ಜ್ಯೂನಿಯರ್​ ಚಿರು ಫೋಟೋ ಅಥವಾ ವಿಡಿಯೋ ಬಂತಂದ್ರೆ ಸಾಕು ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಸರ್ಜಾ ಅಭಿಮಾನಿಗಳು ಫುಲ್​ ಖುಷಿಯಾಗಿ ಬಿಡ್ತಾರೆ. 2020ರ ಅಕ್ಟೋಬರ್​ 22ರಂದು ಜನಿಸಿದ ಜ್ಯೂನಿಯರ್​ ಚಿರುಗೆ ಇತ್ತೀಚೆಗಷ್ಟೆ ಆರು ತಿಂಗಳು ತುಂಬಿದ್ದು, ಕ್ಯೂಟ್​​ ಆಗಿ ಹಾಫ್​ ಬರ್ತ್​ಡೇ ಕೂಡ ಸೆಲೆಬ್ರೇಟ್​ ಮಾಡಲಾಯ್ತು. ಇದೀಗ ಮೇಘನಾ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ, ಅಪ್ಪ ಚಿರು ಜೊತೆ ಜ್ಯೂನಿಯರ್​ ಚಿರು ಮಾತುಕತೆ ನಡೆಸುತ್ತಿರುವ ಮುದ್ದಾದ ವಿಡಿಯೋ ಅಭಿಮಾನಿಗಳ ಕಣ್ಣರಳಿಸಿದೆ.

ಹೌದು.. ಮೇಘನಾ ರಾಜ್​ ಸರ್ಜಾ, ಚಿರಂಜೀವಿ ಸರ್ಜಾ ಫೋಟೋ ಮುಂದೆ ಮಗನನ್ನ ಎತ್ತಿ ಹಿಡಿದಿದ್ದಾರೆ. ಅಪ್ಪನನ್ನ ನೋಡ್ತಿದ್ದಂತೆಯೇ ಪುಟ್ಟ ಚಿರು ಖುಷಿಯಿಂದ ಅದೇನೋ ಸಂಭಾಷಣೆ ನಡೆಸುತ್ತಿರೋದು ಗೋಚರಿಸುತ್ತಿದೆ. ಅಷ್ಟೇ ಅಲ್ಲದೇ ಅಪ್ಪನನ್ನ ನೋಡ್ತಿದ್ದಂತಯೇ ಜ್ಯೂನಿಯರ್​ ಚಿರು ಮುಖದಲ್ಲಿ ಮಂದಹಾಸ ಕೂಡ ಮೂಡಿದೆ. ಅಂದ್ಹಾಗೇ ಹುಟ್ಟಿದಾಗಲೇ ಜ್ಯೂನಿಯರ್​ ಅಪ್ಪನನ್ನೇ ಹೋಲುತ್ತಾನೆ ಅಂತಿದ್ದಿದ್ದು ಈ ವಿಡಿಯೋ ನೋಡಿದಾಗಲೂ ನನೆಪಿಸುತ್ತೆ.

ಈ ವಿಡಿಯೋ ನೋಡ್ತಿದ್ದಂತೆಯೇ, ಹುಟ್ಟಿದಾಕ್ಷಣ ಜ್ಯೂನಿಯರ್​ ಚಿರು ಮುಖ ನೋಡುವ ಮುನ್ನವೇ ಮೇಘನಾ ರಾಜ್​ ಸರ್ಜಾ ತಂದೆ ಚಿರಂಜೀವಿ ಸರ್ಜಾಗೆ ಮಗನನ್ನ ತೋರಿಸಿರೋದು ನೆನಪಾಗುತ್ತೆ. ಅಂದು ಕೂಡ ಚಿರು ಇದೇ ಫೋಟೋ ಮುಂದೆ ಹುಟ್ಟಿದ ಮಗುವನ್ನ ಹಿಡಿದಿದ್ದರು. ಡಿಟ್ಟೋ ಡಿಟ್ಟೋ ಅಪ್ಪನನ್ನ ಹೋಲುವ ಜ್ಯೂನಿಯರ್​ ಚಿರುಗೆ ಅದ್ಯಾವಾಗ ಹೆಸರಿಡ್ತಾರೆ ಅನ್ನೋದೇ ಸದ್ಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

The post ಆರು ತಿಂಗಳು ತುಂಬಿದಂತೆ ಅಪ್ಪನ ಜೊತೆ ಸುದೀರ್ಘ ಮಾತಿಗಿಳಿದ ಜ್ಯೂನಿಯರ್​ ಚಿರು appeared first on News First Kannada.

Source: newsfirstlive.com

Source link