ನವದೆಹಲಿ: ‘ಆರೋಗ್ಯಕ್ಕಾಗಿ ಯೋಗ’ ಹೆಸರಿನಲ್ಲಿ ಇಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಈ ವರ್ಷ ಯೋಗ ಫಾರ್ ವೆಲ್​​ನೆಸ್​ ಥೀಮ್​​ನಡಿಯಲ್ಲಿ ಯೋಗದಿನವನ್ನು ಆಚರಿಸಲಾಗ್ತಿದೆ.

ಅದರಂತೆ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡು  ದೇಶವನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ನಿನ್ನೆಯೇ ಟ್ವೀಟ್ ಮಾಡಿರುವ ಮೋದಿ.. ನಾಳೆ.. 21 ನೇ ಜನವರಿಯಂದು 7ನೇ ಯೋಗದಿನವನ್ನು ಆಚರಿಸಲಿದ್ದೇವೆ. ಈ ವರ್ಷ ಯೋಗ ಫಾರ್ ವೆಲ್​​ನೆಸ್​ ಥೀಮ್​​ನಡಿಯಲ್ಲಿ ಯೋಗದಿನವನ್ನು ಆಚರಿಸಲಾಗ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನ ಗಮನದಲ್ಲಿರಿಸಿಕೊಂಡು ಯೋಗ ಕಲಿಕೆ ನಡೆಯಲಿದೆ. ನಾಳೆ ಸುಮಾರು 6:30ಕ್ಕೆ ನಾನು ಯೋಗ ದಿನವನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದಿದ್ದಾರೆ.

ಕೊರೊನಾ ಮಾರಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಒಂದಷ್ಟು ನಿರ್ಬಂಧಗಳನ್ನ ಹೇರಲಾಗಿದೆ. ನಿಯಮಗಳ ಪಾಲನೆಯೊಂದಿಗೆ, ಪ್ರಧಾನಿ ಮೋದಿ ಅವರ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಾರವಾಗಲಿದೆ ಎಂದು ಕೇಂದ್ರ ಆಯುಷ್ ಇಲಾಖೆ ತಿಳಿಸಿದೆ. ಇನ್ನು ಮೋದಿ ಭಾಷಣದ ಜೊತೆಗೆ ಆಯುಷ್ ಇಲಾಖೆಯ ಸಚಿವ ಕಿರಣ್ ರಿಜಿಜು ಕೂಡ ಮಾತನಾಡಲಿದ್ದಾರೆ.

The post ‘ಆರೋಗ್ಯಕ್ಕಾಗಿ ಯೋಗ’ ಸಂಕಲ್ಪದೊಂದಿಗೆ ಇಂದು ಯೋಗ ದಿನಾಚರಣೆ appeared first on News First Kannada.

Source: newsfirstlive.com

Source link