ಆನ್‍ಲೈನ್ ಕ್ಲಾಸ್, ನೆಟ್ವರ್ಕ್‍ಗಾಗಿ ಗುಡ್ಡ ಹತ್ತುತ್ತಿದ ಮಲೆನಾಡ ಮಕ್ಕಳು

ಚಿಕ್ಕಮಗಳೂರು: ಆನ್‍ಲೈನ್ ಶಿಕ್ಷಣಕ್ಕಾಗಿ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿದು ಬೆಟ್ಟ-ಗುಡ್ಡ ಏರಿ, ಕಾಡುಮೇಡು ಅಲೆಯುತ್ತಾ ಶಿಕ್ಷಣದಿಂದ ವಂಚಿತರಾಗುತ್ತಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕೋರೆ ಗ್ರಾಮದಲ್ಲಿ ನಡೆದಿದೆ.

ಪುಟ್ಟ-ಪುಟ್ಟ ಮಕ್ಕಳ ಈ ಪರಿಸ್ಥಿತಿ ಕೇವಲ ಇದೊಂದೇ ಗ್ರಾಮದಲ್ಲಿಲ್ಲ. ಜಿಲ್ಲೆಯ ಐದು ಮಲೆನಾಡ ತಾಲೂಕಿನ ಹತ್ತಾರು ಗ್ರಾಮದಲ್ಲಿ ಇದೇ ಸಮಸ್ಯೆ ಇದ್ದು, ಮಕ್ಕಳು ನೆಟ್ವರ್ಕ್ ಸಿಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಮಕ್ಕಳ ಜೊತೆ ಪೋಷಕರು ಅಲ್ಲೇ ಹೋಗಿ ಮಕ್ಕಳನ್ನ ನೋಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಳಸ ಪಟ್ಟಣದ ಈ ಕೋರೆ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು ಕಷ್ಟವೋ-ಸುಖವೋ ಹೆತ್ತವರು ಮಕ್ಕಳನ್ನ ಖಾಸಗಿ ಶಾಲೆಗೂ ಸೇರಿಸಿದ್ದಾರೆ. 24 ಪೆÇೀಷಕರು ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಮಕ್ಕಳು ಮೊಬೈಲ್‍ಗೆ ನೆಟ್ವರ್ಕ್ ಸಿಗದೆ ಕಾಡುಮೇಡು ಅಲೆಯುತ್ತಿದ್ದಾರೆ. ಶಾಲೆಯವರು ಆನ್‍ಲೈನ್ ಕ್ಲಾಸ್ ಮಾಡುತ್ತಾರೆ. ಆದರೆ, ಮಕ್ಕಳಿಗೆ ನೆಟ್ವರ್ಕ್ ಸಿಗುತ್ತಿಲ್ಲ. ಕೋರಿಯಿಂದ 12 ಕಿ.ಮೀ. ದೂರದ ಆನೆಗುಂಡಿ ಗ್ರಾಮಕ್ಕೆ ಬರಬೇಕು. ಆದರೆ, ಅಲ್ಲೂ ಸರಿಯಾಗಿ ನೆಟ್ವರ್ಕ್ ಸಿಗಲ್ಲ. ಸಿಕ್ಕರೆ ಸಿಕ್ಕಿತು. ಇಲ್ಲವಾದರೆ ಇಲ್ಲ. ಮಕ್ಕಳು ಕೋರೆ ಗ್ರಾಮದ ಕಲ್ಲು ಕ್ವಾರಿ ಬಳಿ ಬಂದು ನೆಟ್ವರ್ಕ್‍ಗಾಗಿ ಹುಡುಕಾಡುತ್ತಿದ್ದಾರೆ.  ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕೆಳಕ್ಕೆ ಬೀಳೋ ಸಾಧ್ಯತೆಯೂ ಇದೆ. ಮೊದಲು ಇಲ್ಲಿ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಫ್ರೀಕ್ವೆನ್ಸಿ ಚೆನ್ನಾಗಿತ್ತು. ಆಗ ನೆಟ್ವರ್ಕ್ ಕೂಡ ಚೆನ್ನಾಗಿ ಸಿಗುತ್ತಿತ್ತು. ಆದರೆ ಈಗ, ಫ್ರೀಕ್ವೆನ್ಸಿಯೂ ಇಲ್ಲ. ನೆಟ್ವರ್ಕೂ ಇಲ್ಲ. ಕರೆಂಟೂ ಇರಲ್ಲ. ಮಕ್ಕಳು ಹಳ್ಳಿಯಲ್ಲಿ ಓದೋದು ಅಸಾಧ್ಯವಾಗಿದೆ. ಕೋರೆ ಗ್ರಾಮ ಇಡಕಣಿ ಪಂಚಾಯಿತಿಗೆ ಸೇರುತ್ತೆ. ಅಲ್ಲಿಗೆ ಬರೋಕೆ ಬಸ್ಸು ಇಲ್ಲ. ಹಾಗಾಗಿ, ಮಕ್ಕಳು ನೆಟ್ವರ್ಕ್ ಹುಡುಕಿಕೊಂಡು ಕಾಡುಮೇಡು ಅಲೆದು ಓದುವಂತಾಗಿದೆ. ಇಲ್ಲಿನ ಜನ ಹೆಚ್ಚಾಗಿ ಅವಲಂಬಿಸಿರೋದು ಬಿ.ಎಸ್.ಎನ್.ಎಲ್. ನೆಟ್ವರ್ಕ್. ಆದ್ರೀಗ, ಬಿ.ಎಸ್.ಎನ್.ಎಲ್. ಹೆಸರಿಗಷ್ಟೆ ಇರೋದು. ಇರುವುದರಲ್ಲಿ ಏರ್‍ಟೆಲ್, ಜಿಯೋ ಪರವಾಗಿಲ್ಲ. ಆದರೆ, ಇಲ್ಲಿ ಆ ನೆಟ್ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಮಳೆ-ಗಾಳಿ ಬಂತೆಂದರೆ ಮತ್ತಷ್ಟು ಸಮಸ್ಯೆ. ಹಾಗಾಗಿ, ಮಕ್ಕಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನೆಟ್ವರ್ಕ್‍ಗಾಗಿ ಕಾಡುಮೇಡು ಅಲೆಯುತ್ತಿದ್ದಾರೆ. ಮಕ್ಕಳ ಜೊತೆ ಹೆತ್ತವರು ಕೂಡ ಕಾಡು-ಮೇಡು ಅಲೆದು ನೆಟ್ವರ್ಕ್ ಸಿಗುವ ಕಡೆ ಮಕ್ಕಳ ಜೊತೆ ಕಾಲಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

The post ಆನ್‍ಲೈನ್ ಕ್ಲಾಸ್, ನೆಟ್ವರ್ಕ್‍ಗಾಗಿ ಗುಡ್ಡ ಹತ್ತುತ್ತಿದ ಮಲೆನಾಡ ಮಕ್ಕಳು appeared first on Public TV.

Source: publictv.in

Source link