ಬೆಂಗಳೂರು: ಇತ್ತೀಚಿಗೆ ಮನೆ ಬಾಗಿಲಿಗೆ ತೆರಳಿ ಮಕ್ಕಳಿಗೆ ಪಾಠ ಹೇಳಿಕೊಡಲೇಂದು ಬೆಂಗಳೂರು ಮಹಾನಗರ ಪಾಲಿಕೆ ಜಾರಿಗೆ ತಂದಿದ್ದ ‘ಮನೆ ಬಾಗಿಲಿಗೆ ಶಾಲೆ’ ಯೋಜನೆ ಆರಂಭವವಾಗುವ ಮುನ್ನವೇ ಹಳ್ಳ ಹಿಡಿದಿದೆ.
ಹೌದು ಬರೋಬ್ಬರಿ 50 ಲಕ್ಷ ವೆಚ್ಚದಲ್ಲಿ ರೂಪಿಸಲಾಗಿದ್ದ ಈ ಯೋಜನೆಯಲ್ಲಿ ಹಳೆ ಬಸ್ಗಳನ್ನು ಬಿಎಂಟಿಸಿ ಶಾಲೆಯಾಗಿ ಪರಿವರ್ತಿಸಿ ಕೊಟ್ಟಿತ್ತು. ಬಿಬಿಎಂಪಿ ಪ್ರತಿ ಬಸ್ಗೆ ಬಸ್ಗೆ ಬಿಎಂಟಿಸಿಗೆ 5 ಲಕ್ಷ ಪಾವತಿಸಿದೆ. ಆದರೆ ಕಳೆದ ಒಂದು ವರ್ಷದಿಂದ ಬಸ್ಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲೇ ನಿಂತಿದ್ದು ಸಂಪೂರ್ಣ ಹಾಳಾಗಿ ಹೋಗಿವೆ. ಅಲ್ಲದೇ ಅಷ್ಟೋಂದು ಖರ್ಚ ಮಾಡಿ ಮಾಡಲಾಗಿದ್ದ ಯೋಜನೆ ಸಂಪೂರ್ಣ ದಾರಿ ತಪ್ಪಿದ್ದು ಶಿಕ್ಷಣ ವಂಚಿತ ಮಕ್ಕಳ ಆಸೆಗೆ ಮತ್ತೇ ತಣ್ಣೀರೆರಚಿದಂತಾಗಿದೆ.
ಏನಿದು ಯೋಜನೆ?
ಬಿಬಿಎಂಪಿ ಕಳೆದ ವರ್ಷ ಪಾಲಿಕೆ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ‘ಮನೆ ಬಾಗಿಲಿಗೆ ಶಾಲೆ’ ಎಂಬ ಯೋಜನೆ ರೂಪಿಸಿತ್ತು. ಈ ಯೋಜನೆಯಡಿಯಲ್ಲಿ ಬಸ್ಗಳನ್ನು ಮಿನಿ ಶಾಲೆಯಾಗಿ ಪರಿವರ್ತಿಸಲಾಗಿತ್ತು. ಬಸ್ಗಳ ಮೂಲಕ ವಿದ್ಯಾರ್ಥಿಗಳಿದ್ದ ಸ್ಥಳಕ್ಕೆ ತೆರಳಿ ಶಿಕ್ಷಣ ನೀಡೋದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ ಆರಂಭವಾಗೋದಕ್ಕೂ ಮುನ್ನವೇ ಯೋಜನೆ ಹಳ್ಳ ಹಿಡಿದಿರೋದು ದುರಂತವೇ ಸರಿ.