗಿ. ಆರಂಭದಲ್ಲಿ ಕಡಿಮೆ ಮೊತ್ತದ ಶಸ್ತ್ರಾಸ್ತ್ರ ಖರೀದಿಸಿದ್ದಾನೆ. ಆದ್ರೆ, ಅದು ಅವನಿಗೆ ತೃಪ್ತಿ ತಂದಿಲ್ಲ. ಅಂದ್ರೆ ಆತನ ಕ್ರೇಜ್​​​ಗೆ ಅದು ಸಾಕಾಗಿಲ್ಲ. ಹೀಗಾಗಿ ಹಂತ ಹಂತವಾಗಿ ಮಾರ್ಚ್ 10 ರಿಂದ ಜೂನ್ 8ರವರೆಗೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿಸಿದ್ದಾನೆ. ಅದು ಅಲ್ಪ ಸ್ವಲ್ಪ ಮೊತ್ತವಲ್ಲ. ಬರೋಬ್ಬರಿ 3.2 ಲಕ್ಷ ರೂಪಾಯಿ ಮೌಲ್ಯದಾಗಿದೆ. ಇಷ್ಟು ಹಣವನ್ನು 278 ಬಾರಿ ಆತ ಟ್ರಾನ್ಸ್​​​ಫರ್​ ರ್ಮಾಡಲು ಬಳಸಿಕೊಂಡಿದ್ದು ತನ್ನ ತಾಯಿಯ ಅಕೌಂಟನ್ನ.

ಅಕೌಂಟ್ ನೋಡಿದಾಗ ಶಿಕ್ಷಕಿಗೆ ಶಾಕ್
ಒಟಿಪಿ ಬರದೆ ಅಷ್ಟು ಹಣ ಕಟ್ಟಾಗಿದ್ದು ಹೇಗೆ?

ಆನ್ಲೈನ್ ಶಿಕ್ಷಣ ಅದು ಇದು ಅಂತ ಶಿಕ್ಷಣ ಇಲಾಖೆಯ ಕೆಲಸದಲ್ಲಿ ಸಂಪೂರ್ಣ ಮಗ್ನವಾಗಿದ್ದ ತಾಯಿಗೆ ಮಗನ ಕಡೆ ಅಷ್ಟು ಲಕ್ಷ್ಯ ವಹಿಸಲು ಸಾಧ್ಯವಾಗಿರಲಿಲ್ಲ. ಆದ್ರೆ, ಜೂನ್ 25ಕ್ಕೆ ಹಣಕಾಸಿನ ಅನಿವಾರ್ಯತೆ ಬಂದಾಗ ಅಕೌಂಟ್ ಚೆಕ್ ಮಾಡಿದ್ದಾರೆ. ಆಗಲೇ ಅವರಿಗೆ ಭರ್ಜರಿ ಶಾಕ್ ಕಾದಿತ್ತು. ಅಕೌಂಟ್ನಲ್ಲಿದ್ದ 3.2 ಲಕ್ಷ ಹಣ ಮಾಯವಾಗಿತ್ತು. ಅದರಲ್ಲಿಯೂ 278 ಬಾರಿ ಗೇಮ್ ಶಸ್ತ್ರಾಸ್ತ್ರ ಖರೀದಿಗೆ ಹಣ ಉಪಯೋಗಿಸಿರುವುದು ಅರಿವಾಗಿತ್ತು. ಅಷ್ಟೊಂದು ಹಣ ನೀಡಿ ಖರೀದಿ ಹೇಗಾಯ್ತು ಅನ್ನೋದೇ ಅವರಿಗೆ ಅಚ್ಚರಿ ಆಯ್ತು. ಒಟಿಪಿ ಬರದೇ ಅಷ್ಟು ಹಣ್ಣ ಕಟ್ಟಾಗಿದ್ದು ಹೇಗೆ ಅಂತ ಚಿಂತೆಗೀಡಾಗಿದ್ರು. ಒಮ್ಮೆ ಒಟಿಪಿ ಬಂದರೆ ಇಂದು ಪೊಲೀಸ್​ ಠಾಣೆ ಮೆಟ್ಟಿಲು ಏರುವ ಪ್ರಸಂಗವೇ ಬರುತ್ತಿರಲಿಲ್ಲ. ಹಾಗಾದ್ರೆ ಯಾಮಾರಿಸಿದ್ದು ಹೇಗೆ ಅನ್ನೋದೇ ಅಚ್ಚರಿಯಾಗಿದೆ.

ಸೈಬರ್ ಪೊಲೀಸ್ ಠಾಣೆಗೆ ದೂರು
ಮಗನ ಗೇಮ್ ಗೀಳಿಗೆ ಹೈರಾಣಾದ ಶಿಕ್ಷಕಿ

ಜೂನ್ 25 ರಂದು ತಮ್ಮ ಅಕೌಂಟ್​ನಲ್ಲಿ ಅಷ್ಟೊಂದು ಹಣ ಕಟ್ಟಾಗಿರೋದು ನೋಡಿ ಶಿಕ್ಷಕಿ ದಂಗಾಗಿ ಹೋಗಿದ್ದಾರೆ. ಮಗನ ಮೇಲೆ ಕೋಪ ತೋರಿಸಿದ್ರೂ ಏನು ಮಾಡಲಾಗದ ಪರಿಸ್ಥಿತಿ ಇತ್ತು. ಇನ್ನೇನು ಮಾಡೋದು ಅಂತ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಒಟಿಪಿ ಕೇಳದೇ ಇಷ್ಟೊಂದು ಹಣ ಕಟ್ಟಾಗಿದ್ದು ಹೇಗೆ ಅಂತ ತನಿಖೆಗೆ ಇಳಿದಿದ್ದಾರೆ.

