ಆಮಿರ್ ಖಾನ್ ಮೊದಲ ಪತ್ನಿ ಜೊತೆಗಿನ ಡಿವೋರ್ಸ್​ಗೆ ಹೆಲ್ಪ್ ಮಾಡಿದ್ರಂತೆ ಸಲ್ಮಾನ್ ಖಾನ್

ಆಮಿರ್ ಖಾನ್ ಮೊದಲ ಪತ್ನಿ ಜೊತೆಗಿನ ಡಿವೋರ್ಸ್​ಗೆ ಹೆಲ್ಪ್ ಮಾಡಿದ್ರಂತೆ ಸಲ್ಮಾನ್ ಖಾನ್

ಆಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ನಿನ್ನೆಯಷ್ಟೇ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡು ಪ್ರತ್ಯೇಕ ಜೀವನ ನಡೆಸಲು ಮುಂದಾಗಿದ್ದಾರೆ. ಆಮಿರ್-ಕಿರಣ್ ಅವರ 15 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ತೆರೆ ಬಿದ್ದಂತಾಗಿದೆ. ಕಿರಣ್ ರಾವ್​ಗೂ ಮುನ್ನ ಆಮಿರ್ ಖಾನ್ ರೀನಾ ದತ್ತಾ ಅವರನ್ನ ವಿವಾಹವಾಗಿದ್ದರು.. ಆದ್ರೆ 16 ವರ್ಷಗಳ ನಂತರ ರೀನಾ ದತ್ತಾ ಜೊತೆ ಆಮಿರ್ ಖಾನ್ ವಿಚ್ಛೇದನ ಪಡೆದುಕೊಂಡರು. ಈ ವಿಚ್ಛೇದನಕ್ಕೆ ಆಮಿರ್ ಖಾನ್​ಗೆ ಸಹಾಯ ಮಾಡಿದ್ದು ಸಲ್ಮಾನ್ ಖಾನ್.

ಈ ಹಿಂದೆ ಕರಣ್ ಜೋಹರ್ ನಡೆಸಿಕೊಡುತ್ತಿದ್ದ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಸಲ್ಮಾನ್​ ಖಾನ್ ಮಾಡಿದ ಸಹಾಯವನ್ನ ನೆನೆದಿದ್ದರು. ಅಂದಾಜ್ ಅಪ್ನಾ ಅಪ್ನಾ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆಗಿನ ಬ್ಯಾಡ್ ಎಕ್ಸ್​ಪೀರಿಯನ್ಸ್​ನಿಂದಾಗಿ ಅವರ ಜೊತೆಗೆ ಅಂತರ ಕಾಪಾಡಿಕೊಂಡಿದ್ದೆ.. ಸಲ್ಮಾನ್​ ಖಾನ್ ನನ್ನ ಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಿದ್ದರು ಎಂದು ಹೇಳಿಕೊಂಡಿದ್ದರು..

ಅಂದಾಜ್ ಅಪ್ನಾ ಅಪ್ನಾ ಸಿನಿಮಾದಲ್ಲಿ ಸಲ್ಮಾನ್​ ಖಾನ್ ಜೊತೆ ನಟಿಸುವಾಗ ನನಗೆ ತುಂಬಾ ಬ್ಯಾಡ್ ಎಕ್ಸ್​ಪೀರಿಯನ್ಸ್ ಆಗಿತ್ತು. ಆಗಿನಿಂದ ನನಗೆ ಸಲ್ಮಾನ್​ ಖಾನ್ ಇಷ್ಟವಿರಲಿಲ್ಲ. ಅವನು ರೂಡ್​ ಅನ್ನಿಸುತ್ತಿತ್ತು. ಅವನ ಜೊತೆಗೆ ನಟಿಸುವಾಗ ಆದ ಅನುಭವದದಿಂದಾಗಿ ನಾನು ಅವನಿಂದ ಅಂತರ ಕಾಪಾಡಿಕೊಂಡಿದ್ದೆ. ನಾನು ಬಹಳ ಕಷ್ಟದ ಸಮಯದಲ್ಲಿದ್ದಾಗ ಸಲ್ಮಾನ್ ಖಾನ್ ನನಗೆ ಜೊತೆಯಾದರು.. ನಾನು ನನ್ನ ಪತ್ನಿಯ ಜೊತೆಗೆ ಡಿವೋರ್ಸ್ ಮಾಡಿಕೊಳ್ಳಲು ಮುಂದಾಗಿದ್ದೆ. ಆನಂತರ ಸಲ್ಮಾನ್ ನನ್ನನ್ನು ಭೇಟಿಯಾಗಲು ಇಚ್ಛಿಸಿದ.. ನಾವು ಮತ್ತೆ ಭೇಟಿಯಾದೆವು.. ಅಲ್ಲದೇ ಜೊತೆಯಲ್ಲೇ ಮದ್ಯ ಸೇವಿಸಿದೆವು. ನಮ್ಮಿಬ್ಬರ ನಡುವೆ ಉತ್ತಮ ಗೆಳೆತನ ಬೆಳೆಯಲು ಸಹಾಯವಾಯ್ತು..- ಆಮಿರ್ ಖಾನ್, ಬಾಲಿವುಡ್ ನಟ

ಆಮಿರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ಶನಿವಾರ ಬೆಳಗ್ಗೆ ತಾವು 15 ವರ್ಷಗಳ ದಾಂಪತ್ಯದ ಬದುಕಿಗೆ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ.. ಒಪ್ಪಿಗೆಯ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ಪುತ್ರ ಆಜಾದ್ ರಾವ್ ಖಾನ್​ನ್ನು ಜೊತೆಯಾಗಿ ಬೆಳೆಸುವುದಾಗಿಯೂ ಹೇಳಿಕೊಂಡಿದ್ದಾರೆ.

The post ಆಮಿರ್ ಖಾನ್ ಮೊದಲ ಪತ್ನಿ ಜೊತೆಗಿನ ಡಿವೋರ್ಸ್​ಗೆ ಹೆಲ್ಪ್ ಮಾಡಿದ್ರಂತೆ ಸಲ್ಮಾನ್ ಖಾನ್ appeared first on News First Kannada.

Source: newsfirstlive.com

Source link