ಆಫೀಸ್​ ಅಲ್ಲಿ ಕೆಲಸದ ಮಧ್ಯೆ ಹಸಿವಾದರೆ ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ | Weight Loss: Enjoy these snacks during Office Time


ಪದೇ ಪದೇ ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಳವಾಗುವುದಿಲ್ಲ, ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ.

ಪದೇ ಪದೇ ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಳವಾಗುವುದಿಲ್ಲ, ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀವು ಕಚೇರಿಯಲ್ಲಿದ್ದಾಗ ಕೆಲಸದ ಮಧ್ಯೆ ಹಸಿವಾದಾಗ ಎಲ್ಲೋ ಹೋಗಿ ತಿಂಡಿ ತಿಂದು ಬರಲು ಸಾಧ್ಯವಿಲ್ಲ, ಹೀಗಾಗಿ ಈ ತಿನಿಸುಗಳು ನಿಮ್ಮ ಹೊಟ್ಟೆಯನ್ನು ತುಂಬಿಸುವುದರ ಜತೆಗೆ ನಿಮ್ಮ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.

ಈ ಆಹಾರವನ್ನು ಸೇವಿಸಿ
ಬಾದಾಮಿ: ನೀವು ನಿಮ್ಮ ಡಯೆಟ್​ನಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳಬಹುದು, ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಅಷ್ಟೇ ಅಲ್ಲದೆ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಈ ಹಾಗೂ ಆ್ಯಂಡಿಆಕ್ಸಿಡೆಂಟ್ಸ್​ಗಳು ಇರುತ್ತವೆ. ಪ್ರೋಟೀನ್ ಹಾಗೂ ಫೈಬರ್​ನಿಂದಾಗಿ ನೀವು ಸಾಕಷ್ಟು ಸಮಯಗಳ ಕಾಲ ಹೊಟ್ಟೆ ತುಂಬಿದ ಅನುಭವವಾಗುವುದು.

ಪಾಪ್​ಕಾರ್ನ್​: ಪಾಪ್​ಕಾರ್ನ್​ನಲ್ಲಿ ಫೈಬರ್ ಅಂಶ ಉತ್ತಮವಾಗಿರಲಿದೆ. ಪಾಪ್​ಕಾರ್ನ್​ ನಿಮ್ಮನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಕೂಡ ನಿಮ್ಮ ಹೊಟ್ಟೆಯನ್ನು ತುಂಬಿದಂತಿಡಲು ನೆರವಾಗುತ್ತದೆ. ನೀವು ಪಾಪ್​ಕಾರ್ನ್ ಅನ್ನು ನಿಮ್ಮ ಡಯೆಟ್​ನಲ್ಲಿ ಸೇರಿಸಬಹುದು.

ಮೊಳಕೆಕಾಳು: ನಿಮ್ಮ ಆಹಾರದಲ್ಲಿ ಮೊಳಕೆಕಅಳುಗಳನ್ನು ಸೇರಿಸಿಕೊಳ್ಳಬಹುದು. ಈ ಮೊಳಕೆಕಾಳುಗಳು ತುಂಬಾ ಆರೋಗ್ಯಕರ ಮತ್ತು ಟೇಸ್ಟಿ. ಇದರಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ.
ಇದರಿಂದ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ ನೀವು ಅನಾರೋಗ್ಯಕರ ಆಹಾರವನ್ನು ಸೇವಿಸುವುದಿಲ್ಲ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಓಟ್ಸ್:  ನೀವು ಓಟ್ಸ್ ಸೇವಿಸಬಹುದು. ಇದು ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿದೆ. ಇದು ಫೈಬರ್ ಅನ್ನು ಹೊಂದಿರುತ್ತದೆ. ಇದನ್ನು ಸೇವಿಸಿದ ನಂತರ, ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಾಗುತ್ತದೆ. ಈ ಕಾರಣದಿಂದಾಗಿ ನೀವು ಹೆಚ್ಚು ಅನಾರೋಗ್ಯಕರ ಆಹಾರವನ್ನು ಸೇವಿಸಲು ಸಾಧ್ಯವಾಗುವುದಿಲ್ಲ.

ಹಣ್ಣು: ನಿಮ್ಮ ಆಹಾರದಲ್ಲಿ ಋತುಮಾನದ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು. ಅವು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಹಣ್ಣುಗಳಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದರಿಂದ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.