ಆಮ್ಲಜನಕದ ಕೊರತೆಯಿಂದಾಗಿ ಪಂಜಾಬ್ ಮಾತ್ರ 4 ಶಂಕಿತ ಸಾವುಗಳನ್ನು ವರದಿ ಮಾಡಿದೆ: ಮನ್ಸುಖ್ ಮಾಂಡವಿಯಾ | Only Punjab reported four suspected deaths due to lack of oxygen Mansukh Mandaviya in Lok Sabha


ಆಮ್ಲಜನಕದ ಕೊರತೆಯಿಂದಾಗಿ ಪಂಜಾಬ್ ಮಾತ್ರ 4 ಶಂಕಿತ ಸಾವುಗಳನ್ನು ವರದಿ ಮಾಡಿದೆ: ಮನ್ಸುಖ್ ಮಾಂಡವಿಯಾ

ಮನ್ಸುಖ್ ಮಾಂಡವಿಯಾ

ದೆಹಲಿ: ಭಾರತದಲ್ಲಿ ಕೊರೊನಾವೈರಸ್ ಕಾಯಿಲೆ (Covid-19) ಗೆ ಸಂಬಂಧಿಸಿದ ಅಂಕಿಅಂಶಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya)  ಶುಕ್ರವಾರ ಲೋಕಸಭೆಯಲ್ಲಿ (Lok sabha) ಹೇಳಿದ್ದಾರೆ.ಭಾರತದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 25,000 ವೈರಸ್ ಪ್ರಕರಣಗಳು ಮತ್ತು  340 ಸಾವುಗಳು ದಾಖಲಾಗಿವೆ. ಇದು ವಿಶ್ವದ ಅತ್ಯಂತ ಕಡಿಮೆ ಎಂದು ಅವರು ಹೇಳಿದರು. ಒಟ್ಟು 3.46 ಕೋಟಿ ಜನರು ವೈರಸ್‌ಗೆ ತುತ್ತಾಗಿದ್ದಾರೆ, ಅವರಲ್ಲಿ 4.6 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಯು ಒಟ್ಟು ಪ್ರಕರಣದ ಶೇಕಡಾ 1.36 ರಷ್ಟಿದೆ ಎಂದು ಸಚಿವರು ಹೇಳಿದರು. ಆರೋಗ್ಯ ಮೂಲಸೌಕರ್ಯವನ್ನು ಕಡೆಗಣಿಸಿದ ಹಿಂದಿನ ಆಡಳಿತಗಳನ್ನು ದೂಷಿಸುವ ಬದಲು ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಅದನ್ನು ಬಲಪಡಿಸುವ ಕೆಲಸವನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದರು. “ಆರೋಗ್ಯ ಮೂಲಸೌಕರ್ಯವನ್ನು ನಿರ್ಲಕ್ಷಿಸಿದ ಹಿಂದಿನ ಸರ್ಕಾರಗಳನ್ನು ದೂಷಿಸದೆ, ನಾವು ಫಲಿತಾಂಶಗಳಿಗಾಗಿ ಕೆಲಸ ಮಾಡಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಸರ್ಕಾರವು ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದೆಯೇ ಹೊರತು ಶಕ್ತಿಯಿಂದಲ್ಲ ಎಂದು ಅವರು ಹೇಳಿದರು. ಭಾರತದಲ್ಲಿ ಮೊದಲ ಕೊವಿಡ್ -19 ಪ್ರಕರಣವು ಜನವರಿ 13, 2020 ರಂದು ಕೇರಳದಲ್ಲಿ ವರದಿಯಾಗಿದೆ ಎಂದು ಮಾಂಡವಿಯಾ ಹೇಳಿದರು, ಆದರೆ ಕೇಂದ್ರವು ರಚಿಸಿರುವ ಜಂಟಿ ಮೇಲ್ವಿಚಾರಣಾ ಸಮಿತಿಯ ಮೊದಲ ಸಭೆಯು ಜನವರಿ 8 ರಂದು ನಡೆಯಿತು. “ಇದರರ್ಥ ನಾವು ಜಾಗರೂಕರಾಗಿದ್ದೇವೆ, ಸಮಿತಿಯೊಂದು ಇತ್ತು. ಪ್ರಕರಣವನ್ನು ವರದಿ ಮಾಡುವ ಮೊದಲು ರಚಿಸಲಾಯಿತು ಮತ್ತು ಅದು ಕೆಲಸ ಮಾಡಲು ಪ್ರಾರಂಭಿಸಿತು, ”ಎಂದು ಅವರು ಹೇಳಿದರು.

