ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯ ಹವಾಮಾನದ ಜೊತೆಗಿನ ಯುದ್ಧದೊಂದಿಗೆ ಆಮೆಗತಿಯಲ್ಲಿ ಸಾಗ್ತಿದೆ. ಸಹಜವಾಗಿಯೇ ಇದು ಅಭಿಮಾನಿಗಳಲ್ಲಿ ಪಂದ್ಯದ ಮೇಲಿದ್ದ ಕುತೂಹಲವನ್ನ ಕಡಿಮೆ ಮಾಡಿದೆ. ಆದ್ರೆ, ಆಟಗಾರರ ಆಫ್​ ದ ಫೀಲ್ಡ್​​ನ ಸಮಾಚಾರಗಳು ಫ್ಯಾನ್ಸ್​​ ದಿಲ್​ಖುಷ್​​ ಮಾಡಿವೆ. ಆಸಕ್ತಿಕರ ವಿಚಾರಗಳ ಹೈಲೆಟ್ಸ್​​ ಇಲ್ಲಿದೆ.

WTC ಫೈನಲ್​​​​ನಲ್ಲಿ ಆಟಗಾರರ ಮಸ್ತ್ ಮಸ್ತ್ ‘ಆಫ್ ದ ಫೀಲ್ಡ್​’ ಸಮಾಚಾರ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಅರ್ಧದಾರಿ ಕ್ರಮಿಸಿದೆ. ಮಳೆ ಕಾಟದ ನಡುವೆಯೂ ಟ್ರೋಫಿಗೆ ಮುತ್ತಿಡಲು ಉಭಯ ತಂಡಗಳು ಪೈಪೋಟಿ ನಡೆಸ್ತಿವೆ. ಆದ್ರೆ, ಪಂದ್ಯ ಸಾಗ್ತಾ ಇರೋ ಆಮೆಗತಿ ಅಭಿಮಾನಿಗಳಿದ್ದ ಕುತೂಹಲವನ್ನ ಕಡಿಮೆ ಮಾಡಿದೆ. ಈಗ ಏನಿದ್ರೂ, ಆಫ್​ ದ ಪೀಲ್ಡ್​ ಸಮಾಚಾರಗಳ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಫೇವರಿಟ್ ಟೆಸ್ಟ್​ ಕ್ರಿಕೆಟರ್ ಹೆಸರು ಬಿಚ್ಚಿಟ್ಟ ಕ್ರಿಕೆಟರ್ಸ್
ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ, ಅಶ್ವಿನ್​​​​ಗೆ ಸ್ಫೂರ್ತಿ ಯಾರು..?

ಇಶಾಂತ್​ ಶರ್ಮಾ, ರವಿಚಂದ್ರನ್ ಅಶ್ವಿನ್, ಚೇತೇಶ್ವರ ಪೂಜಾರ, ಜಸ್​ಪ್ರೀತ್​ ಬೂಮ್ರಾ, ರಿಷಭ್ ಪಂತ್, ಇವರೆಲ್ಲರೂ ಸದ್ಯ ಟೀಮ್ ಇಂಡಿಯಾದ ಟೆಸ್ಟ್​ ತಂಡದ ಸ್ಟಾರ್​ ಆಟಗಾರರು. ಇದೀಗ ಯುವ ಆಟಗಾರರಿಗೆ ಮಾದರಿಯಾಗಿರುವ ಇವರುಗಳು, ತಮಗೆ ಸ್ಫೂರ್ತಿಯಾದ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಆಟಗಾರರು ಮಾತ್ರವಲ್ಲ. ಇದೇ ವೇಳೆ ನ್ಯೂಜಿಲೆಂಡ್​ನ ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್ ಕೂಡ ತಮ್ಮ ಫೇವರಿಟ್ ಕ್ರಿಕೆಟರ್ ಯಾರು ಅನ್ನೋದನ್ನ ಹೇಳಿಕೊಂಡಿದ್ದಾರೆ.

