ಬಿಹಾರ್ನ ಮುಜಾಫರ್ಪುರ್ ನಗರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ದುರಂತ ಸಂಭವಿಸಿದೆ. ಶಸ್ತ್ರ ಚಿಕಿತ್ಸೆಯ ತೀವ್ರ ಸೋಂಕಿನ ನಂತರ 40 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದು, ಇದೀಗ ದೃಷ್ಟಿ ಕಳೆದುಕೊಂಡವರ ಸಂಖ್ಯೆ 65ಕ್ಕೆ ಏರಿದೆ.
ನವೆಂಬರ್ 22 ಮತ್ತು 27ರ ನಡುವೆ ನಡೆದ ಶಸ್ತ್ರ ಚಿಕಿತ್ಸೆ ನಂತರ, ಹಲವರಿಗೆ ತೀವ್ರವಾದ ಕಣ್ಣಿನ ಸೋಂಕು ಉಂಟಾಯಿತು. ಮಂಗಳವಾರದವರೆಗೆ 25 ಸಂತ್ರಸ್ತರು ಪತ್ತೆಯಾಗಿದ್ದಾರೆ. ಪಾಟ್ನಾದ ಆಸ್ಪತ್ರೆಗಳಲ್ಲಿ ಇದುವರೆಗೂ 12 ಜನರ ಸೋಂಕಿತ ಕಣ್ಣುಗಳನ್ನು ತೆಗೆದುಹಾಕಿದ್ದಾರೆ, ಮುಜಾಫರ್ಪುರದ ಆಸ್ಪತ್ರೆಯಲ್ಲಿ ಉಳಿದ 53 ಮಂದಿಗೂ ಇದೇ ಸಲಹೆ ಕೊಡಲಾಗಿದೆ.