ಆರ್ಯನ್​ಖಾನ್​ಗೆ ಮುಳುವಾಯ್ತು ವಾಟ್ಸ್​ಆ್ಯಪ್ ಚಾಟ್..! ಕೋರ್ಟ್ ಜಾಮೀನು ನೀಡದಿರಲು ಕಾರಣ ಏನು..?

ಮುಂಬೈ: ಮುಂಬೈ ಕೋರ್ಟ್ ಆರ್ಯನ್ ಖಾನ್ ಜಾಮೀನಿನ ಆದೇಶವನ್ನು ಇಂದಿಗೆ ಕಾದಿರಿಸಿತ್ತು. ಇಂದು ಆರ್ಯನ್ ಖಾನ್​ಗೆ ಜಾಮೀನು ಸಿಗೋದು ಬಹುತೇಕ ಪಕ್ಕಾ ಅಂತಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಮಂದಿ ಮಾತನಾಡಿಕೊಂಡಿದ್ರು.
ಆದ್ರೆ ಇಂದು ಆದೇಶ ಹೊರಹಾಕಿದ ಮುಂಬೈನ ಎನ್​ಡಿಪಿಎಸ್ ವಿಶೇಷ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಅದರ ಜೊತೆಗೆ ಜಾಮೀನು ನೀಡದಿರಲು ಕಾರಣವೇನು ಅಂತಲೂ ಹೇಳಿದೆ.

ಜಾಮೀನು ನಿರಾಕರಿಸಿದ ಕೋರ್ಟ್ ಹೇಳಿದ್ದೇನು..?

  1. ಆರ್ಯನ್ ಖಾನ್ ಅಕ್ರಮ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರೋದು ವಾಟ್ಸ್​ಆ್ಯಪ್ ಚಾಟ್​​ನಲ್ಲಿ ಇದೆ.. ಆರ್ಯನ್‌ಗೆ ಅಂತರಾಷ್ಟ್ರೀಯ ಡ್ರಗ್ ಜಾಲದ ವ್ಯಾಪಾರಿಗಳೊಂದಿಗೆ ಸಂಪರ್ಕವಿದೆ.
  2. ಕೋರ್ಟ್​ನಲ್ಲಿ ವಾದ ಮಂಡಿಸಿದ ಎಎಸ್​ಜಿ ಆರ್ಯನ್ ಖಾನ್ ಅಕ್ರಮ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದನ್ನ ತೋರಿಸಿದೆ ಎಂದು ವಾದ ಮಂಡಿಸಿದ್ದಾರೆ.. ವಾಟ್ಸ್ ಆ್ಯಪ್​ ಚಾಟ್​​ನ ಪ್ರಾಥಮಿಕ ತನಿಖೆಯಲ್ಲಿ ಆರ್ಯನ್ ಖಾನ್ ಅಕ್ರಮ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರೋದನ್ನ ತೋರಿಸಿದೆ. ಆರ್ಯನ್ ಖಾನ್ ಜಾಮೀನಿನಲ್ಲಿದ್ದಾಗ ಮತ್ತೆ ಇಂಥ ಅಕ್ರಮ ಎಸಗುವುದಿಲ್ಲ ಎಂದು ಹೇಳಲಾಗದು. ಆರ್ಯನ್ ಖಾನ್ ಸಾಕ್ಷ್ಯವನ್ನು ತಿರುಚುವ ಎಲ್ಲ ಅವಕಾಶಗಳಿವೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
  3. ವಾಟ್ಸ್​ಆ್ಯಪ್ ಚಾಟ್​ ಡ್ರಗ್ಸ್ ಪೂರೈಕೆದಾರರು ಮತ್ತು ಪೆಡ್ಲರ್​ಗಳೊಂದಿಗೆ ಆರ್ಯನ್ ಖಾನ್ ಸಂಬಂಧ ಹೊಂದಿದ್ದನೆಂದು ಬಹಿರಂಗಗೊಳಿಸಿದೆ ಎಂದು ಕೋರ್ಟ್ ಹೇಳಿದೆ. ಆರ್ಯನ್ ಖಾನ್​ ಬಳಿ ಏನೂ ಪತ್ತೆಯಾಗದಿದ್ದರೂ ಅರ್ಬಾಜ್ ಮರ್ಚೆಂಟ್ ಬಳಿ 6 ಗ್ರಾಂ ಚರಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಚಾಟ್‌ಗಳು ಮಾದಕವಸ್ತು ಚಟುವಟಿಕೆಗಳಲ್ಲಿ ತೊಡಗಿದ್ದನ್ನು ಪ್ರತಿಬಿಂಬಿಸುತ್ತದೆ.
  4. ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಹಿಂದಿನಿಂದಲೂ ಸ್ನೇಹಿತರು. ಇಬ್ಬರೂ ಜೊತೆಯಾಗಿಯೇ ತೆರಳಿದ್ದಾರೆ. ಅಲ್ಲದೇ ಒಟ್ಟಿಗೇ ಬಂಧನಕ್ಕೊಳಗಾಗಿದ್ದಾರೆ. ಅಲ್ಲದೇ ಇಬ್ಬರೂ ಪ್ರತ್ಯೇಕವಾಗಿ ನೀಡಿದ ಹೇಳಿಕೆಯಲ್ಲಿ ಖುಷಿಗಾಗಿ ಇಬ್ಬರೂ ಡ್ರಗ್ಸ್ ಸೇವನೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
  5. ಇದು ಆತನ ಶೂನಲ್ಲಿ ಇದ್ದ ಎರಡು ನಿಷೇಧಿತ ವಸ್ತುಗಳ ಬಗ್ಗೆ ಅರಿವು ಹೊಂದಿದ್ದ ಎಂಬುದನ್ನು ತೋರಿಸುತ್ತದೆ ಎಂದು ಕೋರ್ಟ್ ಜಾಮೀನು ನಿರಾಕರಣೆ ವೇಳೆ ಹೇಳಿದೆ.

The post ಆರ್ಯನ್​ಖಾನ್​ಗೆ ಮುಳುವಾಯ್ತು ವಾಟ್ಸ್​ಆ್ಯಪ್ ಚಾಟ್..! ಕೋರ್ಟ್ ಜಾಮೀನು ನೀಡದಿರಲು ಕಾರಣ ಏನು..? appeared first on News First Kannada.

News First Live Kannada

Leave a comment

Your email address will not be published. Required fields are marked *