ಚಿತ್ರದುರ್ಗ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜಿಲ್ಲೆಗೆ ಭೇಟಿ ನೀಡುತ್ತಿದ್ದ ದಿನವೇ ಆಸ್ಪತ್ರೆಯಲ್ಲಿ ಆಕ್ಸಿಜನ್​ ಸಮಸ್ಯೆ ಎದುರಾಗಿದ್ದು, ರೋಗಿಗಳು ಆಕ್ಸಿಜನ್​ ಇಲ್ಲದೇ ನರಳಾಡಿದ ಘಟನೆ ನಡೆದಿದೆ.

ಚಿತ್ರದುರ್ಗದ ಜಿಲ್ಲಾ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ಟ್ಯಾಂಕ್​ನಲ್ಲಿ ಆಕ್ಸಿಜನ್ ಖಾಲಿಯಾಗಿದ್ದು, ಹೈಫ್ಲೋ ಆಕ್ಸಿಜನ್ ಪಡೆಯುತ್ತಿದ್ದ ರೋಗಿಗಳು ಪ್ರಾಣವಾಯುಗಾಗಿ ಪರಡಾಟ ನಡೆಸಿದರು. ಆಕ್ಸಿಜನ್ ಕಡಿಮೆ ಹಿನ್ನೆಲೆ ಒದ್ದಾಡುತ್ತಿದ್ದ ರೋಗಿಗಳಿಗೆ ಸಂಬಂಧಿಗಳು ಗಾಳಿ ಬೀಸುತ್ತಿದ್ದರು. ಸದ್ಯ ಆಕ್ಸಿಜನ್​ ಟ್ಯಾಂಕರ್​​ ಖಾಲಿಯಾದ ಹಿನ್ನೆಲೆಯಲ್ಲಿ ಜಂಬೋ ಸಿಲೆಂಡರ್ ಮೂಲಕ ರೋಗಿಗಳಿಗೆ ಆಕ್ಸಿಜನ್ ಸರಬರಾಜು ಮಾಡಲು ಸಿಬ್ಬಂದಿ ಯತ್ನಿಸಿದ್ದಾರೆ. ಹೈಫ್ಲೋ ಆಕ್ಸಿಜನ್ ಸಿಗದೆ ಕೋವಿಡ್​ ರೋಗಿಗಳು ಸಮಸ್ಯೆ ಎದುರಿಸಿದ್ದಾರೆ.

ಆಕ್ಸಿಜನ್​ ಸರಿಯಾಗಿ ಪೂರೈಕೆಯಾಗದ ಹಿನ್ನಲೆಯಲ್ಲಿ ಕೋವಿಡ್​​ ರೋಗಿಗಳ ಸಂಬಂಧಿಗಳು ಆತಂಕಕ್ಕೀಡಾಗಿದ್ದು, ಈ ಕುರಿತು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಆಕ್ಸಿಜನ್ ಟ್ಯಾಂಕರ್ ಬರುತ್ತಿದೆ ಎಂದು ಸಬೂಬು ಹೇಳಿದ್ದಾರೆ. ಇಂದು ಚಿತ್ರದುರ್ಗಕ್ಕೆ ಆರೋಗ್ಯ ಸಚಿವ‌ ಡಾ.ಸುಧಾಕರ್ ಭೇಟಿ ನೀಡುತ್ತಿದ್ದು, ಇದೇ ವೇಳೆಯೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

The post ಆರೋಗ್ಯ ಸಚಿವರ ಭೇಟಿ ದಿನದಂದೇ ಚಿತ್ರದುರ್ಗ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಖಾಲಿ.. ರೋಗಿಗಳ ನರಳಾಟ appeared first on News First Kannada.

Source: newsfirstlive.com

Source link