ಆನ್‌ಲೈನ್ ಗೇಮ್ ಚಟ; ಪೋಷಕರು ಮೊಬೈಲ್​ ಕೊಡಿಸಲಿಲ್ಲ ಎಂದು ನೇಣಿಗೆ ಶರಣಾದ ಯುವಕ


ಜೈಪುರ: ಇತ್ತೀಚಿನ ದಿನದಲ್ಲಿ ಮಕ್ಕಳಲ್ಲಿ ಆನ್​ಲೈನ್​ ಗೇಮ್​ಗಳಿಗೆ ಹೆಚ್ಚು ದಾಸರಾಗುತ್ತಿದ್ದಾರೆ. ಎಷ್ಟರ ಮಟ್ಟಿಗೆ ಮೊಬೈಲ್​ ಪೋನ್​ಗೆ ಅಡಿಕ್ಟ್​ ಆಗುತ್ತಿದ್ದಾರೆ ಎಂದರೇ, ಪೋಷಕರು ಮಕ್ಕಳ ಬಳಿ ಮೊಬೈಲ್​ ಕೇಳಿದರೆ ಅದನ್ನು ಹಿಂದಿರುಗಿಸಲು ಮಕ್ಕಳು ಕಿರಿಕಿರಿ ಮಾಡುತ್ತಾರೆ ಹಾಗೂ ಕೋಪಗೊಳ್ಳುತ್ತಾರೆ. ಅವರ ಪೋನ್​ ಅಡಿಕ್ಷನ್​ ಎಷ್ಟರಮಟ್ಟಿಗಿರುತ್ತದೆ ಎಂದರೇ ಕೆಲವೊಮ್ಮೆ ಕೋಪದಲ್ಲಿ ತಮಗೆ ನೋವುಂಟು ಮಾಡಿಕೊಳ್ಳಲು ಕೂಡ ಯೋಚಿಸುವುದಿಲ್ಲ.

ಹೀಗೆ ಮೊಬೈಲ್​ನಲ್ಲಿ ಪಬ್​ಜೀ ಗೇಮ್​ಗೆ ಅಡಿಕ್ಟ್​ ಆಗಿದ್ದ 18ರ ಯುವಕನೋರ್ವ, ತನ್ನ ಪೋಷಕರು ಮೊಬೈಲ್​ ಕೊಡಿಸಿಲ್ಲಾ, ಎಂಬ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜೈಪುರದ ಸೋಡಾಲಾ ಪ್ರದೇಶದಲ್ಲಿ ದ್ವಿತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ ಆನ್​ಲೈನ್​ ಗೇಮ್​ಗಳಿಗೆ ಅದರಲ್ಲಿಯೂ ಪಬ್​ಜೀ ಗೇಮ್​ಗೆ ದಾಸನಾಗಿದ್ದ. ಅವನ ಪೋನ್​ನಲ್ಲಿ ಆತನ ತಾತಾ ಸಹ ಗೇಮ್​ ಆಡುತ್ತಿದ್ದರು, ಆ ಕಾರಣಕ್ಕೆ ಅವನಿಗೆ ಗೇಮ್​ ಆಡಲು ಪೋನ್​ ಸಿಗುತ್ತಿರಲಿಲ್ಲವಾದ ಕಾರಣ, ಆತ ತನ್ನ ಜನ್ಮದಿನಕ್ಕೆ ಮತ್ತೊಂದು ಪೋನ್​ ಕೊಡಿಸುವಂತೆ ತನ್ನ ಪೋಷಕರಲ್ಲಿ ಕೇಳಿರುತ್ತಾನೆ. ಅದಕ್ಕೆ ದ್ವಿತಿಯ ಪಿಯುಸಿ ಪರೀಕ್ಷೆ ಮುಗಿದ ನಂತರ ಹೊಸ ಪೋನ್​ ಕೊಡಿಸುವುದಾಗಿ ಆತಯ ತಂದೆ ಭರವಸೆ ನೀಡಿರುತ್ತಾರೆ. ಪೋಷಕರು ಪೋನ್​ ಕೊಡಿಸಲು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ಯುವಕ ತನ್ನ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ರೀತಿಯಲ್ಲಿ ಪೋನ್​ ಕೊಡಿಸಲಿಲ್ಲ, ಗೇಮ್​ ಆಡಲು ಬಿಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಗೇಮ್​ ಅಡಿಕ್ಷನ್​ ಮಕ್ಕಳನ್ನು ಕೇವಲ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಮಕ್ಕಳ ಮಾನಸಿಕ ಆರೋಗ್ಯದ ಮೇಲು ಬಹಳಾ ದುಷ್ಪರಿಣಾಮವನ್ನು ಬೀರುತ್ತಿರುವುದು ಈಗಾಗಲೇ ಹಲವು ವರದಿಗಳಿಂದ ತಿಳಿದು ಬರುತ್ತಿವೆ. ಇನ್ನಾದರೂ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು.

News First Live Kannada


Leave a Reply

Your email address will not be published. Required fields are marked *