ಹೈಸ್ಕೂಲ್ ತನಕ ಬೌಲರ್ ಆಗಿರಲಿಲ್ಲ ಕೈಲ್​ ಜಮಿಸನ್..!
ನಡೀತಾ ಇರೋ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾವನ್ನ ಕಾಡಿದ್ದು ವೇಗಿ ಕೈಲ್​ ಜೆಮಿಸನ್​. 5 ವಿಕೆಟ್​​ಗಳನ್ನ ಕಬಳಿಸಿದ ಜೆಮಿಸನ್​ ಟೀಮ್​ಇಂಡಿಯಾ ಬ್ಯಾಟ್ಸ್​ಮನ್​ಗಳ ಪಾಲಿಗೆ ಸಿಂಹ ಸ್ವಪ್ನವಾದ್ರು. ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಕಾಲಿಟ್ಟ ಅತಿ ಕಡಿಮೆ ಅವಧಿಯಲ್ಲೇ ನ್ಯೂಜಿಲೆಂಡ್​ನ ಫ್ಯೂಚರ್ ಸ್ಟಾರ್​ ಆಗಿ ಗುರುತಿಸಿಕೊಂಡಿರುವ ಜೆಮಿಸನ್​, ಹೈಸ್ಕೂಲ್ ಮುಕ್ತಾಯದವರೆಗೂ ಬೌಲರ್​ ಆಗಿರಲಿಲ್ಲವಂತೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ದಶಕ ಪೂರೈಸಿದ ಕೊಹ್ಲಿಗೆ ಸ್ಪೆಷಲ್ ಸಾಂಗ್
ನಿನ್ನೆಗೆ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​​ಗೆ ಕಾಲಿಟ್ಟು10 ವರ್ಷ. ಈ ಸಾಧನೆ ಮಾಡಿದ ಕ್ಯಾಪ್ಟನ್ ಕೊಹ್ಲಿಗೆ ಭಾರತ್ ಆರ್ಮಿ ಫ್ಯಾನ್ಸ್​ ಸ್ಪೆಷಲ್ ಸಾಂಗ್ ಡೆಡಿಕೇಟ್ ಮಾಡಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಟೀಮ್ ಇಂಡಿಯಾ ಪಂದ್ಯವನ್ನಾಡಿದ್ರೂ, ಮೈದಾನಕ್ಕೆ ಬಂದು ಆಟಗಾರರನ್ನ ಹುರಿದುಂಬಿಸೋ ಭಾರತ್​ ಆರ್ಮಿ, ನಿನ್ನೆ ಕೊಹ್ಲಿಗೆ ವಿಶೇಷ ಗೌರವ ನೀಡಿತ್ತು. 3ನೇ ದಿನದಾಟದಲ್ಲಿ ಕೊಹ್ಲಿ ಅಂಗಳಕ್ಕಿಳಿಯುತ್ತಿದ್ದಂತೆ ಹಾಡು ಹಾಡಿ ಹುರಿದುಂಬಿಸಿತು.

 

View this post on Instagram

 

A post shared by ICC (@icc)

ಹೇರ್​​​ಸ್ಟೈಲ್​​​​ ರೇಟಿಂಗ್​ ಮಾಡಿದ ಗ್ರ್ಯಾಂಡ್​ ಹೋಮ್
ಕ್ರಿಕೆಟರ್ಸ್ ಅಂಗಳದಲ್ಲಿ ಶತಕ ಸಿಡಿಸಿದ್ದಾಗ ಎಷ್ಟು ಸುದ್ದಿಯಾಗುತ್ತೋ ಅವರ ಹೇರ್​​ಸ್ಟೈಲ್ ಬದಲಾದಾಗಲೂ ಅಷ್ಟೇ ಸುದ್ದಿಯಾಗುತ್ತೆ. ಸದ್ಯ ಈಗ ವಿಭಿನ್ನ ಹೇರ್​ಸ್ಟೈಲ್​​ನೊಂದಿಗೆ ಸುದ್ದಿಯಲ್ಲಿರುವ ನ್ಯೂಜಿಲೆಂಡ್ ಆಲ್​ರೌಂಡರ್ ಕಾಲಿನ್​ ಡಿ ಗ್ರಾಂಡ್​​ ಹೋಮ್, ವಿಶ್ವ ಕ್ರಿಕೆಟ್​ನಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಹೇರ್​​ಸ್ಟೈಲ್​​ಗಳ ರೇಟಿಂಗ್​ ಮಾಡಿದ್ದಾರೆ. ಇದರಲ್ಲಿ ಡೇನಿಯಲ್ ವೆಟ್ಟೋರಿ, ಎಮ್​​.ಎಸ್​.ಧೋನಿ, ಮಲಿಂಗಾ, ಬ್ರೆಂಡಮ್ ಮೆಕಲಂ, ಹಾರ್ದಿಕ್ ಪಾಂಡ್ಯರ ಹೇರ್​ಸ್ಟೈಲ್​​ಗಳು ಒಳಗೊಂಡಿವೆ.

ಒಟ್ನಲ್ಲಿ ಬಹಳ ನಿರೀಕ್ಷೆಯನ್ನಿಟ್ಟುಕೊಂಡು ಹೈವೋಲ್ಟೆಜ್​ ಹಣಾಹಣಿಯ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆ ಮಳೆ ನಿರಾಸೆ ಮೂಡಿಸಿದಾಗ ಆಫ್​ ದ ಫೀಲ್ಡ್​​ನ ಈ ಸುದ್ದಿಗಳು ಫ್ಯಾನ್ಸ್​​ ಗಮನವನ್ನ ಸೆಳೆದಿವೆ. ಹಾಗೆಂದ ಮಾತ್ರಕ್ಕೆ ಸೋಲು-ಗೆಲುವಿನ ಲೆಕ್ಕಾಚಾರವನ್ನ ಅಭಿಮಾನಿಗಳು ಬಿಟ್ಟಿದ್ದಾರೆ ಅಂತಲ್ಲ. ಚಾಂಪಿಯನ್​ ಯಾರಾಗ್ತಾರೆ ಅನ್ನೋ ಕುತೂಹಲ್ಲ ಎಲ್ಲರಲ್ಲೂ ಇದೆ.

The post ಆಫ್​ ದ ಫೀಲ್ಡ್​​ನಲ್ಲಿ ಮಸ್ತ್ ಮಸ್ತ್​ ಸಮಾಚಾರ.. ಕಿಂಗ್ ಕೊಹ್ಲಿಗೆ ಸ್ಪೆಷಲ್ ಸಾಂಗ್ ಡೆಡಿಕೇಟ್ appeared first on News First Kannada.

Source: newsfirstlive.com

Source link