ಆಫ್ರಿಕಾದಿಂದ ಬಂದ 6 ಮಂದಿಗೆ ಕೊರೊನಾ; ‘ಒಮಿಕ್ರಾನ್’ ಯಾವ ರಕ್ತದ ಗುಂಪಿನವ್ರ ಮೇಲೆ ಹೆಚ್ಚು ಅಟ್ಯಾಕ್ ಮಾಡುತ್ತಂತೆ ಗೊತ್ತಾ..?


ನವದೆಹಲಿ: ದಕ್ಷಿಣ ಆಫ್ರಿಕಾ ತಳಿ ಮತ್ತಷ್ಟು ದಿಗಿಲು ಬಡಿಸಿದೆ. ಗಡಿ ದಾಟಿ ದಾಂಗುಡಿ ಇಡುತ್ತಿರೋ ಒಮಿಕ್ರಾನ್ ಭೀತಿಯ ಕೋಟೆ ನಿರ್ಮಿಸ್ತಿದೆ. ಆಫ್ರಿಕಾದಿಂದ ಮುಂಬೈಗೆ ಬಂದ 6 ಜನರಿಗೆ ಸೋಂಕು ದಾಳಿ ಮಾಡಿದೆ. ಇದು ಒಮಿಕ್ರಾನ್ ವೈರಸ್ ಇರಬಹುದಾ ಎಂಬ ಆತಂಕ ಹುಟ್ಟಿಸಿದೆ. ಜೊತೆಗೆ ವಿಮಾನಯಾನ ನಿರ್ಬಂಧ ಮಾಡಿದ್ರೂ ಕೂಡ ಒಮಿಕ್ರಾನ್ ಹರಡೋದನ್ನ ತಡೆಕಾಗಲ್ಲ ಎಂಬ ಆತಂಕಕಾರಿ ಮಾಹಿತಿ ಗೊತ್ತಾಗಿದೆ.

ಗಡಿ ದಾಟಿ ಕೇಕೆ ಹಾಕುತ್ತಿರೋ ಒಮಿಕ್ರಾನ್ ಅಟ್ಟಹಾಸ, ಮುಂದುವರೆಯುತ್ತಲೇ ಇದೆ. ಅದರಲ್ಲೂ ಡೆಲ್ಟಾ ಡೆಂಗುರ ಹೊಡೆಯುತ್ತಿರೋ ಹೊತ್ತಲ್ಲೇ ಹೊಸ ತಳಿ ಇನ್ನಷ್ಟು ಭೀತಿ ಹುಟ್ಟಿಸಿದೆ. ಭಾರತದ ಹಲವು ರಾಜ್ಯಗಳಿಗೆ ಒಮಿಕ್ರಾನ್ ಅಲರ್ಟ್ ಮಾಡುವಂತೆ ಮಾಡಿದೆ. ಏರ್​ಪೋರ್ಟ್​, ಬಸ್ ಮತ್ತು ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ಎಂಬ ಕಾಟ ಶುರುವಾಗಿದೆ. ಹೀಗಿರುವಾಗ ಒಂದೊಂದೆ ರಾಜ್ಯಗಳಲ್ಲಿ ಒಮಿಕ್ರಾನ್ ಬೇರು ಚಿಗುರುತ್ತಿದ್ಯಾ ಅನ್ನೋ ಆತಂಕ ಹುಟ್ಟು ಹಾಕಿದೆ.

ಆಫ್ರಿಕಾದಿಂದ ಮುಂಬೈಗೆ ಬಂದ 6 ಜನರಲ್ಲಿ ಕೊರೊನಾ
ಸೋಂಕಿತರಿಗೆ ಒಮಿಕ್ರಾನ್ ದಾಳಿ ಮಾಡಿರುವ ಆತಂಕ

ಹೊಸ ತಳಿಯ ತಳಮಳದಲ್ಲಿರುವ ಮುಂಬೈ ಮಂದಿಗೆ ದಿಗಿಲು ಬಡಿದಂಗಾಗಿದೆ. ಡೆಲ್ಟಾ ಭೀತಿ ನಡುವೆಯೂ ವಿದೇಶದಿಂದ ಬಂದ ಹಲವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇವರಲ್ಲಿ ದಾಳಿ ಮಾಡಿರೋ ರೂಪಾಂತರಿ ಒಮಿಕ್ರಾನ್ ತಳಿನಾ ಅನ್ನೋ ಆತಂಕ ಮೂಡಿಸಿದೆ.

ಮಹಾರಾಷ್ಟ್ರದಲ್ಲಿ 7 ಮಂದಿಗೆ ಸೋಂಕು!
ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಬಂದಿಳಿದ 6 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸ್ಯಾಂಪಲ್​ಗಳನ್ನ ಈಗಾಗಲೇ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್​ಗೆ ರವಾನೆ ಮಾಡಲಾಗಿದೆ ಅಂತ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ ಜಿಂಬಾಬ್ವೆಯಿಂದ ಪುಣೆಗೆ ಬಂದ ವ್ಯಕ್ತಿಗೂ ಕೊರೊನಾ ದಾಳಿ ಮಾಡಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಮುಂಬೈ ಮತ್ತು ಪುಣೆ ಏರ್​​ಪೋರ್ಟ್​ನಲ್ಲಿ ಕಟ್ಟೆಚ್ಚರವಹಿಸಿದೆ. ಎಲ್ಲಾ ಕಡೆ ತಪಾಸಣೆ ಮಾಡಲಾಗಿದೆ.

