ಆಪ್ ಆದ್ಮಿ ರಾಜಕೀಯ ಅನಾಥಾಶ್ರಮ ಅಲ್ಲ: ಯುವಕರೇ ರಾಜಕೀಯಕ್ಕೆ ಬನ್ನಿ ಎಂದ ಭಾಸ್ಕರ್ ರಾವ್ | Aap Admi party is not a political orphanage: young people come into politics says bhaskar rao


ಆಪ್ ಆದ್ಮಿ ರಾಜಕೀಯ ಅನಾಥಾಶ್ರಮ ಅಲ್ಲ: ಯುವಕರೇ ರಾಜಕೀಯಕ್ಕೆ ಬನ್ನಿ ಎಂದ ಭಾಸ್ಕರ್ ರಾವ್

ಆಪ್‌‌ ಮುಖಂಡ ಭಾಸ್ಕರ್ ರಾವ್

ವಿಜಯಪುರ: ಆಪ್ ಆದ್ಮಿ (Aap Admi) ರಾಜಕೀಯ ಅನಾಥಾಶ್ರಮ ಅಲ್ಲ. ಟಿಕೆಟ್ ನೀಡಬೇಕಾದರೆ ಮೂರು ಟೆಸ್ಟ್ ಆಗುತ್ತದೆ ಎಂದು ಪಕ್ಷಕ್ಕೆ ವಿವಿಧ ಮುಖಂಡರ ಹಾಗೂ ಯುವಕರ ಸೇರ್ಪಡೆ ಕಾರ್ಯಕ್ರಮ ಬಳಿಕ ವಿಜಯಪುರದಲ್ಲಿ ಆಪ್‌‌ ಮುಖಂಡ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಲಾಗುತ್ತದೆ. ಜನ ಸಾಮಾನ್ಯರು ಜನಪ್ರತಿನಿಧಿಗಳಾಗಬೇಕು. ಒಳ್ಳೆ ವಿಚಾರವಿಟ್ಟುಕೊಂಡು ಯುವಕರು ರಾಜಕೀಯಕ್ಕೆ ಬನ್ನಿ ಎಂದು ಭಾಸ್ಕರ್ ರಾವ್ ಹೇಳಿದರು. ಸಾಮಾನ್ಯರೇ ನಮ್ಮ ಅಭ್ಯರ್ಥಿಗಳು. ಜಾತಿ ಹೆಸರು ನಮ್ಮ ಪಕ್ಷದಲ್ಲಿಲ್ಲಾ. ನೀವ್ ಮಾಡಿಲ್ವಾ ಎಂದು ಒಂದು ಪಕ್ಷವನ್ನು ಮತ್ತೊಂದು ಪಕ್ಷದವರು ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ. ಅಭಿವೃದ್ಧಿ ಕೆಲಸ ಮಾಡಬೇಕಿದೆ. ಧರ್ಮ‌-ಜಾತಿ ಇಲ್ಲಿ ಇಲ್ಲಾ. ಆಮ್ ಆದ್ಮಿ‌ಜನ ಸಾಮನ್ಯ ಪಕ್ಷ. ರಾಜ್ಯ ಸುಮಾರು 7.5 ಲಕ್ಷ‌ ಕೋಟಿ‌ ಸಾಲ ಹೊಂದಿದೆ. ಜನರಿಗೆ ಬಜೆಟ್ ತಲಪುತ್ತಿಲ್ಲ.

ರಾಜ್ಯದ ಬಜೆಟ್ ಗಾತ್ರ ದೊಡ್ಡದಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರು ವೈಯುಕ್ತಿಕವಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ದುರಾಸೆ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ಜನರು ರಾಷ್ಟ್ರೀಯ ಪಕ್ಷಗಳ ಬಗ್ಗೆ ನಿರಾಸೆ ಹೊಂದಿದ್ದಾರೆ. ಪಕ್ಷ ಸಂಘಟನೆ ಜಿಲ್ಲಾ ತಾಲೂಕು ಮಟ್ಟದಲ್ಲಿ ಆಗಬೇಕಿದೆ. ಪಂಜಾಬ್ ಫಲಿತಾಂಶ ಪ್ರೇರಣೆಯೇ ಕಾರಣ. ಇದಕ್ಕೆ ದೆಹಲಿ ಪಂಜಾಬ್​ನಲ್ಲಿ ಅಧಿಕಾರ ಹಾಗೂ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಆಮ್ ಆದ್ಮಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಲಿದೆ ಎಂದು ಹೇಳದರು.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಗ್ಗೆ ಭಾಸ್ಕರ್ ರಾವ್ ಮಾತನಾಡಿದ್ದು, ಇದು ದುಃಖಕರ ಘಟನೆ. ದುರಾಚಾರ ಹಾಗೂ ಭ್ರಷ್ಟಾಚಾರದ ಕಾರಣ ಇಂಥ ಘಟನೆ ನಡೆದಿದೆ. ಆರ್ಡಿಪಿಆರ್ ಸಚಿವರು ಮೌಖಿಕವಾಗಿ ಹೇಳಿದ ಕಾರಣ ಗುತ್ತಿಗೆದಾರ ಕಾಮಗಾರಿ ಮಾಡಿದ್ದಾರೆ. ಸಚಿವರು ಹೇಳಿದ ಕಾರಣ ಅಧಿಕಾರಿಗಳು ಸಹ ಸುಮ್ಮನಾಗಿದ್ದಾರೆ. ಕಾಮಗಾರಿ ಬಳಿಕ ಹಣ ನೀಡಬೇಕಿತ್ತು. ಅದಕ್ಕಾಗಿ ಕಮೀಷನ್ ಹಣ ಕೇಳಬಾರದಿತ್ತು. ಘಟನೆ ಕಾರಣ ಸಚಿವ ಈಶ್ವರಪ್ಪ ಅರೆಸ್ಟ್ ಆಗಿಲ್ಲಾ. ಜನ ಸಾಮಾನ್ಯರಾಗಿದ್ದರೆ ಪೊಲೀಸರು ಆಗಲೇ ಬಂಧಿಸುತ್ತಿದ್ದರು. ಸರ್ಕಾರದ ಒತ್ತಡದಿಂದ ಸಚಿವ ಈಶ್ವರಪ್ಪ ಬಂಧನವಾಗಿಲ್ಲಾ. 108 ಕಾಮಗಾರಿಗಳು ಅಲ್ಲಿ ನಡೆದಿದ್ದರೂ ವರ್ಕ್ ಆರ್ಡರ್ ನೀಡಿಲ್ಲಾ. ಭ್ರಷ್ಟಾಚಾರ ಪೆಡಂಭೂತವಾಗಿ ಬೆಳೆಯಲು‌ ಕಾಂಗ್ರೆಸ್‌ ಕಾರಣವೆಂದು ಭಾಸ್ಕರ್‌ರಾವ್ ಆರೋಪ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *