ಆಮಿರ್-ಕಿರಣ್ ವಿಚ್ಛೇದನದ ಬೆನ್ನಲ್ಲೇ ಪುತ್ರಿ ಐರಾಳ ಪೋಸ್ಟ್​ ಮೂಡಿಸಿತು ಕುತೂಹಲ

ಆಮಿರ್-ಕಿರಣ್ ವಿಚ್ಛೇದನದ ಬೆನ್ನಲ್ಲೇ ಪುತ್ರಿ ಐರಾಳ ಪೋಸ್ಟ್​ ಮೂಡಿಸಿತು ಕುತೂಹಲ

ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ನಿನ್ನೆ ತಮ್ಮ ಡಿವೋರ್ಸ್​ ಬಗ್ಗೆ ಘೋಷಿಸಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರೋ ದಂಪತಿ, ತಮ್ಮ ಮಕ್ಕಳಿಗೆ ‘ಸಹ-ಪೋಷಕರಾಗಿ’(ಕೋ ಪೇರೆಂಟ್ಸ್​​)  ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಇದಾಗ ಕೆಲವೇ ಗಂಟೆಗಳಲ್ಲಿ ಆಮಿರ್ ಖಾನ್ ಅವರ ಮಗಳು(ಮೊದಲ ಹೆಂಡತಿಯ ಮಗಳು) ಐರಾ ಖಾನ್ ಇನ್ಸ್​​ಟಾಗ್ರಾಂನಲ್ಲಿ ಕುತೂಹಲ ಮೂಡಿಸುವಂಥ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದಾರೆ.

ಇನ್ಸ್​​ಟಾಗ್ರಾಂ ಸ್ಟೋರಿನಲ್ಲಿ ತಮ್ಮ ಫೋಟೋ ಶೇರ್ ಮಾಡಿರೋ ಐರಾ, ಮುಂದಿನ ರಿವ್ಯೂ ನಾಳೆ.. ಏನಿರಬಹುದು ಅದು? ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಪೇಸ್ಟ್ರಿ ಎಮೋಜಿಯನ್ನ ಹಾಕಿದ್ದಾರೆ. ಈ ಪೋಸ್ಟ್​ ಹಿಂದಿನ ಅರ್ಥವೇನು ಅಂತ ತಿಳಿಯದೇ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಅದೇನು ಅನ್ನೋದನ್ನ ಐರಾ ಅವರೇ ಸ್ಪಷ್ಟಪಡಿಸಬೇಕಿದೆ.

ಅಂದ್ಹಾಗೆ ಐರಾ ಖಾನ್, ಆಮಿರ್ ಅವರ ಮೊದಲ ಪತ್ನಿ ರೀನಾ ದತ್ತಾರ ಮಗಳು. ಆಮಿರ್-ರೀನಾಗೆ ಜುನೈದ್ ಎಂಬ ಮಗ ಕೂಡ ಇದ್ದಾನೆ. ಎರಡನೇ ಪತ್ನಿ ಕಿರಣ್ ರಾವ್​ ಜೊತೆಗೆ ಆಮಿರ್ ವಿಚ್ಚೇದನ ಪಡೆಯುತ್ತಿರೋದಾಗಿ ಘೋಷಿಸಿದ ಬೆನ್ನಲ್ಲೇ ಐರಾ ಈ ಪೋಸ್ಟ್​ ಹಾಕಿರೋದ್ರಿಂದ ಇದರ ಹಿಂದೆ ಬೇರೇನೋ ಅರ್ಥ ಇರಬಹುದು ಅಂತ ವಿಶ್ಲೇಷಿಸಲಾಗ್ತಿದೆ.

ತನ್ನ ತಾಯಿ ರೀನಾ ಜೊತೆಗೆ ಆಮಿರ್ ಖಾನ್ ವಿಚ್ಛೇದನ ಪಡೆದಾಗ ತಾನು ಖಿನ್ನತೆಗೆ ಒಳಗಾಗಿದ್ದ ಬಗ್ಗೆ ಈ ಹಿಂದೆ ಐರಾ ಇನ್ಸ್​​ಟಾಗ್ರಾಂ ವಿಡಿಯೋವೊಂದರಲ್ಲಿ ಮಾತನಾಡಿದ್ದರು.

 

The post ಆಮಿರ್-ಕಿರಣ್ ವಿಚ್ಛೇದನದ ಬೆನ್ನಲ್ಲೇ ಪುತ್ರಿ ಐರಾಳ ಪೋಸ್ಟ್​ ಮೂಡಿಸಿತು ಕುತೂಹಲ appeared first on News First Kannada.

Source: newsfirstlive.com

Source link