ನಕ್ಸಲ್ ದಾಳಿ ಬಾಲಕನ ಮೇಲೆ ಪರಿಣಾಮ ಬೀರಿತ್ತಾ?
ಹೌದು, ಇಂತಹ ಒಂದು ಅನುಮಾನ ಹುಟ್ಟಿದೆ. ಯಾಕೆಂದ್ರೆ ಅದು ಹೇಳಿ ಕೇಳಿ ಚತ್ತೀಸ್​ಘಢ ರಾಜ್ಯ. ಅಲ್ಲಿ ನಕ್ಸಲ್ ದಾಳಿ ಕಾಮನ್. ಮದ್ದು ಗುಂಡುಗಳ ಸದ್ದು ಇದ್ದದ್ದೆ. ಈ ಬಾಲಕ ಕೂಡ ಗನ್ ತೆಗೆದುಕೊಂಡು ಶೂಟ್ ಮಾಡುವ ಗೇಮ್​ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಹೀಗಾಗಿಯೇ ಆತನ ಮೇಲೆ ಏನಾದ್ರೂ ನಕ್ಸಲ್ ದಾಳಿ ಪರಿಣಾಮ ಬೀರಿತಾ ಅನ್ನೋ ಅನುಮಾನವನ್ನು ಹುಟ್ಟುಹಾಕಿದೆ.

ಅದೆಷ್ಟೋ ಬಾಲಕರ ಪ್ರಾಣ ಹೋಗಿದೆ
ಮಕ್ಕಳ ಮೇಲೆ ಪಾಲಕರಿಗೆ ಇರಲಿ ನಿಗಾ

ಪಬ್​ಜಿ ಸೇರಿದಂತೆ ವಿವಿಧ ಆನ್ಲೈನ್ ಗೇಮ್ನಲ್ಲಿ ಎಷ್ಟೋ  ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ.  ಆದ್ರೆ, ಬೇರೆ ಬೇರೆ ಮಾರ್ಗದಲ್ಲಿ ಆ ಗೇಮ್​ಗಳು ಇಂದಿಗೂ ಇವೆ. ಪ್ಲೇ ಸ್ಟೋರ್​​ನಲ್ಲಿ ಸಿಗುತ್ತಿವೆ. ಒಮ್ಮೆ ಆನ್​ಲೈನ್ ಗೇಮ್​ ಗೀಳಿಗೆ ಬಿದ್ದ ಮಕ್ಕಳನ್ನು ಹೊರತರುವುದು ಕಷ್ಟ. ಅದರ ಕ್ರೇಜ್ ಹೆಚ್ಚಿಕೊಂಡರೆ ಮುಗೀತು. ತಾವಾಯಿತು ತಮ್ಮ ಮೊಬೈಲ್ ಆಯಿತು ಅಂತ ಆಡ್ತಾನೆ ಇರ್ತಾರೆ. ಮಕ್ಕಳ ಮೇಲೆ ದೈಹಿಕ ಮತ್ತು ಮಾನಸಿಕವಾಗಿಯೂ ಅದು ಪರಿಣಾಮ ಬೀರುತ್ತೆ. ಮುಂದೊಂದು ದಿನ ಅನಾಹುತ ನಡೆದಾಗಲೇ ಅದರ ಪರಿಣಾಮ ಅರಿವಾಗುವುದು. ಹೀಗಾಗಿ ಪಾಲಕರಾದವರು ತಮ್ಮ ಮಕ್ಕಳ ಮೇಲೆ ಸದಾ ನಿಗಾ ಇಡುವ ಕೆಲಸ ಮಾಡಬೇಕು.

ನೋಡಿದ್ರಲ್ಲ, ಆನ್ಲೈನ್ ಗೇಮ್ ಗೀಳಿಗೆ ಬಿದ್ದ ಬಾಲಕ ಏನು ಮಾಡಿದ್ದಾನೆ ಅಂತ. ಆನ್ಲೈನ್ ಗೇಮ್ನಿಂದ ಆಗುವ ಅನುಹುತಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಪಾಲಕರಾದವರು ಮಕ್ಕಳ ಚಲನವಲನದ ಮೇಲೆ ಕಣ್ಣಿಡಿ ಅನ್ನೋದೆ ನಮ್ಮ ಕಿವಿ ಮಾತು.

The post ಆನ್​ಲೈನ್​ ಕ್ಲಾಸ್​ಗೆ ಮೊಬೈಲ್ ಕೊಡಿಸಿದ್ರೆ ಗೇಮ್ ಕ್ರೇಜ್​​.. ತಾಯಿ ಅಕೌಂಟ್​ನಿಂದ ₹3.2 ಲಕ್ಷ ಹಣ ಮಾಯ appeared first on News First Kannada.

Source: newsfirstlive.com

Source link