ಬಿಗ್​​ ಬಾಸ್​ ಸೀಸನ್​ 8ರ ಮೊದಲ ಇನ್ನಿಂಗ್ಸ್​ಗಿಂತ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಪೈಪೋಟಿ ಹೆಚ್ಚಾಗಿದ್ದು, ಸ್ಪರ್ಧಿಗಳು ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಆದ್ರೆ, ವೈಯಕ್ತಿಕ ಕಾರಣಗಳಿಂದಾಗಿ ಈ ಇಡೀ ವಾರ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದವು.

ವಾರದ ಜೊತೆ ಕಿಚ್ಚನ ಜೊತೆ​ನಲ್ಲಿ ಕಳೆದವಾರ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಿದ್ದ ಸುದೀಪ್ ಈ ವಾರ ಎಲ್ಲರಿಗೂ ​ ಸರಿಯಾಗಿ ಬೆಂಡೆತ್ತಿದ್ದಾರೆ. ಅಷ್ಟೇ ಅಲ್ಲದೇ ಎಲ್ಲರ ಮುನಿಸಿಗೆ ಕಾರಣ ಕೇಳಿ ಒಂದು ಮಾಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಮೊದಲಿಗೆ ಬಂದಿದ್ದು ಡಿಗ್ರೀ ಕಾಲೇಜ್​ ವಿಷಯ. ಈ ಕುರಿತು ಪ್ರಶಾಂತ್​ ಅವರಿಗೆ ಸರಿಯಾಗಿಯೇ ಕ್ಲಾಸ್​ ತೆಗೆದುಕೊಂಡರು.
ಪ್ರಶಾಂತ್​ ಅವರೇ ಎಂದು ಶುರು ಮಾಡಿದ ಕಿಚ್ಚಾ.. ಪಿಯುಸಿ ಮುಗಿಸಿದ್ದೀರಿ, ಡಿಗ್ರಿಗೆ ಎಂಟ್ರಿಯಾಗಿದ್ದಿರಿ. ಹಾಗಿದ್ರೆ, ಡಿಗ್ರಿ ಕಾಲೇಜ್​ನಲ್ಲಿ ನಿಮಗೆ ಏನು ಎಂಬ್ಯಾರಸ್ಮೆಂಟ್​ ಆಗಿಲ್ವಾ ಎಂದು ಸ್ಮೂತಾಗಿಯೇ ಚಾಟಿ ಬೀಸುತ್ತಾರೆ. ಇದಕ್ಕೆ ಪ್ರಶಾಂತ್​ ಕಕ್ಕಾಬಿಕ್ಕಿಯಾಗುತ್ತಾರೆ. ಮತ್ತೆ ಮಾತು ಆರಂಭಿಸಿದ ಸುದೀಪ್​, ಪ್ರಶಾಂತ್​ ಅವರೇ ದಿವ್ಯಾ ಸುರೇಶ್​ ಅವರು ಒಂದು ಸಿನಿಮಾ ಮಾಡಿರ್ತಾರೆ, ಅದನ್ನ ನೀವು ನೋಡಿರ್ತೀರಿ, ಸೋ ಆ ಸಿನಿಮಾ ಹೆಸರು ತಗೊಂಡು ರ್ಯಾಗಿಂಗ್​ ನಡೀತಾನೇ ಇದೆ ಎನ್ನುತ್ತಾರೆ.

