
ಕಪಿಲ್ ದೇವ್
Kapil Dev: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿರುವ ಫೋಟೋ ವೈರಲ್ ಆಗಿದ್ದು, ಈಗ ಕಪಿಲ್ ರಾಜಕೀಯ ಸೇರಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಭಾರತದ ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ (Kapil Dev) ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಚರ್ಚೆ ಕಳೆದ ಕೆಲ ದಿನಗಳಿಂದ ನಡೆಯುತ್ತಿತ್ತು. ಆದಾಗ್ಯೂ, ಅವರು ಅಂತಹ ಸಾಧ್ಯತೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ಮಹಾನ್ ಆಲ್ರೌಂಡರ್ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿರುವ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. ಕಪಿಲ್ ಬಗ್ಗೆ ಇಂತಹ ವದಂತಿ ಹಬ್ಬಿದ್ದು ಇದೇ ಮೊದಲಲ್ಲ. ಆದರೆ ಕಪಿಲ್ ದೇವ್ ಮತ್ತೊಮ್ಮೆ ಈ ವರದಿಗಳನ್ನು ಕೇವಲ ವದಂತಿಗಳು ಎಂದಿದ್ದಾರೆ.
1983 ರಲ್ಲಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿದ ಕಪಿಲ್ ಅವರು ದೇಶದ ಅತ್ಯಂತ ಯಶಸ್ವಿ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದರು. ಇಂದು ಅವರು ಕ್ರಿಕೆಟ್ ತೊರೆದು ಬಹಳ ದಿನಗಳಾಗಿದ್ದರೂ ಅಭಿಮಾನಿಗಳಲ್ಲಿ ಅವರ ಮೇಲಿನ ಪ್ರೀತಿಗೆ ಕೊರತೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಅವರ ಜನಪ್ರಿಯತೆಯ ಲಾಭ ಪಡೆಯಲು ಅವಕಾಶಗಳನ್ನು ಹುಡುಕುತ್ತಿವೆ.