ಬೆಂಗಳೂರು: ನಗರದಲ್ಲಿ ಆನ್​ಲೈನ್​ ಫ್ರಾಡ್ ಹೆಚ್ಚಾಗಿರೋ ಹಿನ್ನಲೆಯಲ್ಲಿ ಗೃಹ ಸಚಿವ ಬಸವರಾಜ್​ ಬೊಮ್ಮಾಯಿಯುವರು ನೀಡಿದ ಆದೇಶದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೊಸಾ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸೈಬರ್ ಅಪರಾಧ ತಡೆಗೆ ಬೆಂಗಳೂರು ಪೊಲೀಸರ ಹೊಸ ಪ್ಲಾನ್ ರೂಪಿಸಿದ್ದು, ಸಿ.ಐ.ಆರ್ ( ಸೈಬರ್ ಕ್ರೈಮ್ ಇನ್ಸಿಡೆಂಟ್ ರಿಪೋರ್ಟ್) ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಡಯಲ್ 112, ಅಂದ್ರೆ 112ನೇ ನಂಬರ್​ಗೆ ಕರೆ ಮಾಡಿ, ನಿಮಗಾಗಿರೋ ಸೈಬರ್ ವಂಚನೆ ಬಗ್ಗೆ ದೂರು ನೀಡಲು ಅವಕಾಶ ನೀಡಿದ್ದಾರೆ. ಇತ್ತೀಚಿಗೆ ಹಣಕಾಸು ವಂಚನೆಯ ದೂರುಗಳೇ ಅಧಿಕವಾಗುತ್ತಿರುವ ಹಿನ್ನೆಲೆ ಸೈಬರ್ ಠಾಣೆ ಬಳಿ‌ ಬಂದು ದೂರು ನೀಡುವಷ್ಟರಲ್ಲಿ ವಿಳಂಬವಾಗುತ್ತಿತ್ತು. ಆದ್ರೀಗ ಡಯಲ್ 112ಗೆ ಕರೆ ಮಾಡಿ ಸೈಬರ್ ವಂಚನೆ ಬಗ್ಗೆ ರಿಪೋರ್ಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಪರಾಧ ನಡೆದ ನಂತರದ ತಕ್ಷಣ ಅವಧಿ (ಗೋಲ್ಡನ್ ಅವರ್)ನಲ್ಲಿ ದೂರು ನೀಡಲು ಅವಕಾಶವಿದ್ದು ದೂರು ಪಡೆದ ತಕ್ಷಣ  ಪೊಲೀಸರು ಕಾರ್ಯ ಪ್ರವೃತ್ತರಾಗಲಿದ್ದಾರಂತೆ. ಈಗಾಗಲೇ 1,312 ಖಾತೆಗಳನ್ನ ತಾತ್ಕಾಲಿಕವಾಗಿ ಪೊಲೀಸರು ಜಪ್ತಿ ಮಾಡಿದ್ದಾರೆ.   ಇದುವರೆಗೂ 48 ಕೋಟಿ ರೂಪಾಯಿ ಸೇವ್ ಮಾಡಿರೋ ಪೊಲೀಸರು 1 ಗಂಟೆಯಲ್ಲಿ ದೂರು ನೀಡಿದ್ರೆ ದುಡ್ಡು ಸೇವ್ ಮಾಡಬಹುದು ಅಂತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

The post ಆನ್​ಲೈನ್​ ಫ್ರಾಡ್​ಗೆ ಒಳಗಾಗೋ ಆತಂಕವೇ..? ‘ಡಯಲ್ 112’ ಅಂತಿದ್ದಾರೆ ಪೊಲೀಸ್ appeared first on News First Kannada.

Source: newsfirstlive.com

Source link