ಆಮ್ ಆದ್ಮಿ ಪಕ್ಷದ ಕೌನ್ಸಿಲ್ಲರ್ ಗೀತಾ ರಾವತ್ ರೂ. 20,000 ಲಂಚಕ್ಕೆ ಬೇಡಿಕೆಯಿಟ್ಟು ರೆಡ್-ಹ್ಯಾಂಡಾಗಿ ಸಿಕ್ಕಿಬಿದ್ದರು! | CBI sleuths nab AAP’s East Delhi Councillor red handed while accepting Rs 20,000 bribe ARB


ಆಮ್ ಆದ್ಮಿ ಪಕ್ಷದ ಕೌನ್ಸಿಲ್ಲರ್ ಗೀತಾ ರಾವತ್ ರೂ. 20,000 ಲಂಚಕ್ಕೆ ಬೇಡಿಕೆಯಿಟ್ಟು ರೆಡ್-ಹ್ಯಾಂಡಾಗಿ ಸಿಕ್ಕಿಬಿದ್ದರು!

ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಗೀತಾ ರಾವತ್

ಕೇಂದ್ರ ತನಿಖಾ ದಳದ (ಸಿಬಿಐ) (CBI) ಭ್ರಷ್ಟಾಚಾರ ನಿಗ್ರಹ ದಳವು ಶುಕ್ರವಾರದಂದು ಆಮ್ ಆದ್ಮಿ ಪಕ್ಷದ (ಆಪ್) ಪೂರ್ವ ದೆಹಲಿ ನಗರಸಭೆ ಸದಸ್ಯೆಯೊಬ್ಬರನ್ನು ಭ್ರಷ್ಟಾಚಾರದ (corruption) ಆರೋಪವೊಂದರಲ್ಲಿ ಬಂಧಿಸಿದೆ. ವ್ಯಕ್ತಿಯೊಬ್ಬನಿಗೆ ತನ್ನ ಕಟ್ಟಡದ ಮೇಲ್ಛಾವಣಿ ಹೊದಿಸಲು ನಗರಸಭೆಯಿಂದ ಅಗತ್ಯವಿರುವ ಸಹಾಯ ಒದಗಿಸಲು ರೂ. 20,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಗೀತಾ ರಾವತ್ (Geeta Rawat) ಅವರನ್ನು ಬಂಧಿಸಲಾಗಿದೆ. ಆಪ್ ಪಕ್ಷದ ಸದಸ್ಯೆ ಕಟ್ಟಡದ ಮೇಲ್ಛಾವಣಿ ಹೊದಿಸಲು ಅನುಮತಿ ಪತ್ರ ನೀಡುವುದಕ್ಕೆ ರೂ. 20,000 ಲಂಚ ಕೇಳಿದ ಬಳಿಕ ಆ ವ್ಯಕ್ತಿಯು ಸಿಬಿಯ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ. ಅದಾದ ಮೇಲೆ ಸಿಬಿಐ ನಗರ ಸಭೆ ಸದಸ್ಯೆ ರಾವತ್ ರನ್ನು ಬಲೆಗೆ ಕೆಡವಲು ಯೋಜನೆ ರೂಪಿಸಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗೀತಾ ರಾವತ್ ಅವರ ಕಚೇರಿಯ ಬಳಿ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಕಳ್ಳೆಬೀಜದ ವ್ಯಾಪಾರ ನಡೆಸುವ ಸನಾವುಲ್ಲಾ ಹೆಸರಿನ ವ್ಯಕ್ತಿಯ ಮೂಲಕ ಲಂಚದ ಹಣ ತಲುಪಿಸುವ ಏರ್ಪಾಟು ಮಾಡಲಾಗಿದೆ. ಅಸಲು ಸಂಗತಿಯೇನೆಂದರೆ, ಗೀತಾ ತಾವು ಪಡೆಯುತ್ತಿದ್ದ ಲಂಚವನ್ನು ಈ ವ್ಯಕ್ತಿಯ ಬಳಿ ಜಮಾ ಮಾಡುವಂತೆ ತಾವು ಲಂಚ ತೆಗೆದುಕೊಳ್ಳುವ ಜನರಿಗೆ ಹೇಳುತ್ತಿದ್ದರಂತೆ. ಸಿಬಿಐ ಅಧಿಕಾರಿಗಳು ಸನಾವುಲ್ಲಾನ ಬಳಿಗೆ ಹೋಗಿ ಅವನಿಗೆ ಒಂದಷ್ಟು ಹಣ ನೀಡಿ ನಗರ ಸಭೆಯಿಂದ ಒಂದು ಕೆಲಸ ಮಾಡಿಸಿಕೊಡು ಅಂತ ಹೇಳಿದ್ದಾರೆ. ಅವರು ನೀಡಿದ ಪಾರ್ಸೆಲ್ ತಲುಪಿಸಲು ಸನಾವುಲ್ಲಾ ರಾವತ್ ಅವರ ಕಚೇರಿಗೆ ಹೋದ ನಂತರ ಅವನನ್ನು ಮತ್ತು ಗೀತಾ ರಾವತ್ ಅವರನ್ನು ಬಂಧಿಸಿದ್ದಾರೆ.