ಇದಕ್ಕೆ ಉತ್ತರಿಸಿದ ಪ್ರಶಾಂತ್​ ಇಲ್ಲಾ ಸರ್..​ ಒಂದು ಸಾರಿ ಮಾತ್ರ ಹೇಳಿದೀನಿ ಅಂತಾರೆ. ನಂತರ ಸುದೀಪ್​ ಮುಂದುವರೆದು, ನೀವು ಒಂದು ದಿನಾ ಅಂತಿರಾ, ಆದ್ರೆ ಅದು ಎರಡನೇ ದಿನ ಮುಂದುವರೆಯುತ್ತದೆ. ಇನ್​ಫ್ಯಾಕ್ಟ್​ ಅದನ್ನು ನೀವು ಮತ್ತು ಚಕ್ರವರ್ತಿ ಅವರು ಇಂಪ್ರೂವೈಸ್​ ಕೂಡ ಮಾಡ್ತಿರಾ. ಒಂದು ಕಡೆ ಚಕ್ರವರ್ತಿ ಅವರು ಹೇಳ್ತಾರೆ ದಿವ್ಯಾ ಸುರೇಶ್​ ಮಗಳಿದ್ದ ಹಾಗೆ ಅಂತಾ ಒಕೆ ಅದು ನಿಜ.. ಆದ್ರೆ ದಿವ್ಯಾ ಅವರು ತಗೊಂಡಿರುವಂತಾ ಒಂದು ತೀರ್ಮಾನನಾ ತಗೊಂಡು ರ್ಯಾಗ್​ ಮಾಡೋದು ಸರೀನಾ. ಅಷ್ಟಕ್ಕೂ ಅವರು ತಗೊಂಡ ನಿರ್ಧಾರ ಅಷ್ಟು ಬ್ಯಾಡ್ ಆಗಿದಿಯಾ? ನಾನು ಎಷ್ಟೋ ಸಿನಿಮಾ ಮಾಡಿದ್ದೀನಿ. ಅದರಲ್ಲಿ ಕೆಲ ಸಿನಿಮಾಗಳು ಚೆನ್ನಾಗಿರ್ತವೆ ಇನ್ನೂ ಕೆಲವು ಚೆನ್ನಾಗಿರಲ್ಲ. ಅದ್ರಲ್ಲಿ ಎರಡೂ ಇದೆ ಸರ್​. ಒಂದು ತುಂಬಾ ಸಕಸ್ಸ್​ ನೋಡಿರ್ತೀವಿ.. ಇಲ್ಲ ತುಂಬಾ ಪಾಠ ಕಲ್ತಿರ್ತೀವಿ. ಆದ್ರೆ, ಕೆಲವು ವಿಚಾರಗಳನ್ನು ಮಾತ್ನಾಡಬೇಕಾದ್ರೆ ಬಿಗ್​ ಬಾಸ್​ ನೈತಿಕತೆ, ಸಾಮಾಜಿಕ ಅಭಿಪ್ರಾಯ ಎಲ್ಲಾ ತಲೆಯಲ್ಲಿ ಇಟ್ಕೊಂಡು ಮಾತ್ನಾಡಬೇಕಾಗುತ್ತೆ ಎಂದರು.

ಮುಂದುವರೆದು.. ಆ ಹುಡುಗಿ ಆ ವಯಸ್ಸಲ್ಲಿ ಒಂದು ನಿರ್ಧಾರ ತಗೋತಾರೆ. ಅದು ಅವರ ನಿರ್ಧಾರ.. ಅವರದೇ ಆಗಿರ್ಬಹುದು ಅಥವಾ ಇಲ್ದೇನು ಇರ್ಬಹುದು. ಆದ್ರೆ ಅದನ್ನೇ ಪಿನ್​ ಪಾಯಿಂಟ್​ ಮಾಡೋದು ತಪ್ಪಾಗುತ್ತೆ. ಅದು ಮುಖ್ಯವಾಗಿ ನೋವು ಮಾಡುವ ಉದ್ದೇಶದಿಂದಲೇ ಪಾಯಿಂಟ್ ಮಾಡಿದಾಗ ಇಟ್ಸ್​ ನಾಟ್​ ಓಕೆ. ಹಾಗೇ 72 ದಿನಗಳಲ್ಲಿ ನಾನು ದಿವ್ಯಾ ಸುರೇಶ್​ ಅವರ ಬಗ್ಗೆ ಒಂದೇ ಒಂದು ಕಮೆಂಟ್​ ಮಾಡಿಲ್ಲ ಅಂತಾ ಹೇಳ್ತಿರಾ. ಅದರ ಫ್ಯಾಕ್ಟ್​ ಚಕ್​ ಮಾಡಿದ್ರೆ, ನೀವು ಸರಿ ಇದಿರಾ ಅನ್ಸುತ್ತಾ ಪ್ರಶಾಂತ್..?

ಹೊರಗಡೆ ಬಂದು ನೀವೆಲ್ಲ, ಎಲ್ಲವನ್ನೂ ನೋಡಿ ಒಳಗಡೆ ಹೋಗಿ ಮುಖಕ್ಕೆ ಹೊಡೆದ ಹಾಗೆ ಸುಳ್ಳು ಹೇಳಿದಾಗ ಅದನ್ನು ಟ್ಯೂನಿಂಗ್​ ಮಾಡೋದು ನನ್ನ ಜವಾಬ್ದಾರಿ. ಶೃತಿ ತಪ್ತಿದ್್ಓರಾ. ತಿದ್ದಿ ಶೃತಿ ಹೇಳ್ತಿದೀನಿ. ಇದರ ಮೇಲೆ ನಿಮಗೆ ಬಿಟ್ಟಿದ್ದು ಎನ್ನುತ್ತಾರೆ ಸುದೀಪ್​.

ಕಳೆದ ವಾರ ಚಕ್ರವರ್ತಿ ಅವರು ನೀಡಿದ್ದ ಹೇಳಿಕೆ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಇದರ ಎಫೆಕ್ಟ್​ನಿಂದ ಇಡೀ ವಾರ ಮನೆಯ ವಾತಾವರಣ ಹದಗೆಟ್ಟಿತ್ತು. ಒಂದು ರೀತಿ ಇದೇ ಎಲ್ಲರ ವೈಮನಸ್ಸಿಗೆ ಬುನಾದಿ ಹಾಕಿದ್ದು ಎಂದರೂ ತಪ್ಪಿಲ್ಲ. ಈ ವಿಚಾರವಾಗಿ ಸುದೀಪ್​ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಸೋಷಿಯಲ್​ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳೇ ನಡೆದಿದ್ದವು. ಪತ್ರವಳ್ಳಿ ಎಂಬ ಶಬ್ದದ ಕುರಿತು ಒಂದು ರೀತಿ ಇಡೀ ಕರ್ನಾಟಕವೇ ಹುಡುಕಿದ್ದು ಸುಳ್ಳಲ್ಲ.

