ನವದೆಹಲಿ: ಕೊರೊನಾ ಗುಣಲಕ್ಷಣವಿಲ್ಲದ ಆರೋಗ್ಯವಂತ ನಾಗರಿಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಿಬೇಕಿದ್ದರೆ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಸಲ್ಲಿಸಬೇಕು ಎಂಬ ಸೂಚನೆಯನ್ನು ಸಂಪೂರ್ಣ ರದ್ದುಗೊಳಿಸಬಹುದಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್​) ಹೇಳಿದೆ.

ಱಪಿಡ್​​ ಆ್ಯಂಟಿಂಜೆನ್​ ಪರೀಕ್ಷೆಗಳಿಗಿಂತ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ. ಹೀಗಾಗಿ ಇಲ್ಲಿಯವರೆಗೆ ದೇಶದಲ್ಲಿ ಪ್ರಯಾಣಿಸುವ ಜನರು ಗಡಿಗಳನ್ನು ದಾಟಲು ಆರ್‌ಟಿ-ಪಿಸಿಆರ್ ಟೆಸ್ಟ್​​ನಲ್ಲಿ ಕೊರೊನಾ ನೆಗೆಟಿವ್ ಬಂದ ವರದಿಯನ್ನು ಸಲ್ಲಿಸಬೇಕಿತ್ತು.  ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚಿರುವುದರಿಂದ ಪ್ರಯೋಗಾಲಯದಲ್ಲಿ ಹೆಚ್ಚಿನ ಒತ್ತಡ ನಿವಾರಿಸುವ ದೃಷ್ಟಿಯಿಂದ ಈ ನಿಯಮವನ್ನ ತೆಗೆದುಹಾಕಬಹುದು ಎಂದು ಐಸಿಎಂಆರ್ ಸಲಹೆ ನೀಡಿದೆ.

ಕೊರೊನಾ ರೋಗಿ 10 ದಿನಗಳ ಕ್ವಾರಂಟೀನ್ ಪೂರ್ಣಗೊಳಿಸಿದ್ದರೆ ಮತ್ತು ಕಳೆದ ಮೂರು ದಿನಗಳಲ್ಲಿ ಹೊಸಾಗಿ ಜ್ವರ ಕಾಣಿಸಿಕೊಳ್ಳದಿದ್ದರೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸುವ ಅಗತ್ಯವಿಲ್ಲ ಎಂದಿದೆ. RAT ಅಥವಾ RTPCR ಟೆಸ್ಟ್​ನಲ್ಲಿ ಒಮ್ಮೆ ಪಾಸಿಟಿವ್ ವರದಿ ಬಂದ ಯಾವುದೇ ವ್ಯಕ್ತಿ ಮತ್ತೆ RTPCR ಪರೀಕ್ಷೆಯನ್ನು ಪುನರಾವರ್ತಿಸಬಾರದು ಎಂದು ಹೇಳಿದೆ. ಇನ್ನು ಸೋಂಕಿನ ಲಕ್ಷಣವಿರುವವರು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುವ ಅಗತ್ಯವಿದೆ ಎಂದು ಸೂಚಿಸಿದೆ.

The post ‘ಆರೋಗ್ಯವಂತರು ಅಂತರ್‌ ರಾಜ್ಯ ಪ್ರಯಾಣಕ್ಕೆ ಕೊರೊನಾ ಟೆಸ್ಟ್ ಮಾಡಿಸುವ​ ಅಗತ್ಯವಿಲ್ಲ’ -ICMR appeared first on News First Kannada.

Source: newsfirstlive.com

Source link