ಸನಾವುಲ್ಲಾ ಕೈಗೆ ನೀಡಿದ ಪಾರ್ಸೆಲ್ ನಲ್ಲಿದ್ದ ನೋಟಿಗಳಿಗೆ ಸಿಬಿಐ ಅಧಿಕಾರಿಗಳು ಬಣ್ಣವೊಂದರಿಂದ ಗುರುತು ಮಾಡಿದ್ದರು. ಗೀತಾ ಕಚೇರಿಯಲ್ಲಿ ಶೋಧ ನಡೆಸಿದಾಗ ಅವರು ಗುರುತು ಮಾಡಿದ ನೋಟುಗಳು ಪತ್ತೆಯಾಗಿವೆ. ಅದರರ್ಥ ಆಪ್ ನಗರ ಸಭಾ ಸದಸ್ಯೆಯನ್ನು ಅವರು ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿತರಿಬ್ಬರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಬಾತ್ಮೀದಾರ ಶೆಹ್ಜಾದ್ ಪೂನಾವಾಲಾ ಅವರು ಗೀತಾ ರಾವತ್ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದನ್ನು ಖಚಿತಪಡಿಸಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನಾದರೂ ಕೇಜ್ರಿವಾಲ್ ಅವರು ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಅಂತ ಹೇಳುವುದನ್ನು ನಿಲ್ಲಿಸಿ ಈ ‘ಮಧು ಭ್ರಷ್ಟಾಚಾರ’ದ ಬಗ್ಗೆ ವಿವರಣೆ ನಿಡುತ್ತಾರೆಯೇ?’ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಕೂಡ ಆಪ್ ಸರ್ಕಾರವನ್ನು ಖಂಡಿಸಿದ್ದು, ಇದಕ್ಕೆ ಮೊದಲು ದೆಹಲಿ ಬಿಜೆಪಿ ಘಟಕದ ವಿರುದ್ಧ ಭ್ರಷ್ಟಾಚಾರದ ಅರೋಪಗಳನ್ನು ಮಾಡಿದ್ದ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಜರಿದಿದ್ದಾರೆ. ‘ಬಿಜೆಪಿಯ ಕೌನ್ಸಿಲರ್ ಗಳು ಭ್ರಷ್ಟಾಚಾರ ನಡೆಸುತ್ತಾರೆ ಅಂತ ಪ್ರತಿದಿನ ಆಮ್ ಆದ್ಮಿ ಪಾರ್ಟಿ ಅರೋಪ ಹೊರಿಸುತಿತ್ತು. ಆದರೆ, ಇವತ್ತು ಅದರ ನಿಜ ಬಣ್ಣ ಬಯಲಿಗೆ ಬಂದಿದೆ, ಎಂದು ಅವರು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯ ಅವರಿಂದ ಕಪೂರ್ ವಿವರಣೆ ಕೇಳಿದ್ದಾರೆ.

ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ಹಲವಾರು ಬಾರಿ ಆರೋಪಿಸಿದ್ದಾರೆ. 2021 ರಲ್ಲಿ ಅವರು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗಳ ಕಳಪೆ ಆರ್ಥಿಕ ಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ದೂಷಿಸಿದ್ದರು. ‘ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಆಪ್ ಎಡೆಬಿಡದೆ ಅಭಿಯಾನ ನಡೆಸುತ್ತಿದೆ. ಬಿಜೆಪಿ ಕೌನ್ಸಿಲರ್ಗಳ ವ್ಯಾಪಕ ಭ್ರಷ್ಟಾಚಾರದಿಂದಾಗಿ ಎಂಸಿಡಿಗಳು ಶಿಥಿಲಗೊಂಡಿವೆ,’ ಎಂದು ಅವರು ಹೇಳಿದ್ದರು.

ಇತ್ತೀಚೆಗೆ, ಅಸೆಂಬ್ಲಿ ಚುನಾವಣೆಗೆ ಮೊದಲು ಸಹ ಆಪ್; ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳನ್ನು ಭ್ರಷ್ಟ ಎಂದು ಹೇಳಿತ್ತು ಮತ್ತು ವಿನಾಕಾರಣ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಮಾಡುತ್ತಿದ್ದ ಆರೋಪಗಳನ್ನು ಕಟುವಾಗಿ ಟೀಕಿಸಿತ್ತು.

ಗೀತಾ ರಾವತ್ ಅವರು ಅರವಿಂದ್ ಕೇಜ್ರಿವಾಲ್ ಹಾಗೂ ಮನೀಷ್ ಸಿಸೋಡಿಯಾ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಎರಡು ತಿಂಗಳು ನಂತರ ದೆಹಲಿ ಮುನಿಸಿಪಲ್ ಕಾರ್ಪೋರೇಶನ್ ಚುನಾವಣೆಗಳು ನಡೆಯಲಿರುವುದರಿಂದ ಈ ಪ್ರಕರಣ  ತಲ್ಲಣ ಸೃಷ್ಟಿಸಿದೆ.

TV9 Kannada


Leave a Reply

Your email address will not be published. Required fields are marked *