ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ | KGF 2 actress Raveena Tandon talks about Aamir Khan and Andaz Apna Apna movie


ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

ಆಮಿರ್​ ಖಾನ್​, ರವೀನಾ ಟಂಡನ್​

ಹಲವು ಸ್ಟಾರ್​ ಕಲಾವಿದರ ಜೊತೆಗೆ ನಟಿಸಿದ ರವೀನಾ ಟಂಡನ್ (Raveena Tandon) ಅವರು ಒಂದು ಕಾಲದಲ್ಲಿ ಬಾಲಿವುಡ್​ನ ಬಹುಬೇಡಿಕೆಯ ಹೀರೋಯಿನ್​ ಆಗಿದ್ದರು. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ (KGF 2) ಚಿತ್ರದಲ್ಲಿ ಅಭಿನಯಿಸಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ರವೀನಾ ಟಂಡನ್​ ಅವರು ಹಿಂದಿಯ ‘ಸರಿಗಮಪ’ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಹೋಗಿದ್ದರು. ಆಗ ಅವರು ಹಳೇ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ರವೀನಾ ಮತ್ತು ಆಮಿರ್​ ಖಾನ್ (Aamir Khan)​ ನಟನೆಯ ‘ಅಂದಾಜ್​ ಅಪ್ನ ಅಪ್ನ’ ಸಿನಿಮಾದ ಹಾಡನ್ನು ಸ್ಪರ್ಧಿಯೊಬ್ಬರು ಈ ಶೋನಲ್ಲಿ ಹಾಡಿದರು. ಆಗ ರವೀನಾ ಟಂಡನ್​ ಅವರು ನೆನಪಿನ ಪುಟ ತೆರೆದರು. ಆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು ತೀರಿಸಿಕೊಂಡಿದ್ದರು. ಆದರೆ ಅದು ದ್ವೇಷದ ಸೇಡಲ್ಲ. ಎಲ್ಲವೂ ನಡೆದಿದ್ದು ತಮಾಷೆಗಾಗಿ. ಆ ಘಟನೆಯನ್ನು ಈಗ ರವೀನಾ ಟಂಡನ್​ ನೆನಪು ಮಾಡಿಕೊಂಡಿದ್ದಾರೆ.

‘ಅಂದಾಜ್​ ಅಪ್ನ ಅಪ್ನ’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಮಿರ್​ ಖಾನ್​ ಅವರು ಪ್ರ್ಯಾಂಕ್​ ಮಾಡುತ್ತಿದ್ದರು. ಒಮ್ಮೆ ರವೀನಾಗೂ ಪ್ರ್ಯಾಂಕ್​ ಮಾಡಲಾಗಿತ್ತು. ‘ಕುದರೆ ಗಾಡಿಯ ಮೇಲೆ ನಾವು ಚಿತ್ರೀಕರಣ ಮಾಡುತ್ತಿದ್ದೆವು. ಆಮಿರ್​ ಖಾನ್​ ಅವರಿ ಇಡೀ ತಂಡದ ಜೊತೆ ಸೇರಿಕೊಂಡು ನನ್ನ ಮೇಲೆ ಪ್ರ್ಯಾಂಕ್​ ಮಾಡಲು ಸಿದ್ಧರಾಗಿದ್ದರು. ಬಿಸಿ ಟೀ ಲೋಟ ನನ್ನ ಮೇಲೆ ಬೀಳುತ್ತಿರುವಂತೆ ಅವರು ನಟಿಸಿದರು. ಆ ಪ್ರ್ಯಾಂಕ್​ನಿಂದ ನಾನು ಹೆದರಿದೆ’ ಎಂದು ತಾವು ಪ್ರ್ಯಾಂಕ್​ಗೆ ಒಳಗಾದ ಘಟನೆನ್ನು ರವೀನಾ ಟಂಡನ್​ ಮೆಲುಕು ಹಾಕಿದ್ದಾರೆ.

ಈ ಘಟನೆ ನಡೆದ ಬಳಿಕ ರವೀನಾ ಟಂಡನ್​ ಅವರು ಆಮಿರ್​ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ‘ಎಲ್ಲರೂ ನನ್ನನ್ನು ನೋಡಿ ನಕ್ಕರು. ಅದೇ ರೀತಿ ನಾನು ಕೂಡ ಆಮಿರ್​ ಖಾನ್​ಗೆ ಪ್ರ್ಯಾಂಕ್​ ಮಾಡಿದೆ. ಆಗ ವ್ಯಾನಿಟಿ ವ್ಯಾನ್​ ಇರುತ್ತಿರಲಿಲ್ಲ. ವಾಶ್​ರೂಮ್​ಗಾಗಿ ಆಮಿರ್​ ಖಾನ್​ ಸ್ವಲ್ಪ ದೂರಕ್ಕೆ ತೆರಳಿದ್ದರು. ಆಗ ವಾತಾವರಣ ಸರಿಯಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಶೂಟಿಂಗ್​ ಪ್ಯಾಕಪ್​ ಮಾಡಿದರು. ಆದರೆ ಅದು ಆಮಿರ್​​ ಖಾನ್​ಗೆ ಗೊತ್ತಿರಲಿಲ್ಲ. ಅವರಿಗೆ ಕಷ್ಟ ಆಗುವಂತಹ ಒಂದು ಡ್ಯಾನ್ಸ್​ ಸ್ಟೆಪ್​ ಅನ್ನು ಪ್ರಾಕ್ಟೀಸ್​ ಮಾಡಲು ಹೇಳಿ ಎಂದು ನೃತ್ಯನಿರ್ದೇಶಕರ ಬಳಿ ಮನವಿ ಮಾಡಿಕೊಂಡರೆ. ಅದಕ್ಕೆ ಕೊರಿಯೋಗ್ರಾಫರ್​ ಒಪ್ಪಿದರು. ಅದನ್ನು ನಿಜ ಎಂದು ತಿಳಿದ ಆಮಿರ್​ ಖಾನ್​ ಸತತ 30 ನಿಮಿಷ ನಿಮಿಷ ಡ್ಯಾನ್ಸ್​ ಪ್ರಾಕ್ಟೀಸ್​ ಮಾಡಿದ್ದರು. ಆ ಘಟನೆ ನೆನಪಿಸಿಕೊಂಡಾಗಲೆಲ್ಲ ನನಗೆ ನಗು ಬರುತ್ತದೆ’ ಎಂದು ರವೀನಾ ಟಂಡನ್​ ಹೇಳಿದ್ದಾರೆ.

TV9 Kannada


Leave a Reply

Your email address will not be published.