ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ | Naga Chaitanya fans upset after watching Aamir Khan starrer Laal Singh Chaddha trailer


ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ

ನಾಗ ಚೈತನ್ಯ, ಆಮಿರ್ ಖಾನ್

Laal Singh Chaddha: ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಒಂದು ಅತಿಥಿ ಪಾತ್ರಕ್ಕೆ ನಾಗ ಚೈತನ್ಯ ಅವರು ಬಣ್ಣ ಹಚ್ಚಿದ್ದಾರೆ. ಆದರೆ ಟ್ರೇಲರ್​ನಲ್ಲಿ ಅವರು ಹೆಚ್ಚು ಕಾಣಿಸಿಲ್ಲ.

ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್​ ನಡುವೆ ಒಳ್ಳೆಯ ಸ್ನೇಹ ಸಂಬಂಧ ಇದೆ. ಇಲ್ಲಿನ ಸ್ಟಾರ್​ ನಟರು ಹಿಂದಿ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುತ್ತಾರೆ. ಅದೇ ರೀತಿ ಬಾಲಿವುಡ್​ ಕಲಾವಿದರು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ ಸಾಕಷ್ಟು ಉದಾಹರಣೆ ಇದೆ. ಆದರೆ ಈ ರೀತಿ ನಟಿಸಿದಾಗ ಪಾತ್ರಕ್ಕೆ ಸೂಕ್ತ ಮಹತ್ವ ಸಿಗಬೇಕು. ಇಲ್ಲದಿದ್ದರೆ ಅವರ ಫ್ಯಾನ್ಸ್​ ಬೇಸರ ಮಾಡಿಕೊಳ್ಳುವುದು ಗ್ಯಾರಂಟಿ. ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾದಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಅವರು ಒಂದು ಪಾತ್ರ ಮಾಡಿದ್ದಾರೆ. ಆದ್ದರಿಂದ ಈ ಚಿತ್ರದ ಬಗ್ಗೆ ತೆಲುಗು ಸಿನಿಪ್ರಿಯರು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಟ್ರೇಲರ್​ ನೋಡಿದ ಬಳಿಕ ನಾಗ ಚೈತನ್ಯ (Naga Chaitanya) ಅಭಿಮಾನಿಗಳಿಗೆ ಬೇಸರ ಆಗಿದೆ. ತಮ್ಮ ನೆಚ್ಚಿನ ನಟನಿಗೆ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾಗ ಚೈತನ್ಯ ಅಥವಾ ಆಮಿರ್​ ಖಾನ್​ (Aamir Khan) ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅಂತ ಕಾದು ನೋಡಬೇಕಿದೆ.

ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​ ಆಗಿ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಮೂಡಿಬರುತ್ತಿದೆ. ಮೂಲ ಸಿನಿಮಾದಲ್ಲಿ ಟಾಮ್​ ಹ್ಯಾಂಕ್ಸ್​ ಮಾಡಿದ್ದ ಪಾತ್ರವನ್ನು ಬಾಲಿವುಡ್​ನಲ್ಲಿ ಆಮಿರ್​ ಖಾನ್​ ಮಾಡಿದ್ದಾರೆ. ಸಿನಿಮಾದಲ್ಲಿ ಬರುವ ಒಂದು ಅತಿಥಿ ಪಾತ್ರಕ್ಕೆ ನಾಗ ಚೈತನ್ಯ ಅವರು ಬಣ್ಣ ಹಚ್ಚಿದ್ದಾರೆ. ಆದರೆ ಟ್ರೇಲರ್​ನಲ್ಲಿ ನಾಗ ಚೈತನ್ಯ ಹೆಚ್ಚು ಕಾಣಿಸಿಲ್ಲ. ಇಡೀ ಟ್ರೇಲರ್​ನಲ್ಲಿ ಆಮಿರ್​ ಖಾನ್​ ಪಾತ್ರವೇ ಆವರಿಸಿಕೊಂಡಿದೆ. ಇದರಿಂದ ನಾಗ ಚೈತನ್ಯ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *