ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ | Shah rukh khan may Assign His Bodyguard Ravi Singh to Protect Aryan Khan


ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ

ಶಾರುಖ್​ ಕುಟುಂಬ

ಶಾರುಖ್​ ಖಾನ್ (Shah Rukh Khan)​ ಮಗ ಆರ್ಯನ್​ ಖಾನ್ (Aryan Khan)​ ಮುಖಪರಿಚಯ ಅಷ್ಟಾಗಿ ಇರಲಿಲ್ಲ. ಹೀಗಾಗಿ, ಆರ್ಯನ್​ ಸಾಕಷ್ಟು ಕಡೆಗಳಲ್ಲಿ ಬಾಡಿಗಾರ್ಡ್​ ಇಲ್ಲದೆ ಫ್ರೆಂಡ್ಸ್ ಜತೆ ಓಡಾಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಆರ್ಯನ್​ ಖಾನ್​ ಎಂದರೆ ಎಲ್ಲರಿಗೂ ಗೊತ್ತಾಗಿದೆ. ಡ್ರಗ್​ ಕೇಸ್​ನಲ್ಲಿ (Bollywood Drug Case) ಸಿಕ್ಕಿ ಬಿದ್ದು ಅವರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಈ ಕಾರಣಕ್ಕೆ ಅಕ್ಟೋಬರ್​ ತಿಂಗಳಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ಕಾರಣಕ್ಕೆ ಅವರು ಈಗ ಒಬ್ಬಂಟಿಯಾಗಿ ಹೊರಗೆ ತಿರುಗಾಡುವಂತಿಲ್ಲ. ಅವರು ಹೊರ ಬಂದರೆ ಸಾಕು ಮಾಧ್ಯಮಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಈ ಕಾರಣಕ್ಕೆ ಆರ್ಯನ್​ಗೆ ಬಾಡಿಗಾರ್ಡ್​ ನೇಮಕ ಮಾಡೋದು ಶಾರುಖ್​ಗೆ ಅನಿವಾರ್ಯವಾಗಿದೆ. ಹೀಗಾಗಿ, ಅವರು ಈಗ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಶಾರುಖ್​ ಖಾನ್​ ಅವರು ‘ಪಠಾಣ್​’  ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್​ ಶೂಟಿಂಗ್​ಗೆ ಅವರು ವಿದೇಶಕ್ಕೆ ತೆರಳಬೇಕಿತ್ತು. ಆದರೆ, ಆರ್ಯನ್​ ಜೈಲಿನಲ್ಲಿ ಇದ್ದಿದ್ದರಿಂದ ಅದು ಸಾಧ್ಯವಾಗಿಲ್ಲ. ಈಗ ಅವರು ಸಿನಿಮಾ ಕೆಲಸಕ್ಕೆ ಮರಳಬೇಕಿದೆ. ಅದಕ್ಕೂ ಮೊದಲು ಆರ್ಯನ್​ಗೆ ಬಾಡಿಗಾರ್ಡ್​ ನೇಮಕ ಮಾಡೋದು ಶಾರುಖ್​ಗೆ ಅನಿವಾರ್ಯ. ಹೀಗಾಗಿ, ಶಾರುಖ್​ ಮಹತ್ವದ ನಿರ್ಧಾರ ತೆಗೆದುಕೊಳ್ಳೋಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ 10 ವರ್ಷಗಳಿಂದಲೂ ಶಾರುಖ್​ ಖಾನ್​ಗೆ ಬಾಡಿಗಾರ್ಡ್​ ಆಗಿ ರವಿ ಸಿಂಗ್​ ಕೆಲಸ ಮಾಡುತ್ತಿದ್ದಾರೆ. ಶಾರುಖ್​ ಎಲ್ಲಿಯೇ ಹೋದರು ಅವರ ಜತೆ ರವಿ ಇರುತ್ತಾರೆ. ಎಷ್ಟೇ ದೊಡ್ಡ ಗುಂಪಿದ್ದರೂ ಶಾರುಖ್​ ಖಾನ್​ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಕೆಲಸವನ್ನು ರವಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈಗ ಆರ್ಯನ್​ ಜತೆ ರವಿ ಸಿಂಗ್​ ಅವರನ್ನು ಬಿಟ್ಟು, ತಾವು ಹೊಸ ಬಾಡಿಗಾರ್ಡ್ ಹುಡುಕಲು ಶಾರುಖ್​ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಶಾರುಖ್​ ಖಾನ್ ಅವರು ರವಿಗೆ​ ವರ್ಷಕ್ಕೆ 2.7 ಕೋಟಿ ರೂ. ಸಂಬಳ ನೀಡುತ್ತಾರೆ. ಅತಿ ಹೆಚ್ಚು ಸಂಬಳ ಪಡೆಯುವ ಬಾಡಿಗಾರ್ಡ್​ ಎಂಬ ಖ್ಯಾತಿ ರವಿ ಅವರದ್ದು. ಈಗ ಅವರು ಆರ್ಯನ್​ ಬಾಡಿಗಾರ್ಡ್​ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎಲ್ಲರ ಜತೆ ಮಾತನಾಡುವುದನ್ನೇ ನಿಲ್ಲಿಸಿದ ಆರ್ಯನ್​ ಖಾನ್? ಜೈಲುವಾಸದಿಂದ ಆಘಾತ 

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

TV9 Kannada


Leave a Reply

Your email address will not be published. Required fields are marked *