ಹಿಂದಿನ ದಿನ, ಆರೋಗ್ಯ ಸಚಿವರು ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೆ ಸಾಂಕ್ರಾಮಿಕ ರೋಗದ ಎರಡನೇ ತರಂಗದ ಸಮಯದಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದು, ಬೇಡಿಕೆಯನ್ನು ಪೂರೈಸಲು ಜೀವ ಉಳಿಸುವ ಅನಿಲದ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರದ ಪ್ರಯತ್ನಗಳನ್ನು ಗಮನಿಸಿ ಎಂದಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಂಕ್ರಾಮಿಕ ರೋಗದ ಎರಡನೇ ತರಂಗದ ಸಮಯದಲ್ಲಿ ಬೇಡಿಕೆಯ ಹೆಚ್ಚಳದ ನಂತರ ಆಮ್ಲಜನಕದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು “ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು” ಮಾಡಿದೆ ಮತ್ತು ಅದರ ಉತ್ಪಾದನೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ದತ್ತಾಂಶದ ಕುರಿತು ಕೇಂದ್ರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 19 ರಾಜ್ಯಗಳಲ್ಲಿ, ಪಂಜಾಬ್ ಮಾತ್ರ ನಾಲ್ಕು ಶಂಕಿತ ಸಾವುಗಳನ್ನು ವರದಿ ಮಾಡಿದೆ ಎಂದು ಹೇಳಿದ್ದಾರೆ.”ನಾವು ಅದರ ಡೇಟಾವನ್ನು ಕೇಳಲು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದ್ದೇವೆ. ಹತ್ತೊಂಬತ್ತು ರಾಜ್ಯಗಳು ಪ್ರತಿಕ್ರಿಯಿಸಿವೆ, ಪಂಜಾಬ್ ಮಾತ್ರ ಆಮ್ಲಜನಕದ ಕೊರತೆಯಿಂದಾಗಿ ನಾಲ್ಕು ‘ಶಂಕಿತ’ ಸಾವುಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲೋಕಸಭೆಗೆ ತಿಳಿಸಿದರು.

ಮಹಾರಾಷ್ಟ್ರ ಸಂಸದ ಬಲುಭೌ ಧನೋರ್ಕರ್ ಅವರ ಪ್ರಶ್ನೆಗೆ ಉತ್ತರಿಸಿದ ಮಾಂಡವಿಯಾ “ಎರಡನೇ ಕೊವಿಡ್ ತರಂಗ ಪ್ರಾರಂಭವಾದಾಗಿನಿಂದ, ದೇಶದಲ್ಲಿ ಆಮ್ಲಜನಕದ ಲಭ್ಯತೆಯ ಮೇಲೆ ರಾಜಕೀಯವನ್ನು ಆಡಲಾಗುತ್ತಿದೆ.” “ನಮ್ಮ ಅವಶ್ಯಕತೆಯು ದಿನಕ್ಕೆ 900-1,000 MT ಆಗಿತ್ತು. ಇದು ಮೊದಲ ತರಂಗದ ಸಮಯದಲ್ಲಿ ದಿನಕ್ಕೆ 1,400 MT ವರೆಗೆ ಏರಿತು. ಎರಡನೇ ತರಂಗದ ಸಮಯದಲ್ಲಿ, ನಮ್ಮ ವ್ಯವಸ್ಥಾಪನಾ ಸಾಮರ್ಥ್ಯವು ಸ್ವಾಭಾವಿಕವಾಗಿ ಸುಮಾರು 1,400 MT ವಿತರಿಸುವುದಾಗಿತ್ತು. ಉಲ್ಬಣದ ಸಮಯದಲ್ಲಿ, ನಮ್ಮ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಯಿತು. ನಾವು ವಿದೇಶದಿಂದ ಟ್ಯಾಂಕರ್‌ಗಳನ್ನು ತಂದಿದ್ದೇವೆ; ನೌಕಾಪಡೆ ಮತ್ತು ವಾಯುಪಡೆಗಳು ಸಹ ತೊಡಗಿಸಿಕೊಂಡಿವೆ. “ಇಂದು, ನಾವು 4,500 MT ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದೇವೆ” ಎಂದಿದ್ದಾರೆ.

ದೆಹಲಿಯ ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಚಿವರು “ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಜನರು ರಾಜಕೀಯವನ್ನು ಆಡಿದ್ದಾರೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ಕೆಲವು ಜನರು ನ್ಯಾಯಾಲಯದ ಮೆಟ್ಟಿಲೇರಿದರು. ಅಗತ್ಯದ ಅಂಕಿಅಂಶಗಳನ್ನು ತೋರಿಸಿದ ನಂತರ ಹೆಚ್ಚಿನ ಆಮ್ಲಜನಕವನ್ನು ಕೋರಿದರು. ದೆಹಲಿಯಲ್ಲಿ ಟ್ಯಾಂಕರ್‌ಗಳನ್ನು ಅವರ ಗಮ್ಯಸ್ಥಾನಗಳಿಂದ ತಿರುಗಿಸುವುದನ್ನು ನಾನು ನೋಡಿದೆ. ಸಾವಿನಲ್ಲೂ ರಾಜಕೀಯ ಆಡಲಾಗಿದೆ,” ಎಂದು ಹೇಳಿದರು.  ನಂತರ ಕೇರಳ ಸಂಸದ ಅಡೂರ್ ಪ್ರಕಾಶ್ ಅವರ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಂಡವಿಯಾ, 18 ರಾಜ್ಯಗಳಲ್ಲಿ ಅಂತಹ ಯಾವುದೇ ಘಟನೆ (ಆಮ್ಲಜನಕದ ಕೊರತೆಯಿಂದ ಸಾವುಗಳು) ಸಂಭವಿಸಿಲ್ಲ ಎಂದು ಹೇಳಿದರು.

TV9 Kannada


Leave a Reply

Your email address will not be published. Required fields are marked *