ಟೀಮ್ ಇಂಡಿಯಾದ ಆಫ್​ ಸ್ಪಿನ್ನರ್ ಆರ್​​.ಅಶ್ವಿನ್​​ ವಿರುದ್ಧ ಪಾಕ್​​ ಮಾಜಿ ಆಫ್‌ ಸ್ಪಿನ್ನರ್‌ ಸಯೀದ್‌ ಅಜ್ಮಲ್, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಐಸಿಸಿ ನಿಷೇಧದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಆರ್​​.ಅಶ್ವಿನ್, ಕೆಲ ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಇದ್ದರು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪಾಕ್ ಮಾಜಿ ಕ್ರಿಕೆಟಿಗ ಅಜ್ಮಲ್, ನಾನು 8 ವರ್ಷಗಳಿಂದ ಕ್ರಿಕೆಟ್‌ ಆಡುತ್ತಿದ್ದೆ. ಆಗ ಜಾರಿಯಾಗುತ್ತಿದ್ದ ನಿಯಮಗಳೆಲ್ಲವೂ ಕೇವಲ ನನಗೆ ಮಾತ್ರವೇ ಅನ್ವಯಿಸುತ್ತಿದ್ದವು. ಏಕೆಂದರೆ ಆ ಸಮಯದಲ್ಲಿ ಟೀಮ್ ಇಂಡಿಯಾದ ಆಫ್​ ಸ್ಪಿನ್ನರ್​ ಅಶ್ವಿನ್​​ರನ್ನ 6 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಇಡಲಾಗಿತ್ತು. ಇದಕ್ಕೆ ಕಾರಣವೇನೆಂದರೆ, ಬೌಲರ್‌ ಬ್ಯಾನ್‌ ಆಗದಂತೆ ರಕ್ಷಿಸಲು ತಂಡದಿಂದ ದೂರ ಇಟ್ಟು, ಬೌಲಿಂಗ್ ಶೈಲಿಯನ್ನ ಸರಿ ಪಡಿಸುವ ಕೆಲಸ ಮಾಡುತ್ತಿದ್ದರು.

ಆ ಮೂಲಕ ಬ್ಯಾನ್ ಆಗದಂತೆ ರಕ್ಷಣೆ ಮಾಡುತ್ತಿದ್ದರು. ಪಾಕಿಸ್ತಾನದ ಬೌಲರ್‌ ಬ್ಯಾನ್‌ ಆದರೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಎಲ್ಲರಿಗೂ ಹಣವೇ ಮುಖ್ಯವಾಗಿತ್ತು ಎಂದು ಸಯೀದ್ ಅಜ್ಮಲ್ ಗಂಭೀರ ಆರೋಪ ಮಾಡಿದ್ದಾರೆ.

The post ಆಫ್ ಸ್ಪಿನ್ನರ್​ ಆರ್.ಅಶ್ವಿನ್​ ‘ಬ್ಯಾನ್’​​ ಆಗೋದನ್ನ ಬಿಸಿಸಿಐ ತಡೆಯಿತಾ..? appeared first on News First Kannada.

Source: newsfirstlive.com

Source link