ನವದೆಹಲಿ: ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಆರ್ಚರಿ ವರ್ಲ್ಡ್​ಕಪ್​ನಲ್ಲಿ ಭಾರತೀಯ ಆರ್ಚರಿ ಪಟು ದೀಪಿಕಾ ಕುಮಾರಿ ಮೂರನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ದೀಪಿಕಾ ಕುಮಾರಿ ಸಾಧನೆಗೆ ದೊಡ್ಡ ದೊಡ್ಡ ಗಣ್ಯರು ಟ್ವೀಟ್ ಮಾಡುವ ಮೂಲಕ ಅಭಿನಂದನೆಗಳನ್ನ ಮಹಾಪೂರವನ್ನೇ ಹರಿಸಿದ್ದಾರೆ.

ಇನ್ನು ಚಿನ್ನದ ಪದಕ ಗೆದ್ದ ದೀಪಿಕಾ ಕುಮಾರಿ.. ಇದು ವರ್ಲ್ಡ್​ ಕಪ್​ನಲ್ಲಿ ಒಂದರ ಹಿಂದೊಂದರಂತೆ ಮೂರು ಚಿನ್ನದ ಪದಕಗಳನ್ನ ಗೆದ್ದಿದ್ದು ಇದೇ ಮೊದಲ ಬಾರಿ. ನನಗೆ ಇದರಿಂದ ಖುಷಿಯಾಗಿದ್ದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಕಾಪಿಟೇಷನ್​ ಎದುರಾಗುವುದರಿಂದ ಅಲ್ಲಿಯೂ ನನ್ನ ಸಾಮರ್ಥ್ಯ ತೋರಿಸಲು ಸಜ್ಜಾಗುತ್ತಿದ್ದೇನೆ ಎಂದಿದ್ದಾರೆ.

ಇನ್ನು ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಹೇಳಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್.. ನಿಮ್ಮದು ಮ್ಯಾಗ್ನಿಫಿಸೆಂಟ್ ಪರ್ಫಾರ್ಮೆನ್ಸ್ ಎಂದಿದ್ದಾರೆ. ಅಲ್ಲದೇ ಈ ಗೆಲುವು ನಿಮಗೆ ಒಪ್ಪುತ್ತದೆ. ಒಲಂಪಿಕ್​ನಲ್ಲಿ ನಿಮ್ಮ ಸಾಧನೆಗೆ ಇದು ಮುನ್ನೋಟವಾಗಿದೆ. ನಿಮ್ಮ ಸಾಧನೆಗಯ ಬಗ್ಗೆ ಹೆಮ್ಮೆಯಾಗುತ್ತಿದೆ. ಟೋಕಿಯೋ ಒಲಂಪಿಕ್ಸ್​ಗೆ ಗುಡ್​ಲಕ್ ಎಂದಿದ್ದಾರೆ.

The post ಆರ್ಚರಿಯಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ದೀಪಿಕಾ ಕುಮಾರಿ: ಮ್ಯಾಗ್ನಿಫಿಸೆಂಟ್ ಎಂದ ಕ್ರಿಕೆಟ್ ದೇವರು appeared first on News First Kannada.

Source: newsfirstlive.com

Source link