ನವದೆಹಲಿ: ಕೊರೊನಾ ಸಂಕಷ್ಟದಲ್ಲಿ ಮಕ್ಕಳ ಆನ್​ಲೈನ್ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ 2500 ಕೋಟಿ ಹಣವನ್ನ ಮೀಸಲಿಟ್ಟಿದೆ. ಇಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಳ್ ನಿಶಾಂಕ್ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಕೂಲ್ ಎಜುಕೇಷನ್ ಸೆಕ್ರೆಟರೀಸ್​ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರ ಆನ್​ಲೈನ್ ಶಿಕ್ಷಣ ಮುಂದುವರಿಸಲು ರಾಜ್ಯಗಳಿಗೆ 2500 ಕೋಟಿ ರೂಪಾಯಿ ಹಣವನ್ನ ಮೀಸಲಿಡುವ ಬಗ್ಗೆ ತನ್ನ ನಿರ್ಧಾರವನ್ನ ಪ್ರಕಟಿಸಿದೆ.

ಇನ್ನು ಸಮಗ್ರ ಶಿಕ್ಷಣದ ಅಡಿಯಲ್ಲಿ ಈಗಾಗಲೇ 5228 ಕೋಟಿ ರೂ.ಗಳಿಗೆ ತಾತ್ಕಾಲಿಕ ಅನುದಾನವನ್ನು ನೀಡಲಾಗಿದೆ. ಇದೇ ವೇಳೆ ರಾಜ್ಯವನ್ನ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು.. COVID-19ರ ಪ್ರಸ್ತುತ ಪರಿಸ್ಥಿತಿ ದುರಾದೃಷ್ಟಕರವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಕಲ್ಯಾಣಕ್ಕೆ ಸರ್ಕಾರ ಹೊಸ ಹೊಸ ಪ್ರಯೋಗಳಿಗೆ ಬದ್ಧವಾಗಿದೆ.

ಸಮಗ್ರ ಶಿಕ್ಷಣದ ಅಡಿಯಲ್ಲಿ ರಾಜ್ಯಗಳ ವಾರ್ಷಿಕ ಕಾರ್ಯ ಯೋಜನೆ ಮತ್ತು ಬಜೆಟ್‌ಗಳ ಅನುಮೋದನೆಗಾಗಿ ಇಲಾಖೆ ಯೋಜನಾ ಅನುಮೋದನೆ ಮಂಡಳಿಯ ಸಭೆಗಳನ್ನು ನಡೆಸಲು ಪ್ರಾರಂಭಿಸಿದೆ.

The post ಆನ್​ಲೈನ್ ಶಿಕ್ಷಣ ಮುಂದುವರಿಸಲು ರಾಜ್ಯಗಳಿಗೆ 2,500 ಕೋಟಿ ಹಣ ಮೀಸಲಿಟ್ಟ ಕೇಂದ್ರ appeared first on News First Kannada.

Source: newsfirstlive.com

Source link