ಬೆಂಗಳೂರು: ಆನ್ ಲೈನ್ ಜೂಜು ರದ್ದು ಕೋರಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ಮುಖ್ಯ ವಿಭಾಗಯ ಪೀಠದಲ್ಲಿ ನಡೆಯಿತು.

ಆನ್ ಲೈನ್ ಗ್ಯಾಂಬ್ಲಿಂಗ್ ನಿಯಂತ್ರಿಸಲು ಸಮ್ಮತಿಯಿದೆ.. ಆದರೆ ಸರ್ಕಾರ ಸ್ಕಿಲ್ ಗೇಮ್ ನಿರ್ಬಂಧಿಸಬಾರದು ಎಂದು ಹೈಕೋರ್ಟ್​ಗೆ ಅನ್ ಲೈನ್ ಗೇಮ್ಸ್ ಒಕ್ಕೂಟ ಮನವಿ ಸಲ್ಲಿಸಿತು. ಇದಕ್ಕೆ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿತು. ಆನ್ ಲೈನ್ ಗ್ಯಾಂಬ್ಲಿಂಗ್ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕು. ಈ ಕುರಿತು ರಾಜ್ಯ ಸರ್ಕಾರ ನಿರ್ಧಾರ ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿತು. ಅರ್ಜಿ ವಿಚಾರಣೆಯನ್ನ ಮುಂದೂಡಿಕೆ ಮಾಡಲಾಯ್ತು.

The post ಆನ್​​ಲೈನ್​ ಗ್ಯಾಂಬ್ಲಿಂಗ್ ನಿರ್ಬಂಧ..? ಸರ್ಕಾರಕ್ಕೆ ಹೈಕೋರ್ಟ್​ ನೀಡಿದ ಸೂಚನೆ ಏನು..? appeared first on News First Kannada.

Source: newsfirstlive.com

Source link