ನವದೆಹಲಿ: ಧ್ವನಿ ಮೂಲಕ ಸಂದೇಶಗಳನ್ನು ರವಾನಿಸುವ  ಆ್ಯಪ್ ಗಳ ಪಟ್ಟಿಯಲ್ಲಿ ಕ್ಲಬ್ ಹೌಸ್ ಕೂಡಾ ಒಂದು. ಈ ಕ್ಲಬ್ ಹೌಸ್ ಆ್ಯಪ್ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಜನಜನಿತವಾಗುತ್ತಿದ್ದು, ಈ ನಡುವೆ ನಕಲಿ ಕ್ಲಬ್ ಹೌಸ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹರಿದಾಡುತ್ತಿದೆ.

ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಆ್ಯಪಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆಗೊಂಡ ಈ ಆ್ಯಪ್, ಈಗಾಗಲೇ ಬರೊಬ್ಬರಿ 8.1 ಮಿಲಿಯನ್ ಡೌನ್ ಲೋಡ್ ಗಳನ್ನು ಹೊಂದುವ ಮೂಲಕ ಅತೀ ಹೆಚ್ಚು ಡೌನ್ ಲೋಡ್ ಕಂಡ  ಆ್ಯಪ್ ಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಆದರೆ ಸದ್ಯ ಈ ಆ್ಯಪ್ ಆ್ಯಂಡ್ರಾಯ್ಡ್ ಆವೃತ್ತಿಯಲ್ಲಿ ಬಳಕೆದಾರರಿಗೆ ಲಭ್ಯವಿಲ್ಲ. ಆದರೆ ಇದೀಗ ಕ್ಲಬ್ ಹೌಸ್ ಹೆಸರಿನಲ್ಲಿ ಹಲವಾರು ನಕಲಿ ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್ ಕಾಣಿಸಿಕೊಂಡಿದೆ.

ಇದನ್ನೂ ಓದಿ:ರೈಲ್ವೆ  ನಿಲ್ದಾಣ ನೂತನ ಕಟ್ಟಡ ಉದ್ಘಾಟನೆ ಶೀಘ್ರ

ಈ ನಕಲಿ ಆ್ಯಪ್ ಗಳನ್ನು ಬೇರೆ ಬೇರೆ ಡೆವಲಪರ್ ಗಳು ಸಿದ್ಧಪಡಿಸಿದ್ದು, ನಕಲಿ ಲೋಗೊ ವನ್ನೂ ಬಳಸಲಾಗಿದೆ. ಅಲ್ಲದೆ ಒಂದು ಆ್ಯಪ್ ನಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಟೋಪಿ ಧರಿಸಿರುವ ವ್ಯಕ್ತಿ ಚಿತ್ರವನ್ನು ಒಳಗೊಂಡಿದೆ ಎಂದು ವರದಿಯಾಗಿದೆ.

ಈ ನಡುವೆ ಇನ್ನೊಂದು ಕ್ಲಬ್ ಹೌಸ್ ಅಪ್ಲಿಕೇಶನ್ ಸಾಪ್ಟ್ ವೇರ್ ತಂಡಗಳಿಗೆ ಪ್ರೋಜೆಕ್ಟ್ ಮ್ಯಾನೇಜ್ ಮೆಂಟ್ ಟೂಲ್ ಗಳನ್ನು ಒದಗಿಸುತ್ತಿದೆ. ಹಲವಾರು ಆ್ಯಂಡ್ರಾಯ್ಡ್ ಬಳಕೆದಾರರು ಈ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಟೂಲ್ ಗಳನ್ನು ಡೌನ್ ಲೋಡ್ ಮಾಡಿದ್ದು, ನಕಲಿ ಎಂದು ತಿಳಿದ ಬಳಿಕ ಅನ್ಇನ್ ಸ್ಟಾಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More