ಆಮಿರ್​ ಖಾನ್ ಮತ್ತು ಕಿರಣ್​ ರಾವ್ 15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಹಾಡಿದ್ದು, ಇಬ್ಬರೂ ವಿಚ್ಛೇದನ ಪಡೆದಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆಮೀರ್​ ಖಾನ್ ಅವರಿಂದ ಈ ವಿಚಾರ ಹೊರ ಬರುತ್ತಿದ್ದಂತೆ ಲಾಲ್​ ಸಿಂಗ್ ಚಡ್ಡಾದ ನಾಯಕ ಟ್ವಿಟರ್​ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

ಕೇವಲ ಆಮಿರ್ ಖಾನ್ ಮಾತ್ರವಲ್ಲ, ದಂಗಲ್ ಹೀರೋಯಿನ್ ಫಾತಿಮಾ ಸನಾ ಶೇಖ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಟ್ರೋಲಿಗರು ಫಾತಿಮಾ ಸನಾ ಅವರನ್ನ ಟ್ರೋಲ್ ಮಾಡಿ, ಆಮಿರ್​ ಖಾನ್ ವಿಚ್ಛೇದನಕ್ಕೆ ಈಕೆಯೇ ಕಾರಣ ಎಂದು ಕಿಚಾಯಿಸುತ್ತಿದ್ದಾರೆ.

ಆಮಿರ್​ ಖಾನ್ ಜೊತೆ ಫಾತಿಮಾ ಸಂಬಂಧ ಹೊಂದಿದ್ದರು, ಅದೇ ಕಾರಣಕ್ಕೆ ಪತ್ನಿ ಜೊತೆಗಿನ ಸಂಬಂಧವನ್ನ ಕಡಿತಗೊಳಿಸಿದ್ದಾರೆ. 2016ರ ದಂಗಲ್ ಸಿನಿಮಾ ಬಳಿಕ ಆಮಿರ್​​ ಖಾನ್​ ಜೊತೆಗೆ ಫಾತಿಮಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.. ವದಂತಿಗಳು ಮಾತ್ರ ಹರಿದಾಡುತ್ತಿವೆ.

ಇದನ್ನೂ ಓದಿ: ಮೊದಲ ಪತ್ನಿ 16 ವರ್ಷ.. ಎರಡನೇ ಪತ್ನಿ 15 ವರ್ಷ.. ಇದು ಆಮಿರ್ ಖಾನ್ ಮ್ಯಾರೇಜ್​ ಸ್ಟೋರಿ

ಇದನ್ನೂ ಓದಿ: 15 ವರ್ಷದ ದಾಂಪತ್ಯಕ್ಕೆ ಬ್ರೇಕ್: ಬಾಲಿವುಡ್ ನಟ ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಡಿವೋರ್ಸ್

The post ಆಮಿರ್​ ಖಾನ್ ದಂಪತಿ ಡಿವೋರ್ಸ್​.. ಟ್ವಿಟರ್​ನಲ್ಲಿ ದಂಗಲ್ ಹುಡುಗಿ ಟ್ರೆಂಡಿಂಗ್ appeared first on News First Kannada.

Source: newsfirstlive.com

Source link