ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಬಿಗಡಾಯಿಸಲು ಆರೋಗ್ಯ ಸಚಿವ ಡಾ. ಸುಧಾಕರ್ ಅವರ ನಿರ್ಲಕ್ಷವೇ ಕಾರಣ ಅನ್ನೋ ಆರೋಪವನ್ನು ಹಲವು ಬಿಜೆಪಿ ಶಾಸಕರೇ ಮಾಡಿದ್ದರು. ಜೊತೆಗೆ ನಿನ್ನೆ ಚಾಮರಾಜನಗರದಲ್ಲಿ 24 ಜನರು ಆಕ್ಸಿಜೆನ್ ಸಿಗದೇ ಸಾವನ್ನಪ್ಪಿದ್ದಾರೆ ಅನ್ನೋ ಆರೋಪ ಕೇಳಿ ಬಂದ ಬೆನ್ನಲ್ಲೇ ಇಂದು ಸಿಎಂ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆರೋಗ್ಯ ಸಚಿವ ಡಾ. ಸುಧಾಕರ್​ಗೆ ನೀಡಿದ್ದ ಎಲ್ಲ ಜವಾಬ್ದಾರಿಯನ್ನೂ ಸಿಎಂ ಬಿ.ಎಸ್​ ಯಡಿಯೂರಪ್ಪ ಕಿತ್ತುಕೊಂಡಿದ್ದಾರೆ.

ಹೌದು. ಆರೋಗ್ಯ ಸಚಿವ ಡಾ ಸುಧಾಕರ್​ಗೆ ಕೇವಲ ಆರೋಗ್ಯ ಖಾತೆ ಮಾತ್ರ ಉಳಿಸಿರುವ ಸಿಎಂ, ಕೊರೊನಾಗೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿಯನ್ನೂ ನೀಡಿಲ್ಲ. ಸದ್ಯ ಜಗದೀಶ್ ಶೆಟ್ಟರ್‌ಗೆ ಆಕ್ಸಿಜನ್ ಜವಾಬ್ದಾರಿಯನ್ನು ಸಿಎಂ ನೀಡಿದ್ದರೆ, ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್​ಗೆ ಯಾವುದೇ ಔಷಧದ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿದ್ದಾರೆ. ಇನ್ನು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಬೆಡ್‌ಗಳ ವ್ಯವಸ್ಥೆ ಜವಾಬ್ದಾರಿ ಆರ್.ಅಶೋಕ್ ಹಾಗೂ ಬೊಮ್ಮಾಯಿ ಹೆಗೆಲಿಗೆ ಏರಿದೆ. ಅಲ್ಲದೇ ಮಹತ್ವದ ವಾರ್ ರೂಂ ಜವಾಬ್ದಾರಿಯನ್ನು ಅರವಿಂದ್ ಲಿಂಬಾವಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೀಡಿದ್ದಾರೆ.

The post ಆರೋಗ್ಯ ಸಚಿವ ಡಾ.ಸುಧಾಕರ್​ಗೆ ಮುಖಭಂಗ; ಎಲ್ಲ ಜವಾಬ್ದಾರಿ ಕಿತ್ತುಕೊಂಡ ಸಿಎಂ ಯಡಿಯೂರಪ್ಪ appeared first on News First Kannada.

Source: newsfirstlive.com

Source link