ಆದ್ರೆ, ಈಗ ಸುದೀಪ್​ ಅವರು ಅಳದು ತೂಗಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಎಲ್ಲಾ ಡಿಕ್ಷನರಿಗಳನ್ನು ಜಾಲಾಡಿದ್ರೂ. ಈ ಶಬ್ದಕ್ಕೆ ಅರ್ಥ ಸಿಕ್ಕಿಲ್ಲ. ಇಲ್ಲಿ ಒಂದು ಹೆಣ್ಣು ಮಗಳ ವಿಚಾರ ಇರೋದ್ರಿಂದ ಒಂದು ದೊಡ್ಡ ಚರ್ಚಯೇ ನಡೆಯುತ್ತಿದೆ. ಇದಕ್ಕೆ ಚಕ್ರವರ್ತಿ, ಡಿಕ್ಷನರಿಯಲ್ಲಿ ಎಲ್ಲ ಪದಗಳಿಗೆ ಉತ್ತರ ಸಿಗಲ್ಲ, ನಾನು ಪತ್ರಿಕೆಯಲ್ಲಿ ಕೆಲಸ ಮಾಡಿದ್ದರಿಂದ ಈ ರೀತಿಯ ಹಳ್ಳಿ ಭಾಷೆಗಳನ್ನು ಕೇಳಿದ್ದೇನೆ. ಆಡು ಭಾಷೆಗೆ ಯಾವ ಡಿಕ್ಷನರಿಯಲ್ಲಿ ಉತ್ತರ ಸಿಗಲ್ಲ ಎನ್ನುತ್ತಾರೆ.

ಇದಕ್ಕೆ ಸುದೀಪ್​ ಅವರು ನೀವು, ಡಿಕ್ಷನರಿ ಎಂದದ್ದಕ್ಕೆ ನಾವು ಹುಡುಕಿದ್ದು, ಇನ್ನೊಂದು ಎಲ್ಲ ರೀತಿಯ ಆಡು ಭಾಷೆಯ ಕುರಿತು ಜಾಲಾಡಿದ್ದು ಆಯಿತು. ನೀವೇ ಹೇಳುತ್ತೀರಿ ಹೆಣ್ಮಕ್ಕಳಿಗೆ ಗೌರವ ಕೊಡ್ತೀನಿ ಅಂತಾ. ಅದು ಸತ್ಯ. ಆದ್ರೆ ನೀವು ಹೇಳಿದ ಶಬ್ದ ನಿಜಕ್ಕೂ ಸಣ್ಣದಲ್ಲ. ಇದ್ರಲ್ಲಿ ಒಂದು ಹೆಣ್ಣು ಮಗು ಇನ್ವಾಲ್​ ಆಗಿದ್ದಾರೆ. ಇದ್ರಿಂದ ದೊಡ್ಡ ಪರಿಣಾಮ ಉಂಟಾಗುತ್ತದೆ. ಇನ್ನೊಬ್ಬರು ಹೆಣ್ಣುಮಕ್ಕಳ ಬಗ್ಗೆ ಮಾತಾಡಿದ್ರೆ ಹೇಗೆ. ಇದು ನನಗೆ ನಿಮ್ಮ ಮೇಲೆ ಇರುವ ಗೌರವ ಒಡೆದಿದ್ದು ಸುಳ್ಳಲ್ಲ. ಹೀಗಾಗಿ ಶಬ್ದಗಳನ್ನು ಉಪಯೋಗಿಸುವಾಗ ಅಳದು ತೂಗಿ ಮಾತಾಡಿ ಎನ್ನುತ್ತಾರೆ. ನಂತರ ದಿವ್ಯಾ ಸುರೇಶ್​, ಚಕ್ರವರ್ತಿ ಹಾಗೂ ಪ್ರಶಾಂತ್​ ಅವರ ನಡುವೆ ಕಾಂಪ್ರಮೈಸ್​ ಮಾಡಿಸಿ, ಎಲ್ಲದಕ್ಕೂ ಒಂದು ಹ್ಯಾಪಿ ಎಂಡಿಂಗ್​ ನೀಡುತ್ತಾರೆ.

The post ಆರೋಪ.. ಪ್ರತ್ಯಾರೋಪ.. ಸ್ಪರ್ಧಿಗಳಿಗೆ ಚಳಿ ಬಿಡಿಸಿದ ಸುದೀಪ್​ appeared first on News First Kannada.

Source: newsfirstlive.com

Source link