ಎ, ಬಿ ಮತ್ತು ಆರ್​​ಎಚ್​​+ ರಕ್ತದ ಗುಂಪಿನವರಿಗೆ ಒಮಿಕ್ರಾನ್​!
ರೂಪಾಂತರಿ ಸೋಂಕಿನಿಂದ ಕಂಗೆಟ್ಟಿರೋ ಜನರಿಗೆ ಒಮಿಕ್ರಾನ್ ಮತ್ತಷ್ಟು ಶಾಕ್ ಕೊಟ್ಟಿದೆ. ದೆಹಲಿಯ ಸರ್.ಗಂಗಾರಾಮ್ ಆಸ್ಪತ್ರೆ ಡಿಪಾರ್ಟ್​ಮೆಂಟ್ ಆಫ್ ರಿಸರ್ಚ್​ ಹಾಗೂ ಡಿಪಾರ್ಟ್​ಮೆಂಟ್​ ಆಫ್​ ಬ್ಲಡ್ ಟ್ರಾನ್ಸ್​​ಫ್ಯೂಷನ್ ಮೆಡಿಸಿನ ಆಧ್ಯಯನ ನಡೆಸಿದೆ. ಅದೇನಂದ್ರೆ ಎ, ಬಿ ಮತ್ತು ಆರ್​​ಎಚ್​​+ ರಕ್ತದ ಮಾದರಿ ಇರುವ ಜನರಿಗೆ ಒಮಿಕ್ರಾನ್​ ತಳಿ ದಾಳಿ ಮಾಡಲಿದೆ ಎಂಬ ಆತಂಕಕಾರಿ ಮಾಹಿತಿ ನೀಡಿದ್ದಾರೆ.

ಹೊಸ ತಳಿ ವಿರುದ್ಧ ಹೋರಾಡುತ್ತಾ ಕೋವ್ಯಾಕ್ಸಿನ್​?
ಇನ್ನೊಂದ್ಕಡೆ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ನೀಡಲಾಗ್ತಿದೆ. ಆದ್ರೆ ಡೆಲ್ಟಾ ಹಾಗೂ ಹೊಸ ತಳಿ ಒಮಿಕ್ರಾನ್​​ ವಿರುದ್ಧ ಸದ್ಯ ಬಳಕೆಯಾಗುತ್ತಿರೋ ಲಸಿಕೆಗಳು ಹೋರಾಟ ಮಾಡ್ತಾವಾ ಅನ್ನೋ ಪ್ರಶ್ನೆ ಎದ್ದಿದೆ. ಈ ನಡುವೆ ಒಮಿಕ್ರಾನ್ ವೈರಸ್ ವಿರುದ್ಧ ಕೋವ್ಯಾಕ್ಸಿನ್​ ಲಸಿಕೆ ಪರಿಣಾಮಕಾರಿಯಾಗಿದ್ಯಾ ಅನ್ನೋ ಬಗ್ಗೆ ಭಾರತ್ ಬಯೋಟೆಕ್​ ಅಧ್ಯಯನ ನಡೆಸ್ತಿದೆ.

ವಿಮಾನಯಾನ ನಿರ್ಬಂಧ ಮಾಡಿದ್ರೂ ಸುಮ್ಮನಿರಲ್ಲ ಒಮಿಕ್ರಾನ್?
ಕೊರೊನಾ ಹೆಡೆಮುರಿ ಕಟ್ಟಲು ವಿಮಾನಯಾನಕ್ಕೆ ನಿರ್ಬಂಧ ಒಂದೇ ದಾರಿಯಾಗಿತ್ತು. ಆದ್ರೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹಾಕಿದ್ರೂ ಕೂಡ ಒಮಿಕ್ರಾನ್​ ತಡೆಯೋಕೆ ಆಗಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಸದ್ಯ ಹೇಗೆ, ಯಾರ ದೇಹದಲ್ಲಿ ಹೊಕ್ಕೂ ದೇಹ ಪ್ರವೇಶಿಸುತ್ತದೆ ಅನ್ನೋ ದುಗುಡು ಮನೆ ಮಾಡಿದೆ. ಒಮಿಕ್ರಾನ್ ಅಟ್ಟಹಾಸಕ್ಕೆ ಬ್ರೇಕ್​ ಹಾಕಲು ರಾಜ್ಯ ಸರ್ಕಾರಗಳು ಎಲ್ಲಿಲ್ಲದ ಪ್ರಯತ್ನ ನಡೆಸ್ತಿವೆ. ಆದ್ರೆ ಒಮಿಕ್ರಾನ್ ಓಟ ನಿಲ್ಲುತ್ತಾ ಅನ್ನೋದೇ ಮಿಲಿಯನ್​​ ಡಾಲರ್​​ ಪ್ರಶ್ನೆ.

News First Live Kannada


Leave a Reply

Your email address will not be published. Required fields are marked *