ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ – How To Port Health Insurance; Advantages and Disadvantages of porting Everything you need to know business news in Kannada


ಆರೋಗ್ಯ ವಿಮೆಯನ್ನು ಪೋರ್ಟ್ ಮಾಡಿಕೊಳ್ಳಬಹುದು. ಆದರೆ, ಪೋರ್ಟ್ ಮಾಡುವ ಮುನ್ನ ತಿಳಿದಿರಲೇಬೇಕಾದ ಕೆಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ನೆಟ್​ವರ್ಕ್ ಸಮಸ್ಯೆ ಇದ್ದರೆ ಅಥವಾ ಉತ್ತಮ ಆಫರ್ ಇಲ್ಲದಿದ್ದರೆ ಮೊಬೈಲ್ ಸಿಮ್ ಅನ್ನು ಪೋರ್ಟ್ ಮಾಡುವ ಬಗ್ಗೆ ನೀವು ಕೇಳಿರುತ್ತೀರಿ. ಅದೇ ರೀತಿ ಆರೋಗ್ಯ ವಿಮೆ (Health Insurance) ಪಾಲಿಸಿಯನ್ನೂ ಬೇರೆ ಕಂಪನಿಗೆ ಪೋರ್ಟ್ (Porting) ಮಾಡಬಹುದೇ? ಹೌದು, ನಿಯಮಗಳಲ್ಲಿ ಅದಕ್ಕೆ ಅವಕಾಶವಿದೆ. ಪ್ರಸ್ತುತ ನಿಮ್ಮ ಬಳಿ ಇರುವ ಆರೋಗ್ಯ ವಿಮೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ನಮಗೆ ಸಮಾಧಾನವಿಲ್ಲದಿದ್ದರೆ, ವಿಮಾದಾರನ ಸೇವೆ ಚೆನ್ನಾಗಿಲ್ಲದಿದ್ದರೆ ಅಥವಾ ಬೇರೆ ಕಂಪನಿಗಳು ಅದಕ್ಕಿಂತ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದರೆ ಆರೋಗ್ಯ ವಿಮೆಯನ್ನು ಪೋರ್ಟ್ ಮಾಡಿಕೊಳ್ಳಬಹುದು. ಆದರೆ, ಆರೋಗ್ಯ ವಿಮೆ ಪೋರ್ಟ್ ಮಾಡುವ ಮುನ್ನ ತಿಳಿದಿರಲೇಬೇಕಾದ ಕೆಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಇನ್​ಡೆಮ್​ನಿಟಿ ಅಥವಾ ಸಮಗ್ರ ಸುರಕ್ಷೆ ಪಾಲಿಸಿ​ಗಳನ್ನು ಮಾತ್ರ ಪೋರ್ಟ್ ಮಾಡಲು ಸಾಧ್ಯ

ಒಂದು ವೇಳೆ ನಿಮ್ಮ ಆರೋಗ್ಯ ವಿಮೆ ಪಾಲಿಸಿಯನ್ನು ಒಂದು ಕಂಪನಿಯಿಂದ ಮತ್ತೊಂದಕ್ಕೆ ಪೋರ್ಟ್ ಮಾಡಲು ಇಚ್ಛಿಸಿದರೆ, ನಿಮ್ಮ ಪಾಲಿಸಿಗೆ ಇನ್​ಡೆಮ್​ನಿಟಿ ಅಥವಾ ಸಮಗ್ರ ಸುರಕ್ಷೆ ಕವರೇಜ್ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇನ್​ಡೆಮ್​ನಿಟಿ ಕವರೇಜ್ ಇರುವ ಪಾಲಿಸಿಗಳಲ್ಲಿ ಆಯ್ಕೆಗಳು ಹೆಚ್ಚಾಗಿರುತ್ತವೆ. ತಮ್ಮಿಷ್ಟದ ಆಸ್ಪತ್ರೆ ಅಥವಾ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಈ ಪಾಲಿಸಿಗಳು ಅವಕಾಶ ಕೊಡುತ್ತವೆ. ರಿನ್ಯೂವಲ್ ಸಮಯದಲ್ಲಿ ಇಂಥ ಪಾಲಿಸಿಗಳನ್ನು ಮಾತ್ರವೇ ಅವುಗಳ ಇತರೆಲ್ಲಾ ಬೆನಿಫಿಟ್​ಗಳೊಂದಿಗೆ ಪೋರ್ಟ್​ ಮಾಡಲು ಸಾಧ್ಯವಿದೆ ಎಂದು ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್​​ನ ಡೈರೆಕ್ಟ್ ಸೇಲ್ಸ್ ವಿಭಾಗದ ಮುಖ್ಯಸ್ಥ ವಿವೇಕ್ ಚತುರ್ವೇದಿ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ಉಲ್ಲೇಖಿಸಿದೆ.

TV9 Kannada


Leave a Reply

Your email address will not be published.