ಆಪರೇಷನ್ ಕಮಲ ಆರೋಪ- ಜೆಡಿಎಸ್​​ ದೂರು ಆಧರಿಸಿ ಅರಸೀಕೆರೆ ಠಾಣೆಯಲ್ಲಿ FIR

ಆಪರೇಷನ್ ಕಮಲ ಆರೋಪ- ಜೆಡಿಎಸ್​​ ದೂರು ಆಧರಿಸಿ ಅರಸೀಕೆರೆ ಠಾಣೆಯಲ್ಲಿ FIR

ಹಾಸನ: ಅರಸೀಕೆರೆಯಲ್ಲಿ ನಗರಸಭೆ ಅಧಿಕಾರಕ್ಕಾಗಿ ಆಪರೇಷನ್ ಕಮಲ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ವಾರ್ಡ್ ಸದಸ್ಯೆ ಕಲೈ ಅರಸಿ ದೂರು ಆಧರಿಸಿ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ.

ನಗರಸಭೆಯ ಓರ್ವ ಸದಸ್ಯ ಹಾಗೂ ಮತ್ತೋರ್ವ ಸದಸ್ಯೆ ಪತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದ್ದು, ತಮಗೆ ಬಲವಂತವಾಗಿ ಹಣ ನೀಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದರು ಎಂದು ಕಲೈ ಅರಸಿ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಸಂತೋಷ್ ‌ಬಗ್ಗೆಯೂ ಕಲೈ ಅರಿಸಿ ದೂರು ದಾಖಲಿಸಿದ್ದಾರೆ. ಆದರೆ ಕಲೈ ಅರಸಿ‌ ಮನೆಗೆ ಸಂತೋಷ್ ನೇರವಾಗಿ ಹೋಗದ ಹಿನ್ನೆಲೆಯಲ್ಲಿ ಪೊಲೀಸರು ಆತನ ಹೆಸರನ್ನು ಕೈಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಗರಸಭೆ ಸದಸ್ಯ ಹರ್ಷವರ್ಧನ್ ಹಾಗೂ ಮತ್ತೋರ್ವ ಸದಸ್ಯೆ ಆಯಿಷಾ ಪತಿ ಸಿಕಂದರ್ ವಿರುದ್ಧ ಕೇಸ್ ದಾಖಲಾಗಿದ್ದು, ಸಿಕಂದರ್, ಹರ್ಷವರ್ಧನ್ ಮತ್ತೆ ಇಬ್ಬರು ಇತರರು ಎಂದು ಎಫ್​​ಐಆರ್​​​ನಲ್ಲಿ ಉಲ್ಲೇಖಿಸಲಾಗಿದೆ. ಕಲೈ ಅರಸಿ ಅವರು ಎಸ್​​ಪಿ, ರಾಜ್ಯಪಾಲ, ಸಿಎಂ ಗೃಹ ಸಚಿವ, ಗೃಹ ಕಾರ್ಯದರ್ಶಿಗೂ ದೂರು ನೀಡಿದ್ದು, ಇದೇ ವೇಳೆ ತಮಗೆ ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ₹10 ಲಕ್ಷ ಹಣ ಮುಂದಿಟ್ಟು ಇದು ‘ಆಪರೇಷನ್ ಕಮಲ’ದ್ದು ಎಂದು ರೇವಣ್ಣ ಗಂಭೀರ ಆರೋಪ

The post ಆಪರೇಷನ್ ಕಮಲ ಆರೋಪ- ಜೆಡಿಎಸ್​​ ದೂರು ಆಧರಿಸಿ ಅರಸೀಕೆರೆ ಠಾಣೆಯಲ್ಲಿ FIR appeared first on News First Kannada.

Source: newsfirstlive.com

Source link